ನನ್ನ ಬಗ್ಗೆ ತಿಳಿಯಬೇಕೆ ?
- ಬದರೀನಾಥ ಆಲೂರು
- A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.
Thursday, 30 September 2010
POSITIVE THINKING ಅಂದ್ರೆ ?
ನಮ್ಮ ಯೋಚನೆಯ ಧಾಟಿ ಯಾವತ್ತಿಗೂ ಋಣಾತ್ಮಕವಾಗಿ ಇರಬಾರದು, ಧನಾತ್ಮಕವಾಗಿ ಇರಬೇಕು. ಇದರಿಂದ ಏನು ಬೇಕಾದರೂ ಗಳಿಸಲು ಸಾಧ್ಯ. ಅಷ್ಟಕ್ಕೂ positive thinking ಅಂದರೆ ಏನು ? ನಿಮಗೆ ತಿಳಿದಿದೆಯೇ ? ಎಲ್ಲವೂ ನಮ್ಮ ವಿಚಾರ ಲಹರಿಯ ಮೇಲೆ ಅವಲಂಬಿಸಿರುತ್ತದೆ! ಒಮ್ಮೆ ಹಾಗೆ ಕಲ್ಪಿಸಿಕೊಳ್ಳಿ.. ನಮ್ಮ ಎಲ್ಲಾ ವಿಚಾರಗಳು ಹೀಗಿದ್ದರೆ ಹೇಗೆ ಎಂದು !
ಸಂಬಳ ಕಡಿಮೆ ಎಂದು ಕೊರಗುವ ಬದಲು ಅದರಲ್ಲೇ ತೃಪ್ತಿ ಪಟ್ಟುಕೊಂಡು ಅಂದವಾಗಿ ಬದುಕುವುದು!,
ಈಗಾಗಲೇ ಹೆಸರುವಾಸಿಯಾಗಿರುವ companyಯಲ್ಲೇ ಕೆಲಸಕ್ಕೆ ಸೇರಬೇಕೆಂದು ಹಠಕ್ಕೆ ಬೀಳುವ ಬದಲು ಸೇರಿದ companyಯನ್ನೇ ಉನ್ನತ ಮಟ್ಟಕ್ಕೆ ಏರಿಸಬೇಕೆಂದು ಪಣ ತೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವುದು! ಇವೆಲ್ಲ positive thinkingಗೆ ಉತ್ತಮ ಉದಾಹರಣೆಯಾಗಬಲ್ಲವು ಅಲ್ವೇ ? ಹಾಗೇ, ಹೊಸ ಬಟ್ಟೆ ಕೊಳ್ಳಲೂ ಆಗುತ್ತಿಲ್ಲ ಎಂದು ಯೋಚಿಸುತ್ತ ಕೂರುವ ಬದಲು ಇರುವ ಬಟ್ಟೆಗಳನ್ನೇ ಶುಭ್ರವಾಗಿ ಇಟ್ಟುಕೊಂಡು ಧರಿಸುವುದು ಮನಸ್ಸಿಗೆ ತೃಪ್ತಿ ಕೊಡುವ ವಿಚಾರವಲ್ಲವೇ?! ನಮ್ಮ ಸುತ್ತಲ ಪರಿಸರ ಚನ್ನಾಗಿ ಇರಬೇಕೆಂದು ಬಯಸುವುದು ತಪ್ಪಲ್ಲ, ಆದರೆ, ಹಾಗೇ ಪರಿಸರ ಚನ್ನಾಗಿ ಇರಬೇಕಾದರೆ ನಾನೇನು ಮಾಡಲು ಸಾಧ್ಯ ಎಂದು ಚಿಂತಿಸಿ ಅದನ್ನು ಸಾಕಾರಗೊಳಿಸಲು ಯತ್ನಿಸಿದರೆ ಇನ್ನೂ ಉತ್ತಮ ಅಲ್ಲವೇ?!
ಕನ್ಯಾಕುಮಾರಿಯ ತುತ್ತ ತುದಿಯಲ್ಲಿ ನಿಂತುಕೊಂಡು, ದಕ್ಷಿಣದ ಕಡೆ ತಿರುಗಿ ಇಲ್ಲಿಗೆ ಭಾರತ ಮುಗಿಯಿತು ಎಂದು ಕೊರಗುವ ಬದಲು, ಉತ್ತರದ ಕಡೆ ತಿರುಗಿ , ಇಲ್ಲಿಂದ ಭಾರತ START ಎಂದು ಯೋಚಿಸುವುದು ಎಷ್ಟು ಚೆನ್ನ ಅಲ್ವ ?! :)
ನಮಗಿರುವ ಶಕ್ತಿಯಲ್ಲೇ, ನಮಗಿರುವ ಇತಿಮಿತಿಯಲ್ಲೇ ಎಲ್ಲವನ್ನೂ "The Best" ಮಾಡಲು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಪ್ರಯತ್ನಿಸುವುದು ಉತ್ತಮ ಸಮಾಜದ ಉತ್ತಮ ಬೆಳವಣಿಗೆ ಎಂದು ನನ್ನ ಅನಿಸಿಕೆ! ಈ "The Best" ಸಾಮ್ರಾಜ್ಯ ಅನ್ನೋದು ಇದೆಯಲ್ಲ!, ಅದು ಹೊರಗಿನ ಯಾವುದೇ ಸಾಧನ, ಸಲಕರಣೆಗಳಿಂದ ನಿರ್ಮಾಣವಾಗುವಂಥದ್ದು ಅಲ್ಲ! ಮನಸ್ಸೇ ಅದರ ಉಗಮ ಸ್ಥಾನ! ಅಲ್ಲೇ ಅದರ ಸಂಪೂರ್ಣ ಯಾನ ಕೂಡ :) ಅದೇ ನಮ್ಮಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಚಿಂತನೆಗಳು ಹರಿಯುವಂತೆ ಮಾಡುತ್ತದೆ! ಅದು ಶುದ್ಧವಾಗಿದ್ದರೆ, ಕೇವಲ ಧನಾತ್ಮಕೆ ಚಿಂತನೆಗಳು ಹರಿಯುತ್ತವೆ! ಮೊದಲು ಮನಸ್ಸನ್ನು ಶುದ್ಧೀಕರಿಸಿ! ನಂತರ ಪ್ರಯತ್ನಿಸಿ! ಯಶಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯತ್ನ ಮಾಡಬೇಡಿ. ಸುಮ್ಮನೆ ಪ್ರಯತ್ನಮಾಡುವುದಷ್ಟೇ ನಿಮ್ಮದಾಗಿರಲಿ! :) ಆದರೆ ನಾವು ಮಾಡುವ ಎಲ್ಲಾ ಪ್ರಯತ್ನಗಳು ನಿಖರವಾಗಿರಬೇಕು! ಪರಿಪೂರ್ಣವಾಗಿರಬೇಕು. ಕೊನೆಯ ಪಕ್ಷ, ಪರಿಪೂರ್ಣವಾಗಿರಲು ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕು! ಆಗ ನೋಡಿ ನಿಮ್ಮ ಹಿಂದೆಯೇ ಯಶಸ್ಸು ಹಿಂಬಾಲಿಸುತ್ತದೆ. ಇಷ್ಟೇ ಕಣ್ರೀ ಯಶಸ್ಸಿನ ಸೂತ್ರ :)
ಒಂದು ಗಮನದಲ್ಲಿ ಇರಲಿ, ಎಲ್ಲಾ ಪ್ರಾಮಾಣಿಕ ಪ್ರಯತ್ನಗಳಿಗೆ ವಿಘ್ನಗಳು ಇದ್ದೆ ಇರುತ್ತವೆ. ಅವೆಲ್ಲ ಕೇವಲ ನಮ್ಮ ಸತ್ವ ಪರೀಕ್ಷೆ! ದೇವರು ನಡೆಸುವ ಪರೀಕ್ಷೆ ಎಂದು ತಿಳಿಯಿರಿ. ಅದರಲ್ಲಿ pass ಆಗೋದು ಸುಲಭ ಅಲ್ಲ ಆದರೆ ಮನಸ್ಸು ಮಾಡಿದರೆ ಕಷ್ಟವೇನಿಲ್ಲ. ಅಂಥ ವಿಘ್ನಗಳು ಎದುರಾದಾಗ ಕುಗ್ಗುವ ಬದಲು, ಹೊಸ ಉತ್ಸಾಹದಿಂದ ವಿಘ್ನಗಳೊಡನೆ ಹೋರಾಡಲು ಸಜ್ಜಾಗಿ :) ಅಷ್ಟೇ ಸುಮ್ಮನೆ ಒಮ್ಮೆ ಘರ್ಜಿಸಿ, ವಿಘ್ನಗಳು ಹೆದರಿಕೊಂಡು ಪಲಾಯನ ಮಾಡುತ್ತವೆ :) ಎಂದಿಗೂ ಆತ್ಮವಿಶ್ವಾಸ ಕಳೆದು ಕೊಳ್ಳಬೇಡಿ. ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸಿ ಮುನ್ನುಗ್ಗಿ ಗುರಿ ತಲುಪುವ ತನಕ , ಕೊನೆ ಉಸಿರು ಇರುವ ತನಕ :P
ಎಲ್ಲರಿಗೂ ಅವರವರ ಆಸೆಗಳು ಆಕಾಂಕ್ಷೆಗಳು ಗುರಿಗಳು ಸಾಧನೆಗಳು "ಆ"ಗಳು "ಈ"ಗಳು ಒಟ್ಟಿನಲ್ಲಿ "ಅ"ಗಳು ಇಂದ ಹಿಡಿದು "ಳ"ಗಳು ವರೆಗೆ ಎಲ್ಲವೂ ಸಿಧ್ಧಿಸಲಿ :)
ALL THE VERY BEST :)
--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«
Wednesday, 29 September 2010
ಮನಸ್ಸು :)
ನಮ್ಮ ಇಂದ್ರಿಯಗಳಲ್ಲಿ ಪ್ರಮುಖವಾದದ್ದು ಮನಸ್ಸು. ಇದು ಆಂತರಿಕ ಇಂದ್ರಿಯ. ನಿಜವಾಗಿ ನೋಡಿದರೆ ಉಳಿದೆಲ್ಲ ಇಂದ್ರಿಯಗಳಿಗೆ ಇರುವಂತೆ ಈ ಮನಸ್ಸಿಗೆ ಒಂದು physical existance ಇಲ್ಲ. ಆದರೂ ಉಳಿದೆಲ್ಲ ಬಾಹ್ಯೆಂದ್ರಿಯಗಳಿಗೆ boss ಇದ್ದ ಹಾಗೆ ಈ ಮನಸ್ಸು.ಇದು ಹೇಳಿದಂತೆ ಎಲ್ಲಾ ಇಂದ್ರಿಯಗಳೂ ಕೇಳಬೇಕು. ನೋಡು ಎಂದರೆ ನೋಡಬೇಕು, ಬೇಡ ಅಂದರೆ ಬಿಡಬೇಕು. ಕುಳಿತ ಜಾಗದಲ್ಲಿಯೇ ಇದ್ದು ಇಡೀ ಪ್ರಪಂಚವನ್ನೇ ಸುತ್ತಿಬರಬಹುದು. ಎಲ್ಲವನ್ನೂ ಕ್ಷಣದಲ್ಲಿ ನೋಡಬಹುದು. ಎಲ್ಲದಕ್ಕೂ ಮನಸ್ಸು ಕಾರಣ :) ಅದನ್ನೇ ಗಾಂಧೀಜಿಯ ಮೂರು ಕೋತಿಗಳು ಪ್ರತಿಬಿಂಬಿಸುತ್ತವೆ. ಇದೇ ಕಾರಣಕ್ಕಾಗಿ ಮನಸ್ಸು ಕೋತಿಯಂತೆ ಎಂದು ಎಲ್ಲರೂ ಹೇಳುತ್ತಾರೆ...
ನಿಜ, ಮನಸ್ಸು ಒಂದು ದೊಡ್ಡ ಗಡವ :) ಬೇಡ ಅಂದಿದ್ದನ್ನೇ ಮಾಡಲು ಬಯಸುತ್ತದೆ. ಕೆಟ್ಟದರ ಕಡೆಗೇ ಹೆಚ್ಚು ಹೋಗುತ್ತದೆ. ಅದು ಏಕೆ ಹಾಗೆ ? ವಿಚಾರ ಮಾಡಲು ಹೋದರೆ ಮನಸ್ಸು ಬಿಡುತ್ತಿಲ್ಲ. ಹೇಗಾದರೂ ಮನಸ್ಸು ಮಾಡಿ ಅದನ್ನು ತಿಳಿಯಲೇ ಬೇಕು ಅಂತ ಪ್ರಯತ್ನ ಪಟ್ಟೆ. ಕೊನೆಗೆ ತಿಳಿದಿದ್ದು ಏನೆಂದರೆ, "ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಅನ್ನೋ ಗಾದೆ. ಅರ್ಥ ಆಗ್ಲಿಲ್ಲ ಅಲ್ವ...? ಮನಸ್ಸು ಕೊಟ್ಟು ಓದ್ರೀ ಅರ್ಥ ಆಗತ್ತೆ.
ಒಳ್ಳೆತನ ಬೆಳೆಸಿಕೊಳ್ಳೋದಕ್ಕೆ ಸಾವಿರಾರು ವಿಘ್ನಗಳು, ಸಾವಿರಾರು ಅಡೆತಡೆಗಳು ಇದ್ದೆ ಇರತ್ತೆ. ಅದನ್ನೆಲ್ಲ ಮೆಟ್ಟಿ ನಿಲ್ಲಬೇಕು ಅಂದ್ರೆ ಅವನಿಗೆ ಒಂದು strong ಆದ ಮನಸ್ಸು ಇರಬೇಕು. ಅಂದ್ರೆ ಆ ಮನಸ್ಸು ಗಟ್ಟಿಯಾಗಿ ಇರಬೇಕು. ಎಂತಹ ಪರಿಸ್ಥಿತಿಯಲ್ಲೂ ಆ ಮನಸ್ಸು ಕುಗ್ಗಬಾರದು. ಆದರೆ ಅದೇ ಒಬ್ಬ ಮನುಷ್ಯ ಹಾಳಾಗೋದು ಎಷ್ಟು ಸುಲಭ ಅಲ್ವ ? ಹಾಳಾಗೋದಕ್ಕೆ ಲಕ್ಷಾಂತರ ದಾರಿಗಳು. ಎಲ್ಲಾ ಕಡೆಯೂ ಮನಸ್ಸು ಎಳೆಯುತ್ತದೆ. ಏಕೆಂದರೆ ಮನಸ್ಸು ಕಷ್ಟ ಪಡುವುದಕ್ಕೆ ಇಷ್ಟ ಪಡುವುದಿಲ್ಲ. ಸುಲಭವಾಗಿ ದುಷ್ಟತನದ ಬಲೆಗೆ ಮನಸ್ಸು ಬೀಳುತ್ತದೆ. ದುರ್ಬಲ ಮನಸ್ಸು ಇದ್ದರಂತೂ ಮುಗಿಯಿತು, ಸಂಪೂರ್ಣ ಬದುಕೇ ಹಾಳಾಗಬಹುದು. ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಆ ಮನಸ್ಸು.
ಅದಕ್ಕೆ ಮನೋನಿಗ್ರಹ ಮುಖ್ಯ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಏನೆಲ್ಲಾ ಸಾಧಿಸಬಹುದು. ಆದರೆ ಅದನ್ನು ಹೇಗೆ control ಮಾಡುವುದು ? ಇದೊಂದು ಗಂಭೀರ ಪ್ರಶ್ನೆ!
ಹಲವಾರು ದಾರಿಗಳಿವೆ. ಯೋಗ ಧ್ಯಾನ ಏಕಾಗ್ರಚಿತ್ತತೆಯನ್ನು ಹೆಚ್ಚಿಸುತ್ತವೆ. ಇದರಿಂದ ಮನಸ್ಸು ನಿಮ್ಮ ಹಿಡಿತಕ್ಕೆ ಬರುತ್ತದೆ!
( ನನ್ನ ಅನುಭವ ಅಲ್ಲ, ಕೇಳಿದ್ದು ). ಒಮ್ಮೆ ಈ ರೀತಿ ಪ್ರಯತ್ನ ಮಾಡಲು ಮನಸ್ಸು ಮಾಡಿ :) ಇರಲಿ ಸುಮ್ಮನೆ ಏನೋ ಹೇಳಿತು ಮನಸ್ಸು,
ಅದ್ಕೆ ಈ ಲೇಖನ. ಓದಿದಮೇಲೆ ದೊಡ್ಡ ಮನಸ್ಸು ಮಾಡಿ ನಿಮ್ಮ ಸಂದೇಶಗಳನ್ನು ತಿಳಿಸಿ :)

Subscribe to:
Posts (Atom)