ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Tuesday, 23 November 2010

A Small Message to Youth! :)

This is a powerful message in our modern society. We seemed to have lost our bearing & our sense of direction.

One young academically excellent person went to apply for a managerial position in a big company. He passed the first interview, the director did the last interview, made the last decision. The director discovered from the CV that the youth's academic achievements were excellent all the way, from the secondary school until the postgraduate research, never had a year when he did not score.

The director asked, "Did you obtain any scholarships in school?",
the youth answered "none".

The director asked, " Was it your father who paid for your school fees?" 
The youth answered, "My father passed away when I was one year old, it was my mother who paid for my school fees".

The director asked, " Where did your mother work?"
The youth answered, "My mother worked as clothes cleaner".

The director requested the youth to show his hands. The youth showed a pair of hands that were smooth and perfect.

The director asked, " Have you ever helped your mother wash the clothes before?"
The youth answered, "Never, my mother always wanted me to study and read more books. Furthermore, my mother can wash clothes faster than me".

The director said, "I have a request. When you go back today, go and clean your mother's hands, and then see me tomorrow morning.

The youth felt that his chance of landing the job was high. When he went back, he happily requested his mother to let him clean her hands. His mother felt strange, happy but with mixed feelings, she showed her hands to the kid.

The youth cleaned his mother's hands slowly. His tear fell as he did that. It was the first time he noticed that his mother's hands were so wrinkled, and there were
so many bruises in her hands. Some bruises were so painful that his mother
shivered when they were cleaned with water.

This was the first time the youth realized that it was this pair of hands that washed the clothes everyday to enable him to pay the school fee. The bruises in the mother's hands were the price that the mother had to pay for his graduation, academic excellence and his future.
 
After finishing the cleaning of his mother hands, the youth quietly washed all the remaining clothes for his mother.

That night, mother and son talked for a very long time.

Next morning, the youth went to the director's office.

The Director noticed the tears in the youth's eyes, asked: " Can you tell me what have you done and learned yesterday in your house?"
The youth answered, " I cleaned my mother's hand, and also finished cleaning all the remaining clothes"

The Director asked, " please tell me your feelings."
The youth said, Number 1, I know now what is appreciation. Without my mother, there would not the successful me today. Number 2, by working together and helping my mother, only I now realize how difficult and tough it is to get something done. Number 3, I have come to appreciate the importance and value of family relationship.

The director said, " This is what I am looking for to be my manager. I want to recruit a person who can appreciate the help of others, a person who knows the sufferings of others to get things done, and a person who would not put money as his only goal in life. You are hired.

Later on, this young person worked very hard, and received the respect of his subordinates. Every employee worked diligently and as a team. The company's performance improved tremendously.

A child, who has been protected and habitually given whatever he wanted, would develop "entitlement mentality" and would always put himself first. He would be ignorant of his parent's efforts. When he starts work, he assumes that every person must listen to him, and when he becomes a manager, he would never know the sufferings of his employees and would always blame others. For this kind of people, who may be good academically, may be successful for a while, but eventually would not feel sense of achievement. He will grumble and be full of hatred and fight for more. If we are this kind of protective parents, are we really showing love or are we destroying the kid instead?
 
You can let your kid live in a big house, eat a good meal, learn piano, watch a big screen TV. But when you are cutting grass, please let them experience it. After a meal, let them wash their plates and bowls together with their brothers and sisters. It is not because you do not have money to hire a maid, but it is because you want to love them in a right way. You want them to understand, no matter how rich their parents are,one day their hair will grow gray, same as the mother of that young person. The most important thing is your kid learns how to appreciate the effort and experience the difficulty and learns the ability to work with others to get things done.

Friday, 12 November 2010

ದೇವರಿದ್ದಾನೆಯೇ? ಒಂದು ವೈಜ್ಞಾನಿಕ ದೃಷ್ಟಿಕೋನ!

ಈ ಅಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವಿಚಾರವಂತ ಮನುಷ್ಯನಿಗೂ ಒಂದಲ್ಲ ಒಂದು ದಿನ ಈ ಪ್ರಶ್ನೆ ಬಂದಿರಲೇ ಬೇಕು.
ದೇವರು ಇದ್ದಾನೆಯೋ ಇಲ್ಲವೋ!? ಆಳವಾಗಿ ಯೋಚಿಸುತ್ತ ಹೋದರೆ, ನಮ್ಮ ಸುತ್ತಮುತ್ತಲಿನ ಪ್ರಪಂಚ, ಜೀವಿಗಳು ಎಲ್ಲವನ್ನೂ ನೋಡುತ್ತಿದ್ದರೆ ನಮಗೆ ದೇವರು ಇದ್ದಾನೆ ಎಂಬುದು ನಿಶ್ಚಯವಾಗುತ್ತದೆ. ಕೇವಲ ಕಣ್ಣಿಗೆ ಅಗೋಚರ ಆದ ಕಾರಣಕ್ಕೆ ದೇವರ ಅಸ್ತಿತ್ವವನ್ನು ಅಲ್ಲಗೆಳೆಯುವುದು ತಪ್ಪು! ದೇವರ ಇರುವಿಕೆಯ ಬಗ್ಗೆ, ದೇವರ ಬಗ್ಗೆ ಹಲವಾರು ಶಾಸ್ತ್ರಗಳು ಪುರಾಣಗಳು ಒಂದು ಕಡೆ ಪ್ರಮಾಣಗಳಾಗಿದ್ದರೂ, ಹಲವಾರು ಜನರು ತಪ್ಪಾಗಿ ತಿಳಿಯುವಂತೆ ವಿಜ್ಞಾನ ಎನ್ನುವುದು ದೇವರ ಅಸ್ತಿತ್ವಕ್ಕೆ ವಿರುದ್ಧವಾಗಿಲ್ಲ. ವಿಜ್ಞಾನವೂ ಕೂಡ ದೇವರ ಅಸ್ತಿತ್ವದ ಬಗ್ಗೆ ಒತ್ತಿ ಒತ್ತಿ ಹೇಳುತ್ತದೆ/ಹೇಳುತ್ತಿದೆ! ದೇವರು ಇದ್ದಾನೆ ಎಂಬುದನ್ನ ಪ್ರತಿಯೊಬ್ಬ ಪ್ರಮುಖ ವಿಜ್ಞಾನಿಯೂ ನಿಖರವಾಗಿ ಒಪ್ಪಿದ್ದಾನೆ! ಇದನ್ನು ನಂಬುವುದೂ ಕಷ್ಟವಾಗುತ್ತದೆ! ವಿಜ್ಞಾನ-ಧರ್ಮ ಈ ಎರಡೂ ಒಟ್ಟಿಗೆ ಹೆಜ್ಜೆ ಇಡುತ್ತಿದ್ದರೂ, ಅರೆ ತಿಳುವಳಿಕೆ ಹೊಂದಿದ  (ಅತ್ತ ವಿಜ್ಞಾನವನ್ನೂ ಸರಿಯಾಗಿ ತಿಳಿಯದ, ಇತ್ತ ಧರ್ಮವನ್ನೂ ಸರಿಯಾಗಿ ಅರ್ಥೈಸಿಕೊಳ್ಳದ) ಮಧ್ಯಸ್ಥರು ಅಪಪ್ರಚಾರ ಮಾಡಿ ಜಗಳಕ್ಕೆ ನಾಂದಿ ಹಾಡುತ್ತಿದ್ದಾರೆ!

ನನ್ನ ಸ್ನೇಹಿತನಾದ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿ, ಲಕ್ಷ್ಮೀಶನು ಬಹಳ ಸುಂದರವಾಗಿ ಪ್ರಮಾಣಗಳ ಸಹಿತವಾಗಿ ವಿವರವಾಗಿ ಅಧ್ಯಯನ ಮಾಡಿ, ಅದನ್ನ ಗುರುಗಳ ಮುಂದೆ present ಮಾಡಿದ್ದಾನೆ. ಅದರ video ಅನ್ನು ಈ post ನಲ್ಲಿ ಹಾಕುತ್ತಿದ್ದೇನೆ. ಎಲ್ಲ ಆಸ್ತಿಕ ಬಂಧುಗಳು ಅದನ್ನು ನೋಡಿ ದೇವರ ಅಸ್ತಿತ್ವದ ವಿಷಯದಲ್ಲಿ ಏನಾದರೂ ಸಂಶಯಗಳಿದ್ದರೆ ಪರಿಹರಿಸಿಕೊಳ್ಳಬೇಕು. 

Thursday, 4 November 2010

ದೀಪಾವಳಿಯ ಹಾರ್ದಿಕ ಶುಭಾಷಯಗಳು :)

ನಾವು ದೈನಂದಿನ ಬದುಕಿನಲ್ಲಿ ಪಟಾಕಿಯಾಗುವುದರ ಬದಲು, ದೀಪವಾಗಲು ಪ್ರಯತ್ನಿಸೋಣ!
ಪಟಾಕಿ ಒಮ್ಮೆ ಸಿಡಿದು ಕ್ಷಣಿಕ ಸಂತೋಷ ಕೊಟ್ಟರೂ ಮಾಲಿನ್ಯ ಉಂಟು ಮಾಡುತ್ತದೆ!
ಆದರೆ ದೀಪ ಸದಾ ಬೆಳಕನ್ನು ನೀಡುತ್ತಾ ಕತ್ತಲನ್ನು ಹೋಗಲಾಡಿಸುತ್ತದೆ!
ಎಲ್ಲರಿಗೂ ಹಾರ್ದಿಕ ಶುಭಾಷಯಗಳು :)


ಸಡಗರದ ದೀಪಾವಳಿಯನ್ನು ಆಚರಿಸೋಣ. ಎಲ್ಲರಿಗೂ ಶುಭವಾಗಲಿ! :)

Sunday, 31 October 2010

ಸಿರಿಗನ್ನಡಂ ಗೆಲ್ಗೆ :)

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು :)
ಜೈ ಕರ್ನಾಟಕ ಮಾತೆ :)

Thursday, 28 October 2010

ಕಣ್ಣ ಬಿಂದುಗಳು! :'(




ನನ್ನ ಬದುಕು., ಕನಸುಗಳು
ಚೂರಾದ ಮೇಲೆ...
ಮಣ್ಣಲ್ಲಿ ಹುಡುಕಿ ಕೆದಕಿ., ಹೃದಯ
ಸಾವಿರ ಹೋಳಾದ ಮೇಲೆ...
ಕಣ್ಣಂಚಿನ ನೀರ ಬಿಂದುಗಳು.,
ತುಟಿಯಂಚಿಗೆ ಬಂದ ಮೇಲೆ...
ರಂಧ್ರದಿಂದ ಒಳ ನುಗ್ಗುವ,.
ಸೂರ್ಯನ ಬೆಳಕಿನಂತೆ...
ಮೂಡುವುದೇ ಆಶಾಕಿರಣ?!
ಕನಸುಗಳನ್ನು ನನ್ನ ಮುಷ್ಟಿಯಲ್ಲಿ.,
ತುಂಬಿಕೊಳ್ಳುವ ಬಯಕೆ...!
ಬಯಕೆ... ಹಾಂ!!! ಆದರೆ.,
ಅದೊಂದು ಕೇವಲ ಮರೀಚಿಕೆ!!



--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

ಮನ ಸುಖಕ್ಕೆ ೧೨ ಸೂತ್ರಗಳು! :)




 ಎಲ್ಲರೊಡನೆ ಸ್ನೇಹದಿಂದಿರಿ. ಅರ್ಥ ಮಾಡಿಕೊಳ್ಳಿ. ಇತರರಿಂದ ನಿರೀಕ್ಷೆಗಳನ್ನು ಕಡಿಮೆ ಮಾಡಿ!

ನಿರಾಶವಾದ ಬೇಡ. ಭರವಸೆ ಇರಲಿ. ಎಲ್ಲದರಲ್ಲಿ ಮತ್ತು ಎಲ್ಲರಲ್ಲಿ ಒಳ್ಳೆಯದನ್ನು ಕಾಣಿ!

ಅಗತ್ಯಗಳನ್ನು ತಗ್ಗಿಸಿ. ಸರಳ, ತೃಪ್ತಿ ಮತ್ತು ಸುಖ ಜೀವನ ಮಾಡಿ!

ವರ್ತಮಾನ ಮುಖ್ಯ. ನಿನ್ನೆ ಮತ್ತು ನಾಳೆಯ ಬಗ್ಗೆ ಚಿಂತೆ ಬೇಡ. ವಾಸ್ತವ ಒಪ್ಪಿಕೊಂಡು ಹೊಂದಿಕೊಳ್ಳಿ!

ಒಂಟಿಯಾಗಿರದೆ ಜನರೊಂದಿಗೆ ಬೆರೆಯಿರಿ. ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆ ಹಮ್ಮಿಕೊಳ್ಳಿ!

ನಿಮ್ಮ ಭಾವನೆ - ಅನಿಸಿಕೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ನಿಮ್ಮ ಪರಿಸರ ಚನ್ನಾಗಿ ಇಟ್ಟುಕೊಳ್ಳಿ!

ಸಂಗೀತ, ಸಾಹಿತ್ಯ, ಯೋಗ, ಧ್ಯಾನ, ಕ್ರೀಡೆಗಳಂಥ ಸೃಜನಶೀಲ ಹವ್ಯಾಸಗಳು ನಿಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿರಲಿ!

ನಿಮ್ಮ ಜ್ಞಾನ - ಕೌಶಲಗಳನ್ನು ಉತ್ತಮ ಪಡಿಸಿಕೊಳ್ಳಿ. ಜೀವನ ಘಟನೆಗಳಿಗೆ ಸಿಧ್ಧತೆ ಮಾಡಿ, ಸರಿಯಾಗಿ ನಿಭಾಯಿಸಿ!

ಪಾಲಿಗೆ ಬಂದದ್ದನ್ನು ತೃಪ್ತಿಯಿಂದ ಸ್ವೀಕರಿಸಿ. ಹಲವು ಸಮಸ್ಯೆಗಳಿದ್ದಾಗ ಒಂದೊಂದೇ ಸಮಸ್ಯೆಯನ್ನು ಸ್ನೇಹಿತರ ನೆರವಿನೊಂದಿಗೆ ನಿಭಾಯಿಸಿ!

ಸಾಧಿಸಬಹುದಾದ ಗುರಿಗಳಿರಲಿ. ಸದಾ ಕಾರ್ಯತತ್ಪರರಾಗಿರಿ!

ಸೊಪ್ಪು, ತರಕಾರಿ, ಹಾಲು-ಹಣ್ಣು ಇರುವ ಆಹಾರವನ್ನು ಹಿತಮಿತವಾಗಿ, ವೇಳೆ ವೇಳೆಗೆ ಸರಿಯಾಗಿ ಸೇವಿಸಿ!

ಶುಚಿತ್ವದ ಕಡೆ ಗಮನ ಕೊಡಿ. ನಿತ್ಯ ವ್ಯಾಯಾಮ ಮಾಡಿ. ವೈದ್ಯರ ಸಲಹೆ ಪಡೆಯಿರಿ!


--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

Wednesday, 27 October 2010

ಮಾನಸಿಕ ಸ್ವಾಸ್ಥ್ಯ :)

ಮತ್ತೊಮ್ಮೆ ಮನಸ್ಸಿನ ಬಗ್ಗೆ ಹೆಚ್ಚು ತಿಳಿಯಬೇಕೆಂಬ ಹುಚ್ಚು ಹೆಚ್ಚಾಗುತ್ತಿರುವಾಗ, ವಿಜಯಕರ್ನಾಟಕ ಪತ್ರಿಕೆಯಲ್ಲಿ
ಮನಸ್ಸಿನ ಬಗ್ಗೆ ಮತ್ತೊಂದು article ಇತ್ತು. ತುಂಬಾ ಹಿತಕರ ಹಾಗು ಈಗಿನ ಪರಿಸ್ಥಿತಿಗೆ ಹೆಚ್ಚು ಉಪಯುಕ್ತ ಅನ್ನಿಸ್ತು.
ಅದನ್ನ ನನ್ನ ಮಾತಿನಲ್ಲಿ ನಿಮ್ಮ ಮುಂದೆ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು... ಒಮ್ಮೆ ಓದಿರಿ! ಇಷ್ಟ ಆಗಬಹುದು!
 
ಕೆಲವೊಮ್ಮೆ ಹೀಗೆ ಯೋಚಿಸಿ ನೋಡಿ! ನೀವು ಆರೋಗ್ಯವಾಗಿದ್ದಿರಾ ? " ಓಹೋ " ಎಂಬುದು ನಿಮ್ಮ ಉತ್ತರವಾಗಿರಬಹುದು! ಆದರೆ... ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ., ಶಾರೀರಿಕವಾಗಿ , ಮಾನಸಿಕವಾಗಿ ಹಾಗು ಸಾಮಾಜಿಕವಾಗಿ ಸ್ವಾಸ್ಥ್ಯದಿಂದ ಇದ್ದೀರಾ?? ಈಗಿನ ಜಗತ್ತು, ಅದರ ಕ್ಷಿಪ್ರ ಬೆಳವಣಿಗೆ ಎಲ್ಲಾ ನೋಡಿದರೆ, ಕನಿಷ್ಠ ಪಕ್ಷ ಶಾರೀರಿಕವಾಗಿಯೂ ಮನುಷ್ಯರು ಸ್ವಾಸ್ಥ್ಯದಿಂದ ಇರಲಿಕ್ಕಿಲ್ಲ.

ಎಲ್ಲರೂ ಹೆಚ್ಚಾಗಿ ತಿಳಿದಿರುವಂತೆ ಕೇವಲ ತಿಂದು ಉಂಡು ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಲದು. ಹಲವರ ಕಲ್ಪನೆಯಂತೆ ಇದಷ್ಟೇ ಆರೋಗ್ಯವಲ್ಲ! ಮಾನಸಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ, ಆರ್ಥಿಕವಾಗಿ ಸ್ವಾಸ್ಥ್ಯದಿಂದ ಇದ್ದು ಪರಿಸರದೊಡನೆ ಹೊಂದಿಕೊಂಡು ಇರಬೇಕು. ಇದೇ ನಿಜವಾದ ಆರೋಗ್ಯ! ಈ ಆರೋಗ್ಯದಿಂದಲೇ ಯಶಸ್ಸು ಸಾಧ್ಯ! ಮೈ-ಮನಸ್ಸುಗಳು ಒಂದೇ ನಾಣ್ಯದ ಎರಡು ಮುಖಗಳು! ನಮ್ಮ ದೇಹದ ಎಲ್ಲಾ ಚಲನೆ ಚಟುವಟಿಕೆಗಳನ್ನು ನಮ್ಮ ಮನಸ್ಸು ನಿಯಂತ್ರಿಸುತ್ತದೆ. ದೇಹದ ಒಳ ಅಂಗಗಳ ಚಟುವಟಿಕೆಗಳು ಸ್ವಯಂಚಾಲಿತವಾದರೂ ನಮ್ಮ ಮನಸ್ಸು ಅವುಗಳ ಮೇಲೆ ಪ್ರಭಾವ ಬೀರಬಲ್ಲುದು! ಮೈ-ಮನಸ್ಸುಗಳ ಈ ಸಂಬಂಧ ಇನ್ನೂ ರಟ್ಟಾಗದಿರುವ  ಗುಟ್ಟು !! :)

ನಮ್ಮ ದೇಶದಲ್ಲಿ ನಡೆಸಲಾದ ಅನೇಕ ಅಧ್ಯಯನಗಳ ಪ್ರಕಾರ, ಮಾನಸಿಕ ಅಸ್ವಾಸ್ಥ್ಯಕ್ಕೆ ಬಡವ-ಶ್ರೀಮಂತ , ಹೆಣ್ಣು-ಗಂಡು , ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ. ಅಚ್ಚರಿ ಎನಿಸಬಹುದು. ಪ್ರತಿಯೊಬ್ಬ ಮನುಷ್ಯನೂ ಒಂದಿಲ್ಲ ಒಂದು ರೀತಿಯ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುತ್ತಾನೆ. ಬಹುಪಾಲು ಜನರಿಗೆ ಅದು ಗೊತ್ತಿರುವುದೇ ಇಲ್ಲ. ಇನ್ನು ಸೂಕ್ತ ಸಲಹೆ,ಚಿಕಿತ್ಸೆ ದೂರದ ಮಾತು!

ದುರಂತ!
ಇನ್ನೂ ದುರಂತವೆಂದರೆ, ಇವರು ಹೀಗೆಯೇ ಕಾಯಿಲೆ ಮತ್ತು ಅಜ್ಞಾನದಿಂದ ನರಳುತ್ತ , ತಮಗೆ , ಮನೆಯವರಿಗೆ ಹಾಗು ಸಮಾಜಕ್ಕೆ ಹೊರೆಯಗುತ್ತಾರೆ! ಅವರ ಬುಧ್ಧಿ ಮಟ್ಟ ಕಡಿಮೆ ಆಗುತ್ತಾ ಹೋಗುತ್ತದೆ! ಜೀವನದ ಮೇಲೆ ಜಿಗುಪ್ಸೆ  ಬಂದು ಅವರ ಜೀವನದ ಮಟ್ಟ ಕುಸಿದಿರುತ್ತದೆ! ಇವರು ವಿಚಿತ್ರ ವ್ಯಕ್ತಿಗಳು. (ನಾನೂ ವಿಚಿತ್ರನೇ ಬಿಡಿ!!!)... ಇವರಿಗೆ ಪ್ರಪಂಚ ಹಾಗು ಉಳಿದ ಜನರೆಲ್ಲಾ ವಿಚಿತ್ರವಾಗಿ ಕಾಣುತ್ತಾರೆ!

ಹಿಸ್ಟೆರಿಯ, ಉದ್ವಿಗ್ನತೆ, ನರದೌರ್ಬಲ್ಯ, ಚಿತ್ತದೌರ್ಬಲ್ಯ, ಖಿನ್ನತೆ, ಅಪಘಾತದ ಬಳಿಕ ಮನೋವಿಕಾರಗಳು, ಉನ್ಮಾದ, ವಿಷಾದ, ಅಪಸ್ಮಾರ, ಮಂಕುತನ, ನಿದ್ರಾಹೀನತೆ, ಕಾಮ ವಿಕಾರಗಳು ಇವೆಲ್ಲ ಮನೋರೋಗಗಳು! ದೀರ್ಘಕಾಲದ ಮನೋಕ್ಲೇಶ, ಮಾನಸಿಕ ಒತ್ತಡಗಳಿಂದ ಅಥವಾ ಅಹಿತಕಾರಿ ಹಾಗು ಆತಂಕವನ್ನುಂಟು ಮಾಡುವ ಪರಿಸರದಲ್ಲಿ ವಾಸಿಸುವುದರಿಂದ ಕಾಲಕ್ರಮೇಣ ದೇಹದ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ! ಇದಕ್ಕೆಲ್ಲ ಆನುವಂಶಿಕ ಅಂಶಗಳು, ವ್ಯಕ್ತಿಯ ಅಪೌಷ್ಟಿಕತೆ, ಜೀವನ ಶೈಲಿ, ರೋಗಕಾರಕ ಇತರ ಅಂಶಗಳೂ ಕುಮ್ಮಕ್ಕು ಕೊಡಬಹುದು! ಇಂಥಹ ರೋಗಗಳು ಮನಸ್ಸು-ದೇಹ ಎರಡನ್ನೂ ಹಾಳು ಮಾಡುತ್ತವೆ!

ಆದರೆ...

ಚಿಂತೆ ಬೇಡ. ಮನೋ ರೋಗಕ್ಕೆ ಮದ್ದಿಲ್ಲ ಎಂಬುದು ಎಷ್ಟೋ ಮಂದಿಯ ಮೂಢ ನಂಬಿಕೆ! ಮದ್ದುಂಟು! ವೈದ್ಯಕೀಯ ವಿಜ್ಞಾನದ ಮುನ್ನಡೆಯಿಂದಾಗಿ ಚಿಕಿತ್ಸಾ ತಜ್ಞರ ಪಡೆಯೇ ಇದೆ. ಇಂಥಹ ರೋಗಗಳಿಗೆ ಮದ್ದನ್ನು ನೀಡುವುದರ ಜೊತೆಗೆ, ಮನೋರೋಗಿಯನ್ನು ಸಂಬಂಧಿಸಿದ ಸರ್ವರೂ ಪ್ರೀತಿ, ಮಮತೆ, ವಾತ್ಸಲ್ಯದಿಂದ, ಮುದ್ದಿನಿಂದ, ಗೌರವದಿಂದ, ಹಾಗು ಹೆಚ್ಚಾಗಿ ಆತ್ಮವಿಶ್ವಾಸ ತುಂಬುವ ನಡವಳಿಕೆಯಿಂದ ಮನೋರೋಗಿಯನ್ನು ನೋಡಿಕೊಂಡರೆ ಆತ ಸ್ವಾಸ್ಥ್ಯವನ್ನು ಹೊಂದುತ್ತಾನೆ! ಅವನ ಮನಸ್ಸಿನ ಅಸ್ವಸ್ಥತೆಯ ಉರಿ ಆರಿ ಹೋಗಿ ಸ್ವಾಸ್ಥತೆಯ ಸಿರಿ ಅರಳುತ್ತದೆ :)
 
ಈ article ನ publish ಮಾಡುವ ಉದ್ದೇಶವೇನೆಂದರೆ, ಇದನ್ನು ಓದಿದ ಮೇಲೆ ಮನಸ್ಸಿಗೆ ಹಿತ ಅನ್ನಿಸಿ ಅವರಲ್ಲಿ ಆತ್ಮವಿಶ್ವಾಸದ ಚಿಗುರನ್ನು ಬೆಳೆಸುವುದು :)

God Bless You All :)
--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

Friday, 15 October 2010

A small inspiration towards Philosophy :)

People in 21st century do not trust/believe in what philosophy says. Here is the small story that enlightens our thinking and our mind :)  An old Farmer lived on a farm in the mountains with his young grandson. Each morning Grandpa was up early sitting at the kitchen table reading his Bhagavat Geeta. His grandson wanted to be just like him and tried to imitate him in every way he could.

One day the grandson asked, ‘Grandpa! I try to read the Bhagavat Geeta just like you but I don’t understand it, and what I do understand I forget as soon as I close the book. What good does reading the Bhagavat Geeta do?’

The Grandfather quietly turned from putting coal in the stove and replied, ‘Take this coal basket down to the river and bring me back a basket of water.’

The boy did as he was told, but all the water leaked out before he got back to the house. The grandfather laughed and said, ‘You’ll have to move a little faster next time,’ and sent him back to the river with the basket to try again.

This time the boy ran faster, but again the basket was empty before he returned home. Out of breath, he told his grandfather that it was impossible to carry water in a basket, and he went to get a bucket instead. The old man said, ‘I don’t want a bucket of water; I want a basket of water. You’re just not trying hard enough,’ and he went out the door to watch the boy try again.

At this point, the boy knew it was impossible, but he wanted to show his grandfather that even if he ran as fast as he could, the water would leak out before he got back to the house.

The boy again dipped the basket into river and ran hard, but when he reached his grandfather the basket was again empty. Out of breath, he said, ‘See Grandpa, it’s useless!’

‘So you think it is useless?’ The old man said, ‘Look at the basket.’

The boy looked at the basket and for the first time realized that the basket was different. It had been transformed from a dirty old coal basket and was now clean, inside and out.

‘Son, that’s what happens when you read the Bhagavat Geeta. You might not understand or remember everything, but when you read it, you will be changed, inside and out. That is the work of Lord Krishna in our lives.‘
 This article is collected from Vidyadheeshacharya Guttal :)

Wednesday, 6 October 2010

ನನ್ನ ತಂಗಿಯ ಕವನ!

 
ನಲ್ಮೆಯ ಅಣ್ಣನಿಗೆ , 
ಕೇಳು ನೀ ಈ ಮನದಾಳದ ಮಾತನ್ನ 
ಹೊತ್ತು ತಂದಿರುವೆ ಈ ದಿನ ಇದನ್ನ !

ಬಾಳ ಪಯಣದಲಿ ಜೊತೆಯಾದೆ ಒಳ್ಳೆ ಸ್ನೇಹಿತನಾಗಿ
ತಂಪನ್ ಎರೆದೆ ಅಣ್ಣನಾಗಿ
ದಾರಿ ದೀಪವಾದೆ  ಗುರುವಾಗಿ 
ಸದಾ ಮನದಲ್ಲಿರುವೆ ಪ್ರೀತಿಯ ಚಿಲುಮೆಯಾಗಿ 

ನಾ ಬಯಸುವೆ ನಗುವ ಚಿಲುಮೆಯ
ನೋವು ನಲಿವ ಹಂಚಿಕೊಂಡ ಹೃದಯವೇ
ಹಾಡಿದೆ ಹೃದಯ ಖುಷಿಯ ಸರಿಗಮ
ಇಂದು ನಿನಗೆ ಜನ್ಮ ದಿನದ ಶುಭಾಶಯ :) 


ನನ್ನ ಹುಟ್ಟುಹಬ್ಬದ ಶುಭಾಶಯ ತಿಳಿಸಲು ನನ್ನ ತಂಗಿ ಕುಸುಮ alias ಖುಷಿ ಬರೆದ ಪುಟ್ಟ ಮನಮೋಹಕ ಕವನ :)
ಧನ್ಯವಾದಗಳು ಖುಷಿ! :)
may all your dreams come true :)
GoD BleSs YoU :)

ಈ ಸಾವು ನ್ಯಾಯವೇ!?



ಇರುವಾಗ ನೂರಾರು ದುರ್ಜನರು ಇಳೆಯೊಳು 
ನೋಡಲಾರೆ ತಂದೆ-ತಾಯಿಗಳ ಆ ಗೋಳು!
ಏಕೆ ಈ ಮುಗ್ಧ ಬಾಲಕನೆ ಬೇಕಿತ್ತೆ ಯಮನೇ?
ಇಷ್ಟು ನಿಷ್ಕರುಣಿಯೇ ನಿನ್ನ ಹೃದಯ!?


ಜಗತ್ತನ್ನೇ ನೋಡದ ಆ ಬಾಲಕನೆಲ್ಲಿ!
ಜಗತ್ತನ್ನೇ ನುಂಗುವ ನೀನೆಲ್ಲಿ!?
ಅವನ ಜತೆ ಸರಸವಾಡುವೆಯಲ್ಲ!
ಇದು ಸಾವೇ? ಈ ಸಾವು ನ್ಯಾಯವೇ!? 


ಎಲ್ಲಿ ಅಡಗಿ ಕುಳಿತಿರತ್ತೋ ಆ ಸಾವು!
ಎಂದು ಬಂದೆರಗುತ್ತದೋ ಆ ಮೃತ್ಯು!
ಅಕಟಕಟಾ ಹೇ ಮೃತ್ಯುoಜಯನೇ !
ಅಪಮೃತ್ಯು ಪರಿಹರಿಸು ಅನಿಲದೇವ!

:(

ದಿನಾಂಕ ೦೫-೧೦-೨೦೧೦ ರಂದು ಅಪಮೃತ್ಯುವಿಗೆ ಈಡಾಗಿ ಇಹಲೋಕ ತ್ಯಜಿಸಿದ ೧೫ ವರ್ಷದ ಬಾಲಕ ವೆಂಕಟೇಶನಿಗೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥನೆ!!

Why do we need Temples if God is omnipresent ?

Note : This article is exclusively for those who believe in existence of God :)

      "God the almighty is present everywhere no doubt about it (sarvam khalvidam brahma). so we don't need temples," but this is true from Highly qualified Sadhaka (uttamadhikari) point of view. Our shastras has divided the devotees of vishnu in 3 categories as uttamadhikari, madhyamadhikari(qualified) and adhamadhikari(low qualified) sadhakas. Prahallada who is a very much capable of worshiping god everywhere in the world is said to be a uttamadhikari. The lord himself incarnated as Narasimha exclusively for Bhakta prahallada. So Prahallada does not need temples to worship god. 

      But we who are at the last grade of sadhana (adhamadhikaris) cannot worship god everywhere even he is omnipresent. We are finely masked by the screen called maya(ajnana) by durga devi(prakruti) which opposes us to find god everywhere. So we need Shastras which leads us towards god. But In this kaliyuga vedas and shastras are in the extinction stage, one person in a crore hardly study vedas and shastras, so, people who are completely drown in search the materialistic mundane pleasures cannot find god rather departs away from lord,so it becomes very much necessary to build TEMPLES where we consecrate an idol according to the injunctions of Shatras and believe GOD exists here.


       It is a place where god is worshiped everyday by devotees bringing them conscious that he's present everywhere in this universe. It is a place where God bestows good will on his devotees who pray him with devotion. It is place where the devotees confess their sins against lord and beg him for mercy. It is a place where all religious activities can be performed in peace. It is a place to achieve peace of mind to the person who has suffered in agony from the influence of samsara. It is a place where we are able to proceed in right path of sadhana.It is place where our contemplations toward god arise from heart. It is a place where all the devotees get together to listen the preachings of lord in shastras like Bhagavata, Bhagavadgeeta etc and eventually to attain the Salvation! :)

Saturday, 2 October 2010

ಮೊದಲ ನೋಟದ ಮಿಂಚು! LOVE @ FIRST SIGHT ನಿಜವಾ ?

ಹಾಗೇ ಸುಮ್ಮನೆ LOVE @ FIRST SIGHT ಬಗ್ಗೆ ತಿಳ್ಕೊಬೇಕು ಅಂತ ಅನ್ನಿಸ್ತು... ನೋಡಿದ್ರೆ next dayನೇ
ವಿಜಯಕರ್ನಾಟಕ news ಪೇಪರ್ ನಲ್ಲಿ ಈ ವಿಷಯವಾಗಿ ಒಂದು article ಇತ್ತು :) thanks to ವಿಜಯಕರ್ನಾಟಕ paper . ನೀವೂ ತಿಳ್ಕೊಲ್ರಿ ಅಂತ post ಮಾಡ್ತಿದೀನಿ :)
ನಿಮ್ಮ ಅಭಿಪ್ರಾಯ ತಿಳಿಸಿ :) ಒಂದು ವೇಳೆ ನಿಮಗೂ ಈ ರೀತಿಯ ಅನುಭವ ಆಗಿದ್ರೆ ತಪ್ಪದೇ ತಿಳಿಸಿ. ಇಲ್ಲಿ ತಿಳಿಸಲು ಸಂಕೋಚವಾದ್ರೆ ನನ್ನ personal mail id ಗೆ mail ಮಾಡಿ :)



ನಿಮಗೆ ಇಂಥ ರೋಚಕ ಅನುಭವ ಆಗಿದ್ರೆ, ಅದನ್ನ ನನ್ನ ಜೊತೆ ಹಂಚಿಕೊಳ್ಳಿ :)

Thursday, 30 September 2010

POSITIVE THINKING ಅಂದ್ರೆ ?



ನಮ್ಮ ಯೋಚನೆಯ ಧಾಟಿ ಯಾವತ್ತಿಗೂ ಋಣಾತ್ಮಕವಾಗಿ ಇರಬಾರದು, ಧನಾತ್ಮಕವಾಗಿ ಇರಬೇಕು. ಇದರಿಂದ ಏನು ಬೇಕಾದರೂ ಗಳಿಸಲು ಸಾಧ್ಯ. ಅಷ್ಟಕ್ಕೂ positive thinking ಅಂದರೆ ಏನು ? ನಿಮಗೆ ತಿಳಿದಿದೆಯೇ ? ಎಲ್ಲವೂ ನಮ್ಮ ವಿಚಾರ ಲಹರಿಯ ಮೇಲೆ ಅವಲಂಬಿಸಿರುತ್ತದೆ! ಒಮ್ಮೆ ಹಾಗೆ ಕಲ್ಪಿಸಿಕೊಳ್ಳಿ.. ನಮ್ಮ ಎಲ್ಲಾ ವಿಚಾರಗಳು ಹೀಗಿದ್ದರೆ ಹೇಗೆ ಎಂದು !
ಸಂಬಳ ಕಡಿಮೆ ಎಂದು ಕೊರಗುವ ಬದಲು ಅದರಲ್ಲೇ ತೃಪ್ತಿ ಪಟ್ಟುಕೊಂಡು ಅಂದವಾಗಿ ಬದುಕುವುದು!,
ಈಗಾಗಲೇ ಹೆಸರುವಾಸಿಯಾಗಿರುವ companyಯಲ್ಲೇ ಕೆಲಸಕ್ಕೆ ಸೇರಬೇಕೆಂದು ಹಠಕ್ಕೆ ಬೀಳುವ ಬದಲು ಸೇರಿದ companyಯನ್ನೇ ಉನ್ನತ ಮಟ್ಟಕ್ಕೆ ಏರಿಸಬೇಕೆಂದು ಪಣ ತೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವುದು! ಇವೆಲ್ಲ positive thinkingಗೆ ಉತ್ತಮ ಉದಾಹರಣೆಯಾಗಬಲ್ಲವು ಅಲ್ವೇ ? ಹಾಗೇ, ಹೊಸ ಬಟ್ಟೆ ಕೊಳ್ಳಲೂ ಆಗುತ್ತಿಲ್ಲ ಎಂದು ಯೋಚಿಸುತ್ತ ಕೂರುವ ಬದಲು ಇರುವ ಬಟ್ಟೆಗಳನ್ನೇ ಶುಭ್ರವಾಗಿ ಇಟ್ಟುಕೊಂಡು ಧರಿಸುವುದು ಮನಸ್ಸಿಗೆ ತೃಪ್ತಿ ಕೊಡುವ ವಿಚಾರವಲ್ಲವೇ?! ನಮ್ಮ ಸುತ್ತಲ ಪರಿಸರ ಚನ್ನಾಗಿ ಇರಬೇಕೆಂದು ಬಯಸುವುದು ತಪ್ಪಲ್ಲ, ಆದರೆ, ಹಾಗೇ ಪರಿಸರ ಚನ್ನಾಗಿ ಇರಬೇಕಾದರೆ ನಾನೇನು ಮಾಡಲು ಸಾಧ್ಯ ಎಂದು ಚಿಂತಿಸಿ ಅದನ್ನು ಸಾಕಾರಗೊಳಿಸಲು ಯತ್ನಿಸಿದರೆ ಇನ್ನೂ ಉತ್ತಮ ಅಲ್ಲವೇ?!

ಕನ್ಯಾಕುಮಾರಿಯ ತುತ್ತ ತುದಿಯಲ್ಲಿ ನಿಂತುಕೊಂಡು, ದಕ್ಷಿಣದ ಕಡೆ ತಿರುಗಿ ಇಲ್ಲಿಗೆ ಭಾರತ ಮುಗಿಯಿತು ಎಂದು ಕೊರಗುವ ಬದಲು, ಉತ್ತರದ ಕಡೆ ತಿರುಗಿ , ಇಲ್ಲಿಂದ ಭಾರತ START ಎಂದು ಯೋಚಿಸುವುದು ಎಷ್ಟು ಚೆನ್ನ ಅಲ್ವ ?! :)
ನಮಗಿರುವ ಶಕ್ತಿಯಲ್ಲೇ, ನಮಗಿರುವ ಇತಿಮಿತಿಯಲ್ಲೇ ಎಲ್ಲವನ್ನೂ "The Best" ಮಾಡಲು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಪ್ರಯತ್ನಿಸುವುದು ಉತ್ತಮ ಸಮಾಜದ ಉತ್ತಮ ಬೆಳವಣಿಗೆ ಎಂದು ನನ್ನ ಅನಿಸಿಕೆ! ಈ "The Best" ಸಾಮ್ರಾಜ್ಯ ಅನ್ನೋದು ಇದೆಯಲ್ಲ!, ಅದು ಹೊರಗಿನ ಯಾವುದೇ ಸಾಧನ, ಸಲಕರಣೆಗಳಿಂದ ನಿರ್ಮಾಣವಾಗುವಂಥದ್ದು  ಅಲ್ಲ! ಮನಸ್ಸೇ ಅದರ ಉಗಮ ಸ್ಥಾನ! ಅಲ್ಲೇ ಅದರ ಸಂಪೂರ್ಣ ಯಾನ ಕೂಡ :) ಅದೇ ನಮ್ಮಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಚಿಂತನೆಗಳು ಹರಿಯುವಂತೆ ಮಾಡುತ್ತದೆ! ಅದು ಶುದ್ಧವಾಗಿದ್ದರೆ, ಕೇವಲ ಧನಾತ್ಮಕೆ ಚಿಂತನೆಗಳು ಹರಿಯುತ್ತವೆ! ಮೊದಲು ಮನಸ್ಸನ್ನು ಶುದ್ಧೀಕರಿಸಿ! ನಂತರ ಪ್ರಯತ್ನಿಸಿ! ಯಶಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯತ್ನ ಮಾಡಬೇಡಿ. ಸುಮ್ಮನೆ ಪ್ರಯತ್ನಮಾಡುವುದಷ್ಟೇ ನಿಮ್ಮದಾಗಿರಲಿ! :) ಆದರೆ ನಾವು ಮಾಡುವ ಎಲ್ಲಾ ಪ್ರಯತ್ನಗಳು ನಿಖರವಾಗಿರಬೇಕು! ಪರಿಪೂರ್ಣವಾಗಿರಬೇಕು. ಕೊನೆಯ ಪಕ್ಷ, ಪರಿಪೂರ್ಣವಾಗಿರಲು ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕು! ಆಗ ನೋಡಿ ನಿಮ್ಮ ಹಿಂದೆಯೇ ಯಶಸ್ಸು ಹಿಂಬಾಲಿಸುತ್ತದೆ. ಇಷ್ಟೇ ಕಣ್ರೀ ಯಶಸ್ಸಿನ ಸೂತ್ರ :)

ಒಂದು ಗಮನದಲ್ಲಿ ಇರಲಿ, ಎಲ್ಲಾ ಪ್ರಾಮಾಣಿಕ ಪ್ರಯತ್ನಗಳಿಗೆ ವಿಘ್ನಗಳು ಇದ್ದೆ ಇರುತ್ತವೆ. ಅವೆಲ್ಲ ಕೇವಲ ನಮ್ಮ ಸತ್ವ ಪರೀಕ್ಷೆ! ದೇವರು ನಡೆಸುವ ಪರೀಕ್ಷೆ ಎಂದು ತಿಳಿಯಿರಿ. ಅದರಲ್ಲಿ pass ಆಗೋದು ಸುಲಭ ಅಲ್ಲ ಆದರೆ ಮನಸ್ಸು ಮಾಡಿದರೆ ಕಷ್ಟವೇನಿಲ್ಲ. ಅಂಥ ವಿಘ್ನಗಳು ಎದುರಾದಾಗ ಕುಗ್ಗುವ ಬದಲು, ಹೊಸ ಉತ್ಸಾಹದಿಂದ ವಿಘ್ನಗಳೊಡನೆ ಹೋರಾಡಲು ಸಜ್ಜಾಗಿ :) ಅಷ್ಟೇ ಸುಮ್ಮನೆ ಒಮ್ಮೆ ಘರ್ಜಿಸಿ, ವಿಘ್ನಗಳು ಹೆದರಿಕೊಂಡು ಪಲಾಯನ ಮಾಡುತ್ತವೆ :) ಎಂದಿಗೂ ಆತ್ಮವಿಶ್ವಾಸ ಕಳೆದು ಕೊಳ್ಳಬೇಡಿ. ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸಿ ಮುನ್ನುಗ್ಗಿ ಗುರಿ ತಲುಪುವ ತನಕ , ಕೊನೆ ಉಸಿರು ಇರುವ ತನಕ :P



ಎಲ್ಲರಿಗೂ ಅವರವರ ಆಸೆಗಳು ಆಕಾಂಕ್ಷೆಗಳು ಗುರಿಗಳು ಸಾಧನೆಗಳು "ಆ"ಗಳು "ಈ"ಗಳು ಒಟ್ಟಿನಲ್ಲಿ "ಅ"ಗಳು ಇಂದ ಹಿಡಿದು "ಳ"ಗಳು ವರೆಗೆ ಎಲ್ಲವೂ ಸಿಧ್ಧಿಸಲಿ :)

ALL THE VERY BEST :)





--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

Wednesday, 29 September 2010

ಮನಸ್ಸು :)

ನಮ್ಮ ಇಂದ್ರಿಯಗಳಲ್ಲಿ ಪ್ರಮುಖವಾದದ್ದು ಮನಸ್ಸು. ಇದು ಆಂತರಿಕ ಇಂದ್ರಿಯ. ನಿಜವಾಗಿ ನೋಡಿದರೆ ಉಳಿದೆಲ್ಲ ಇಂದ್ರಿಯಗಳಿಗೆ ಇರುವಂತೆ ಈ ಮನಸ್ಸಿಗೆ ಒಂದು physical existance ಇಲ್ಲ. ಆದರೂ ಉಳಿದೆಲ್ಲ ಬಾಹ್ಯೆಂದ್ರಿಯಗಳಿಗೆ boss ಇದ್ದ ಹಾಗೆ ಈ ಮನಸ್ಸು.ಇದು ಹೇಳಿದಂತೆ ಎಲ್ಲಾ ಇಂದ್ರಿಯಗಳೂ ಕೇಳಬೇಕು. ನೋಡು ಎಂದರೆ ನೋಡಬೇಕು, ಬೇಡ ಅಂದರೆ ಬಿಡಬೇಕು. ಕುಳಿತ ಜಾಗದಲ್ಲಿಯೇ ಇದ್ದು ಇಡೀ ಪ್ರಪಂಚವನ್ನೇ ಸುತ್ತಿಬರಬಹುದು. ಎಲ್ಲವನ್ನೂ ಕ್ಷಣದಲ್ಲಿ ನೋಡಬಹುದು. ಎಲ್ಲದಕ್ಕೂ ಮನಸ್ಸು ಕಾರಣ :) ಅದನ್ನೇ ಗಾಂಧೀಜಿಯ ಮೂರು ಕೋತಿಗಳು ಪ್ರತಿಬಿಂಬಿಸುತ್ತವೆ. ಇದೇ ಕಾರಣಕ್ಕಾಗಿ ಮನಸ್ಸು ಕೋತಿಯಂತೆ ಎಂದು ಎಲ್ಲರೂ ಹೇಳುತ್ತಾರೆ...
ನಿಜ, ಮನಸ್ಸು ಒಂದು ದೊಡ್ಡ ಗಡವ :) ಬೇಡ ಅಂದಿದ್ದನ್ನೇ ಮಾಡಲು ಬಯಸುತ್ತದೆ. ಕೆಟ್ಟದರ ಕಡೆಗೇ ಹೆಚ್ಚು ಹೋಗುತ್ತದೆ. ಅದು ಏಕೆ ಹಾಗೆ ?  ವಿಚಾರ ಮಾಡಲು ಹೋದರೆ ಮನಸ್ಸು ಬಿಡುತ್ತಿಲ್ಲ. ಹೇಗಾದರೂ ಮನಸ್ಸು ಮಾಡಿ ಅದನ್ನು ತಿಳಿಯಲೇ ಬೇಕು ಅಂತ ಪ್ರಯತ್ನ ಪಟ್ಟೆ. ಕೊನೆಗೆ ತಿಳಿದಿದ್ದು ಏನೆಂದರೆ, "ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಅನ್ನೋ ಗಾದೆ. ಅರ್ಥ ಆಗ್ಲಿಲ್ಲ ಅಲ್ವ...? ಮನಸ್ಸು ಕೊಟ್ಟು ಓದ್ರೀ ಅರ್ಥ ಆಗತ್ತೆ.
ಒಳ್ಳೆತನ ಬೆಳೆಸಿಕೊಳ್ಳೋದಕ್ಕೆ ಸಾವಿರಾರು ವಿಘ್ನಗಳು, ಸಾವಿರಾರು ಅಡೆತಡೆಗಳು ಇದ್ದೆ ಇರತ್ತೆ. ಅದನ್ನೆಲ್ಲ ಮೆಟ್ಟಿ ನಿಲ್ಲಬೇಕು ಅಂದ್ರೆ ಅವನಿಗೆ ಒಂದು strong ಆದ ಮನಸ್ಸು ಇರಬೇಕು. ಅಂದ್ರೆ ಆ ಮನಸ್ಸು ಗಟ್ಟಿಯಾಗಿ ಇರಬೇಕು. ಎಂತಹ ಪರಿಸ್ಥಿತಿಯಲ್ಲೂ ಆ ಮನಸ್ಸು ಕುಗ್ಗಬಾರದು. ಆದರೆ ಅದೇ ಒಬ್ಬ ಮನುಷ್ಯ ಹಾಳಾಗೋದು ಎಷ್ಟು ಸುಲಭ ಅಲ್ವ ? ಹಾಳಾಗೋದಕ್ಕೆ ಲಕ್ಷಾಂತರ ದಾರಿಗಳು. ಎಲ್ಲಾ ಕಡೆಯೂ ಮನಸ್ಸು ಎಳೆಯುತ್ತದೆ. ಏಕೆಂದರೆ ಮನಸ್ಸು ಕಷ್ಟ ಪಡುವುದಕ್ಕೆ ಇಷ್ಟ ಪಡುವುದಿಲ್ಲ. ಸುಲಭವಾಗಿ ದುಷ್ಟತನದ ಬಲೆಗೆ ಮನಸ್ಸು ಬೀಳುತ್ತದೆ. ದುರ್ಬಲ ಮನಸ್ಸು ಇದ್ದರಂತೂ ಮುಗಿಯಿತು, ಸಂಪೂರ್ಣ ಬದುಕೇ ಹಾಳಾಗಬಹುದು. ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಆ ಮನಸ್ಸು.
ಅದಕ್ಕೆ ಮನೋನಿಗ್ರಹ ಮುಖ್ಯ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಏನೆಲ್ಲಾ ಸಾಧಿಸಬಹುದು. ಆದರೆ ಅದನ್ನು ಹೇಗೆ control ಮಾಡುವುದು ? ಇದೊಂದು ಗಂಭೀರ ಪ್ರಶ್ನೆ!
ಹಲವಾರು ದಾರಿಗಳಿವೆ. ಯೋಗ ಧ್ಯಾನ ಏಕಾಗ್ರಚಿತ್ತತೆಯನ್ನು ಹೆಚ್ಚಿಸುತ್ತವೆ. ಇದರಿಂದ ಮನಸ್ಸು ನಿಮ್ಮ ಹಿಡಿತಕ್ಕೆ ಬರುತ್ತದೆ!
( ನನ್ನ ಅನುಭವ ಅಲ್ಲ, ಕೇಳಿದ್ದು ). ಒಮ್ಮೆ ಈ ರೀತಿ ಪ್ರಯತ್ನ ಮಾಡಲು ಮನಸ್ಸು ಮಾಡಿ :) ಇರಲಿ ಸುಮ್ಮನೆ ಏನೋ ಹೇಳಿತು ಮನಸ್ಸು,
ಅದ್ಕೆ ಈ ಲೇಖನ. ಓದಿದಮೇಲೆ ದೊಡ್ಡ ಮನಸ್ಸು ಮಾಡಿ ನಿಮ್ಮ ಸಂದೇಶಗಳನ್ನು ತಿಳಿಸಿ :)

--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

Thursday, 12 August 2010

Google ಜೊತೆ ಮಾತುಕತೆ! :)

google google google... ಎಲ್ಲಾ ಗೂಗಲ್ ಮಯ ಆಗಿದೆ ಇಂದು... ಗೂಗಲ್ ತಿಳಿಸದ ವಿಷಯವೇ ಇಲ್ಲ... ಗೂಗಲ್ ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ... ಏನೇ ಆದರೂ ಸರಿ, ಏನಾದರೂ ತಿಳಿಯದೆ ಇದ್ದರೆ ಗೂಗಲ್ ಅಲ್ಲಿ search ಮಾಡಿ ತಿಳಿದು ಕೊಳ್ಳುತ್ತೇವೆ... ಒಂಥರಾ ಗೂಗಲ್ ನಮ್ಮ ಹೆಂಡತಿ/ಗಂಡ ಥರ ಆಗ್ಬಿಟ್ಟಿದೆ... ಹೆಂಡತಿ/ಗಂಡ ಜೊತೆ ಅಷ್ಟು ಸಮಯ ಕಳೆಯುತ್ತೇವೋ ಇಲ್ಲವೋ ಆದರೆ, ಗೂಗಲ್ ಗೆ ಮಾತ್ರ ತುಂಬಾ ಸಮಯ ಕೊಟ್ಟು ಅದನ್ನು ಹೆಂಡತಿ/ಗಂಡ ನಿಗಿಂತ ಹೆಚ್ಚು ಚೆನ್ನಾಗಿ ನೋಡುತ್ತೇವೆ... ಭಾರತೀಯರಾದ ನಾವು ನಿರ್ಜೀವ ವಸ್ತುಗಳನ್ನೂ ಸಹ ಸಂಬಂಧಿಕರಂತೆ ಕಾಣುತ್ತೇವೆ... ಉದಾಹರಣೆಗೆ ನಮ್ಮ ದೇಶವನ್ನು ನಾವು "ಭಾರತ ಮಾತೆ" ಎಂದು ಸಂಬೋಧಿಸಿ ತಾಯಿಯ ಸ್ಥಾನವನ್ನು ನೀಡಿದ್ದೇವೆ... ಅದನ್ನು ಬಂಕಿಮ ಚಂದ್ರ ಚಟರ್ಜಿ ಅವರ "ವಂದೇ ಮಾತರಂ" ಎಂಬ ಹಾಡನ್ನು ಹಾಡುವ ಮೂಲಕ ವ್ಯಕ್ತ ಮಾಡಿದ್ದೇವೆ :)
ಅದೇ ಥರ ಕರ್ನಾಟಕವನ್ನು "ಕರ್ನಾಟಕ ಮಾತೆ" ಅಥವಾ "ಕನ್ನಡ ಮಾತೆ" ಎಂದು ಕರೆಯುತ್ತೇವೆ... ಅದನ್ನು "ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಹಾಡಿನ ಮೂಲಕ ವ್ಯಕ್ತಪಡಿಸಿದ್ದೇವೆ...  ಇದಷ್ಟೇ ಅಲ್ಲದೆ ಹಲವಾರು ಉದಾಹರಣೆಗಳು ಸಿಗುತ್ತವೆ.. "ಗಂಗಾ ಮಾತೆ" ಇತ್ಯಾದಿ...
"ಚಂದ ಮಾಮ" ಅಂತೂ ಮಕ್ಕಳಿಗೆ ಊಟ ಮಾಡಿಸುವಾಗ ತೋರಿಸಿ ಸಂತಸ ಪಡುತ್ತೇವೆ...
ಇದೆ ಥರ ನಾವು ಏಕೆ ಗೂಗಲ್ ಅನ್ನು "ಗೂಗಲ್ ಮಾತೆ" (if you like google to be looked as female) ಅಥವಾ "ಗೂಗಲ್ ಮಾಮ" (if you like google to be looked as male) ಅಂತ ಕರೆಯಬಾರದು?
ಹೀಗೊಂದು ವಿಚಾರ ನನ್ನ ತಲೆಗೆ ಹೊಳೆಯುತ್ತಿದ್ದಂತೆ, ಹಲವಾರು ವಿಚಾರ ಧಾರೆಗಳು ತಲೆಯಲ್ಲಿ ನುಸುಳಿ ಮರೆಯಾದವು...
ಒಂದು ವೇಳೆ ನಾವು ಗೂಗಲ್ ಅನ್ನು ಅಷ್ಟು ಪ್ರೀತಿ ಇಂದ "ಗೂಗಲ್ ಮಾತೆ" ಅಥವಾ "ಗೂಗಲ್ ಮಾಮ" ಅಂತ ಕರೆಯಲು ಶುರು ಮಾಡಿದರೆ ಹೇಗಿರಬಹುದು ಅಂತ ಸ್ವಲ್ಪ ಯೋಚನೆ ಮಾಡಿ... :)
ನಾನೂ ಯೋಚನೆ ಮಾಡ್ದೆ.. ಏನೋ ಕೆಲವು funny ಆದ ಕೆಲವು ಪ್ರಸಂಗಗಳು ಹೊಳೆದವು... ಅದರಲ್ಲಿ ಕೆಲವನ್ನು ಉದಾಹರಿಸಿದ್ದೇನೆ...
ನೀವು ಯೋಚನೆ ಮಾಡ್ರಿ... ನಿಮ್ಗೆನಾದ್ರು ಹೊಳೆದರೆ ದಯವಿಟ್ಟು post ಮಾಡೋದನ್ನ ಮರಿಬೇಡಿ :)


employee: whats is this ? i'm not getting this!
boss: ಅಲ್ಲಿ ನೋಡು ಅಲ್ಲಿ ನೋಡು... ಗೂಗಲ್ ಮಾಮಾ ... ಅವ್ನ ಕೇಳು ಪುಟ್ಟ... ನೋಡು ನೋಡು... ಹಂಗೆ :)

ಒಂದು ಹಾಡು (ಸಂಸ್ಕೃತದಲ್ಲಿ)...
"ಜೈ ಗೂಗಲ್ ಮಾತಾ , ಜ್ಞಾನಪ್ರದಾತಾ...

ಸರ್ವಪ್ರಖ್ಯಾತಾ, ಸರ್ವಾವಲಂಬಿತಾ...
ಜೈ ಗೂಗಲ್ ಮಾತಾ , ಜೈ ಜೈ ಗೂಗಲ್ ಮಾತಾ"

ಹಾಗೆ ಕನ್ನಡದಲ್ಲಿ ಬೇಡವೇ??
" ಭಾರತ ಚೀನಾ ಅಮೇರಿಕ,
ಇಂಗ್ಲೆಂಡ್ ರಷ್ಯ ಪಾಕಿಸ್ತಾನ,
ಯಾವ್ದೇ ಇರಲಿ ದೇಶ ... ಏನೇ ಇರಲಿ ಭಾಷೆ ... ಎಲ್ಲರ ನೆಚ್ಚಿನ ಕೂಸೇ...
Larry Page and Sergey Brin ತನುಜಾತೆ...
ಜಯ ಹೇ ಗೂಗಲ್ ಮಾತೆ "


ಅಯ್ಯೋ ಇದೆಲ್ಲ ಗೂಗಲ್ ನ ಹೊಗಳಲಿಕ್ಕೆ ಅಂತ ಅನ್ಕೋಬೇಡಿ... ನಂಗೇನ್ ಅಷ್ಟೊಂದು ಭಕ್ತಿ ಇಲ್ಲ... ಸುಮ್ನೆ ಕೂತಾಗ ತಲೆಗೆ ಬಂದ
ವಿಚಾರಾನ ಹಾಗೆ ಕೈ ಇಂದ blog ಗೆ ಇಳಿಸ್ದೆ ಅಷ್ಟೇ...
ನಿಮಗೆ ಇದೆ ಥರ ಇನ್ನೇನಾದ್ರೂ ಹೊಳೆದರೆ... ಹಂಗೆ ಇರಬೇಡಿ.. ಸುಮ್ನೆ comment ಬಿಸಾಕ್ಬುಡಿ ಬುದ್ದಿ :)

Sunday, 8 August 2010

Can I borrow Rs. 25?

Love the relations and work for relationships :)
Mail By BooN

A woman came home from work late, tired and irritated, to find her 5-year old son waiting for her at the door.

SON: 'Mummy, may I ask you a question?'

MUM: 'Yeah sure, what it is?' replied the woman.

SON: 'Mummy, how much do you make an hour?'

MUM: 'That's none of your business. Why do you ask such a thing?' the woman said angrily.
SON: 'I just want to know. Please tell me, how much do you make an hour?'

MUM: 'If you must know, I make
  Rs. 50 an hour.'

SON: 'Oh,' the little boy replied, with his head down.

SON: 'Mummy, may I please borrow Rs.25?'

The mother was furious, 'If the only reason you asked that is so you can borrow some money to buy a silly toy or some other nonsense, then you march yourself straight to your room and go to bed. Think about why you are being so selfish. I don't work hard everyday for such childish frivolities.'

The little boy quietly went to his room and shut the door..

The woman sat down and started to get even angrier about the little boy's questions. How dare he ask such questions only to get some money?

After about an hour or so, the woman had calmed down , and started to think:

Maybe there was something he really needed to buy with that Rs.25.00 and she really didn't ask for money very often.The woman went to the door of the little boy's room and opened the door.

'Are you asleep, son?' She asked.

'No Mummy, I'm awake,' replied the boy.

'I've been thinking, maybe I was too hard on you earlier' said the woman. 'It's been a long day and I took out my aggravation on you. Here's the Rs.25 you asked for.'

The little boy sat straight up, smiling. 'Oh, thank you Mummy!' he yelled. Then, reaching under his pillow he pulled out some crumpled up bills.

The woman saw that the boy already had money, started to get angry again.

The little boy slowly counted out his money, and then looked up at his mother.

'Why do you want more money if you already have some?' the mother grumbled.

'Because I didn't have enough, but now I do,' the little boy replied.

'Mummy, I have Rs.50 now. Can I buy an hour of your time? Please come home early tomorrow. I would like to have dinner with you.'

The mother was crushed. She put his arms around her little son, and she begged for his forgiveness.


It's just a short reminder to all of you working so hard in life. We should not let time slip through our fingers without having spent some time with those who really matter to us, those close to our hearts. Do remember to share that R50 worth of your time with someone you love.


If we die tomorrow, the company that we are working for could easily replace us in a matter of hours. But the family & friends we leave behind will feel the loss for the rest of their lives.

Monday, 2 August 2010

Wish You Happy Friendship Day

God Bless You All :)

ಎಲ್ಲ ಸ್ನೇಹಿತರಿಗೂ ಸ್ನೇಹಿತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...

ಸ್ನೇಹ ಅಮರ ಪ್ರೇಮ ನಶ್ವರ...

Sunday, 25 July 2010

ಹೀಗೊಂದು ಪಯಣ :)

ನಮ್ಮ ಯಾತ್ರೆಯ ಅವಿಸ್ಮರಣೀಯ ಸವಿನೆನಪುಗಳ ಕೆಲವು ತುಣುಕುಗಳು :)
ಒಟ್ಟು ೫ ಜನ... ಕೃಷ್ಣಾಚಾರ್ , ಸತ್ಯವಿಜಯ , ಬದರೀನಾಥ , ವಿಶ್ವಜ್ಞ ಮತ್ತು ಜಯತೀರ್ಥ :)




PAYANA 1 : ಬೆಂಗಳೂರಿನಲ್ಲಿ ಗದ್ದಲ :)
ಬೆಂಗಳೂರುನಿಂದ ೧-೦೭-೨೦೧೦ ರಂದು ಬೆಳಿಗ್ಗೆ ೮.೪೦ ಗಂಟೆಗೆ ಇತ್ತು ದೆಲ್ಹಿಗೆ ವಿಮಾನ... ಅಂದು ಬೆಳಿಗ್ಗೆ ಊಟ ಮಾಡಿ ಮನೆಯಲ್ಲಿ ತಂದೆ ತಾಯಿಯರಿಗೆ ನಮಿಸಿ ,
ಸತ್ಯ ವಿಜಯ್ ನ car ನಲ್ಲಿ ಹೊರಟೆವು airport ಗೆ..

ಮನೆ ಹತ್ತಿರ
in airport
ಪ್ರಥಮ ಚುಂಬನಂ ದಂತ ಭಗ್ನಂ ಅನ್ನೋ ಥರ ಇತ್ತು ವಿಮಾನ ಪ್ರಯಾಣ... ನಾವೇ ಎಲ್ಲರಿಗಿಂತ late ಆಗಿ ಹೋದೆವು... ಎಲ್ಲ ಪ್ರಯಾಣಿಕರೂ ನಮಗಾಗಿ ಕಾಯುತ್ತಿದ್ದರು... boarding pass ತೆಗೆದುಕೊಂಡ ಮೇಲೆ ಕೃಷ್ಣಚಾರ್ ಮತ್ತು ನನ್ನ ತಮ್ಮ toilet ಗೆ ಹೋಗಿದ್ರು... ಅವರನ್ನು ಹುಡುಕುವಷ್ಟರಲ್ಲಿ ಎಲ್ಲರಿಗೂ ರೋಸಿ ಹೋಗಿತ್ತು... ಅವರಂತೂ ಹಲವಾರು ಬಾರಿ final call to vishwajna and krishnachar ಅಂತ ಅರಚುತ್ತಿದ್ದರು... ನಮ್ಮ ಮನೆಗೆ call ಕೂಡ ಮಾಡಿದ್ದರು...ಇವರೋ ಏನೂ ತಿಳಿಯದವರಂತೆ ಎಲ್ಲ ಮುಗಿಸಿ ಬಂದರು... ಇಲ್ಲಿಂದ ಶುರುವಾಯ್ತು ನೋಡಿ ನಮ್ಮ funny ಪಯಣ...  ಹೊಟ್ಟೆ ಹುಣ್ಣಾಗುವಂತೆ ನಕ್ಕು ಕೊನೆಗೆ ವಿಮಾನದಲ್ಲಿ ಕುಳಿತೆವು... ಅಲ್ಲಿ ನನಗೆ window seat ಸಿಕ್ಕಿತ್ತು ... ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ದೇವರನ್ನು ನೆನೆಯುತ್ತ ಪ್ರಯಾಣ ಆರಂಭಿಸಿದೆವು... ನೋಡು ನೋಡುತ್ತಿದ್ದಂತೆ ವಿಮಾನ speed ಏರಿಸುತ್ತಾ ಮೇಲೆ ಹಾರಿತು :)
insight of flight


on runway
ಅದೊಂದು ಸುಂದರ ಅನುಭವ.. ಆದ್ರೆ ನಮ್ ಕರ್ನಾಟಕದ ಕೆಂಪು ಡಬ್ಬಿ bus ಗಿಂತ ಅಷ್ಟೇನ್ ಚನ್ನಾಗಿರ್ಲಿಲ್ಲ ನಮ್ spiceJet ವಿಮಾನ... ಒಳ್ಳೆ ಸ್ಪೀಡ್ pickup ಆದ್ಮೇಲೆ ಎತ್ತರದಲ್ಲಿ ಹಾರಾಡುತ್ತಿದ್ದ ಅನುಭವ ... ಸುಮಾರು ೨೦೦೦೦ ಅಡಿಗಳಷ್ಟು ಎತ್ತರ ಹೋಗಿದ್ದೆವು... "ಮೋಡದ ಒಳಗೆ..." ಹಾಡು ನೆನಪಾಯಿತು... ಆ ಹಾಡನ್ನು ಗುನುಗುತ್ತ ಮಧ್ಯೆ ಮಧ್ಯೆ ತಂಟೆ ತರಲೆಗಳನ್ನೂ ಮಾಡುತ್ತ ಹೊರಗಡೆ ಪ್ರಕೃತಿಯ snaps ತೆಗೆಯುತ್ತ ಹೋಗುತ್ತಿದ್ದೆವು... ನೋಡು ನೋಡುತ್ತಿದ್ದಂತೆ ಮೋಡಗಳು ಎದುರಾಗಿ ಒಳ್ಳೆ tvs ಮೇಲೆ hump ದಾಟಿದ ಅನುಭವವಾಗುತ್ತಿತ್ತು... ಅದೊಂದು ಹೊಸ ಅನುಭವ... ಚನ್ನಾಗಿತ್ತು...
ಮೋಡದ ಒಳಗೆ :)
a view from 20k ft height
ತರುಣಿಯರು (ಗಗನಸಖಿಯರು) ಬಂದು instructions ಕೊಡುವಾಗ ಅವರನ್ನು ನೋಡಿ ನಕ್ಕಿದ್ದೆ ನಕ್ಕಿದ್ದು (ತಮಾಷೆಗೆ ಸುಮ್ಸುಮ್ನೆ)... ಅವರೋ ನಮ್ಮ ಮುಖ ನೋಡಿ smile ಮಾತ್ರ ಮಾಡುತ್ತಿದ್ದರು :)...
railway track :
ವಿಮಾನದಲ್ಲಿಯ toilet ಅಂತೂ ತುಂಬಾ ಚಿಕ್ಕದು! lol :)  ಕೊನೆಗೂ ಸುಮಾರು ೧೧ ಗಂಟೆ ಅಷ್ಟೊತ್ತಿಗೆ landing ಅಂತ ಸೂಚನೆ ಕೊಟ್ರು... ನಾವೆಲ್ಲ ಸುಮ್ನೆ ಅವರಿಗೋಸ್ಕರ belt ಹಾಕೊಂಡು ready ಆದ್ವಿ ... ವಿಮಾನ ನಿಧಾನಕ್ಕೆ ಭೂ ಸ್ಪರ್ಶ ಮಾಡಿತು... ಕಿವಿಯಲ್ಲಿ vuvuzella ಬಾರಿಸಿದ ಹಾಗೆ ಆಗುತ್ತಿತ್ತು... ಬಾಗಿಲಲ್ಲಿ ನಿಂತ ತರುಣಿಯರು "thank you" ಅಂತ wish ಮಾಡುತ್ತಿದ್ದರೆ ನಾವು smile ಕೊಟ್ಟು ಹೊರಬಂದೆವು... ಒಟ್ಟಿನಲ್ಲಿ ಮೊದಲ ಬಾರಿಯ ವಿಮಾನ ಪಯಣ ಒಂದು ಸುಂದರ ಅನುಭವ ಕೊಟ್ಟಿತು... ಹೊರಗೆ ನಿಂತು ೨-೩ snaps ತೊಗೊಂಡೆವು...
a top view of land :)
while landing
ನನ್ನ ತಮ್ಮನ ಮುಗ್ಧತನವೋ ತುಂಟತನವೋ ತಿಳಿಯದು, ಗಗನಸಖಿಯರನ್ನು ನೋಡಿ ಕೇಳಿದ, "ಅವರ ಮುಖ ಮಾತ್ರ ಬೆಳ್ಳಗಿದೆ ಕಾಲು ಮಾತ್ರ ಯಾಕೆ ಅಷ್ಟು ಕಪ್ಪಗಿದೆ?" ಅಂತ... ಅವರು ಮಂಡಿ ತನಕ ಕಪ್ಪು socks ಧರಿಸಿದ್ದರು :) ಇದನ್ನು ನೆನೆಯುತ್ತ ನಗುತ್ತ ಹೊರಗೆ ಬಂದು luggage ಅನ್ನು collect ಮಾಡ್ಕೊಂಡು airport ನಿಂದ ಹೊರ ಬಂದೆವು...

in Delhi Airport
ಅಷ್ಟರಲ್ಲಿ ಅಲ್ಲಿ ನಮಗಾಗಿ indica car  ಕಾಯುತ್ತಿತ್ತು...ಅದ್ರಲ್ಲಿ ನಮ್ಮ 100kg luggage ಹಾಕಿ ಹೊರಟೆವು ಡೆಲ್ಲಿಯ ramrao road ಗೆ.. ಅಲ್ಲಿ ಬಿಸಿಲೋ ಬಿಸಿಲು...
our SpiceJet flight
ಅಲ್ಲಿ ಇರೋ transport company ಅಲ್ಲಿ ಕೃಷ್ಣಾಚಾರ್ bike ಬಂದಿತ್ತು.. ಅವರನ್ನು ಅಲ್ಲಿ drop ಮಾಡಿ ನಾವು ಹೊರಟೆವು ಹರಿದ್ವಾರದ ಕಡೆಗೆ :) ಅವರೂ ಕೂಡ ನಮ್ಮ ಹಿಂದೆಯೇ ಹೃತಿಕ್ ರೋಶನ್ ಥರ pulsar bike ನಲ್ಲಿ ಬರುತ್ತಿದ್ದರು... ಆಗಾಗ ಅವರ snaps ತೆಗೆದು ಮಜಾ ಮಾಡುತ್ತಿದ್ದೆವು...

sub river of Ganga


PAYANA 2 : ಹರಿದ್ವಾರದ ಕಡೆಗೆ :)
ದಾರಿಯುದ್ದಕ್ಕೂ ಕಾಲುವೆ (Sub river of Gange) ಹರಿಯುತ್ತಿತ್ತು... ಅದರ ಸೌಂದರ್ಯವನ್ನು ಸವಿಯುತ್ತ driver Ranjith Maharaj ನೊಡನೆ ಹರಟೆ ಹೊಡೆಯುತ್ತ ಹೋಗುತ್ತಿದ್ದೆವು... ಅವನೋ ಹಿಂದಿಯ ಹಳೆಯ ಹಾಡುಗಳನ್ನು ಹಾಕಿದ್ದ.. ಹೊರಗಿನಿಂದ ತಂಪಾದ ಗಾಳಿ ಬೀಸುತ್ತಿತ್ತು... ಏನೋ ಒಂಥರಾ romantic scene create ಆಗಿತ್ತು ಅಲ್ಲಿ... ಅಲ್ಲಿಯೇ ದಾರಿಯಲ್ಲಿ ನಿಲ್ಲಿಸಿ ತಣ್ಣಗಿನ ನೀರು ಕುಡಿದೆವು... ಎಂದೂ ರುಚಿಸದ ನೀರು ಅಂದು ಬಹಳ ರುಚಿಸಿತ್ತು... ಅಂದು ರಾತ್ರಿ ೮ ಗಂಟೆ ಹೊತ್ತಿಗೆ ಹರಿದ್ವಾರ ಸೇರಿದೆವು...

Ganga in Haridwar
ಅಲ್ಲಿ ಬಡೆ ಹನುಮಾನ್ ಮಂದಿರದಲ್ಲಿ ಇಳಿದುಕೊಂಡು ಅಲ್ಲೇ ರಾತ್ರಿ ಊಟ ಮಾಡಿ, ಬೆಳಿಗ್ಗೆ ಎದ್ದು ಬದರಿಗೆ ಹೊರಡುವುದು ಎಂದು ನಿಶ್ಚಯ ಮಾಡಿಕೊಂಡು ಅಲ್ಲಿಯೇ ಇರುವ ಕಾಳಿಕಾ ಮಂದಿರದಲ್ಲಿ ಸೊಳ್ಳೆಗಳೊಡನೆ ರಾತ್ರಿಯನ್ನು ಕಳೆದೆವು...
ಬಡೆ ಹನುಮಾನ್

ನಸುಕಿನಲ್ಲಿ ಎದ್ದು ನಿತ್ಯ ಶೌಚವನ್ನು ಮುಗಿಸಿ ಗಂಗಾ ನದಿಯಲ್ಲಿ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರಿಗಳವರೊಂದಿಗೆ ಪುಣ್ಯಸ್ನಾನ ಮಾಡಿದೆವು... ನದಿಯಲ್ಲಿ ಮುಳುಗುವುದು ಶುರುವಾಗಿದ್ದು ಇಲ್ಲಿಂದಲೇ...

ಪಲಿಮಾರು ಮಠ : ಪುಣ್ಯಸ್ನಾನ

ನಂತರ ಶ್ರೀ ಮಠದ ದೇವರ ದರ್ಶನ ಮಾಡಿ ಬಡೆ ಹನುಮಾನ್ ದರ್ಶನ ಪಡೆದು ಬದರಿ ಯಾತ್ರೆಗೆ ಸುಮಾರು ೧೦ ಗಂಟೆಗೆ ಹೊರಟೆವು... ಈ ಬಾರಿ ಸಿಕ್ಕ driver ಅಂತೂ ಮುತ್ತು :)
ಸ್ನಾನಾನಂತರ
ತುಂಬಾ ಚನ್ನಾಗಿ drive ಮಾಡಿ ನಮ್ಮ ಮನ ಮೆಚ್ಚುಗೆ ಗಳಿಸಿದ...

Ganga in Haridwar
ಹರಿದ್ವಾರದಿಂದ 20km ಮುಂದೆ ಋಷಿಕೆಶ್ ಅಂತ ಒಂದು ಪುಣ್ಯಸ್ಥಳ ಇದೆ. ಅಲ್ಲಿಯೂ ಕೂಡ ಗಂಗಾ ನದಿಯಲ್ಲಿ ಮಿಂದು ನಮ್ಮ ಪಯಣವನ್ನು ಮುಂದುವರಿಸಿದೆವು...

A sample Scary Road to Badrinath


PAYANA 3 : ಬದರಿಯೆಡೆಗೆ
ಇದಂತೂ ಇಡೀ ಜೀವನದಲ್ಲಿ ಮರೆಯಲಾಗದ ಸುಂದರ ಅನುಭವ... ಅಂದು ೨-೦೭-೨೦೧೦ ಬೆಳಿಗ್ಗೆ ೧೧ ಗಂಟೆ ಸಮಯ.. ಎಂಥ ರುದ್ರರಮಣೀಯ ದೃಶ್ಯ!! ಅಬ್ಬಾ ! ಅತ್ತ ದರಿ ಇತ್ತ ಪುಲಿ ಎಂಬಂತೆ , ಅತ್ತ ಕಡಿದಾದ ರಸ್ತೆ ಯಲ್ಲಿ ಬೆಟ್ಟದಿಂದ ಬೀಳುವ ರಾಶಿ ರಾಶಿ ಕಲ್ಲುಗಳು, ಇತ್ತ ಬಿದ್ದರೆ ಎಲುಬೂ ಸಿಗದಂಥಹ ಪ್ರಪಾತ... ಇಂಥ ಭಯಾನಕವಾದ ದೃಶ್ಯ ಮತ್ತೆಲ್ಲೂ ಸಿಗದು ಅಂತ ನನ್ನ ಅನಿಸಿಕೆ...

Sunset

330km ಉದ್ದಕ್ಕೂ ಇಂಥ ರಸ್ತೆಯೇ... ಜೀವ ಕೈಯಲ್ಲಿ ಹಿಡಿದು ಹೋಗಬೇಕು... ವರ್ಣಿಸಲು ಅಸಾಧ್ಯ...

Sunrise
Sample Road
view from car
Road on Hill
Alaka Nanda River

ಬದರಿಗೆ ಹೋಗುವ ದಾರಿಯಲ್ಲಿ ಒಟ್ಟು 6  ಪ್ರಯಾಗಗಳು (ಎರಡು ನದಿಗಳ ಸಂಗಮ ಸ್ಥಳ) ಬರುತ್ತವೆ... ಎಲ್ಲ ಪ್ರಯಾಗಗಳಲ್ಲೂ ನಾವು ಪುಣ್ಯಸ್ನಾನವನ್ನು ಮಾಡಿದೆವು... ಪಯಣಿಸುತ್ತಾ ದೇವಪ್ರಯಾಗ ಸೇರಿದೆವು...

 ->ದೇವಪ್ರಯಾಗ :-)
ಇದು ಮೊದಲನೇಯದಾಗಿ ಸಿಗುವ ಪ್ರಯಾಗ...
ಇಲ್ಲಿ ಅಲಕನಂದ ಮತ್ತು ಗಂಗಾ ನದಿಗಳ ಸಂಗಮವಾಗುತ್ತದೆ...
Deva Prayaga

Jaggesh Guha lol :)
ಇಲ್ಲಿ ನಡೆದ ಒಂದು funny ಪ್ರಸಂಗ...
ಅಲ್ಲಿ ಒಂದು ಗುಹೆ ಥರ ಇತ್ತು... ನನ್ನ ತಮ್ಮ ಸ್ವಲ್ಪ ಜಾಸ್ತಿ ಮಾತು... sudden ಆಗಿ ಆ ಗುಹೆಯನ್ನು ತೋರಿಸಿ ಇದು ಜಗ್ಗೇಶ್ ತಪಸ್ಸು ಮಾಡಿದ ಜಾಗ ಅಂತ ಹೇಳಿದ. ಎಲ್ಲರೂ ಒಂದು ಕ್ಷಣ ಹೌದೇನೋ ಅನ್ನುವಂತೆ ಹೇಳಿದ... ಕೃಷ್ಣಾಚಾರ್ ಅಂತೂ ನಂಬಿಯೇ ಬಿಟ್ಟಿದ್ದರು.. ಅವರು ಇಂದಿಗೂ ಆ ಸ್ಥಳವನ್ನು ಮರೆಯಲು ಸಾಧ್ಯವಿಲ್ಲ :)
ಅದನ್ನು ನೆನಪಿಸಿಕೊಂಡು ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು..

In Deva Prayaga


ಅಲ್ಲಿಂದ ಮುಂದೆ ಹೊರಟೆವು... ಎಲ್ಲರಿಗೂ ಹಸಿವು ಬಾಯಾರಿಕೆ ಆಗಿದ್ದರಿಂದ ದಾರಿಯಲ್ಲಿ ನಿಲ್ಲಿಸಿ ಅವಲಕ್ಕಿ ಮತ್ತು ಇತ್ಯಾದಿ ತಿಂಡಿಗಳನ್ನು ತಿಂದೆವು... ನಂತರ ಸಂಜೆ ಹೊತ್ತಿಗೆ ಸಿಕ್ಕ ಎರಡನೇ ಪ್ರಯಾಗ ರುದ್ರಪ್ರಯಾಗ...



 ->ರುದ್ರಪ್ರಯಾಗ :-)

In Rudra Prayaga

ಹೆಸರಿಗೆ ತಕ್ಕಂತೆ ಇತ್ತು ಈ ಪ್ರಯಾಗ... ರುದ್ರರಮಣೀಯ... ಇದು ಅಲಕನಂದ ಮತ್ತು ಮಂದಾಕಿನಿ ನದಿಗಳ ಸಂಗಮ ಸ್ಥಳ... ಅಲಕನಂದ  ಸೌಮ್ಯವಾಗಿ ಹರಿಯುತ್ತಿದ್ದರೆ ಮಂದಾಕಿನಿ ಮಾತ್ರ ರಭಸವಾಗಿ ಹರಿಯುತ್ತಿದ್ದಳು...
ಅಂದು ಸಂಜೆ ಅಲ್ಲಿ ನಡೆದ ಆರತಿ ಮನೋಹರವಾಗಿತ್ತು... ಇಲ್ಲಿಯೇ ದಡದಲ್ಲಿ ಇರುವ ದೇವಸ್ಥಾನದಲ್ಲಿ ಒಂದೈದು ನಿಮಿಷ ವಿಶ್ರಾಂತಿ ಪಡೆದು ಮತ್ತೆ ನಮ್ಮ ಪಯಣವನ್ನು ಶುರು ಮಾಡಿದೆವು...
ಆರತಿ ಸ್ಥಳ

ಅಷ್ಟರಲ್ಲಿ ರಾತ್ರಿ ಆಗಿದ್ದರಿಂದ halt ಆಗಬೇಕಾಗಿ ಬಂತು.. ಮುಂದಿನ ಪ್ರಯಾಗವಾದ ಕರಣಪ್ರಯಾಗದಲ್ಲಿ lodge ಒಂದರಲ್ಲಿ ಇಳಿದುಕೊಂಡೆವು...


Fun In Lodge
Sunrise in Karana Prayaga
->ಕರಣಪ್ರಯಾಗ :-)
lodge ನಲ್ಲಿ ಮಸ್ತಿಯೋ ಮಸ್ತಿ :) ದುಡ್ಡು ಕೊಟ್ಟಿದ್ದೇವೆಂದು ದಾಂಧಲೆ ಹಾಕಿದ್ದೇ ಹಾಕಿದ್ದು...
ಅಂದು ರಾತ್ರಿ ಇಲ್ಲಿಯೇ ತಂಗಿ ಬೆಳಿಗ್ಗೆ ನಸುಕಿನಲ್ಲಿ ಮನಮೋಹಕ ಸೂರ್ಯೋದಯವನ್ನು ನೋಡಿದೆವು.. ಅದೊಂದು ಅದ್ಭುತ ದೃಶ್ಯ...
In Karana Prayaga

ಮೋಡದ ಮರೆಯಲ್ಲಿ ಕೆಂಪಾದ ಸೂರ್ಯನನ್ನು ನೋಡುವುದೇ ಆನಂದ...
Karana Prayaga

ಇದು ಅಲಕನಂದ ಮತ್ತು ಪಿಂಡಾರ್ ನದಿಗಳ ಸಂಗಮ ಸ್ಥಳ... ಇಲ್ಲಿ ಬೆಳಗಿನ ಅಹ್ನಿಕಾದಿಗಳನ್ನು ಮುಗಿಸಿ, ನಮ್ಮ ಪ್ರಯಾಣವನ್ನು ಆರಂಭಿಸಿದೆವು... ಮುಂದಿನ ಸಂಗಮ ನಂದಪ್ರಯಾಗ...

Cool Krishnachar
->ನಂದಪ್ರಯಾಗ :-)
ಇದಕ್ಕೆ ಸ್ವಲ್ಪ ದೂರ ನಡೆಯಬೇಕು... ಇದು ಅಲಕನಂದ ಮತ್ತು ನಂದಾಕಿನಿ ನದಿಗಳ ಸಂಗಮ ಸ್ಥಳ... ಇಲ್ಲಿ ಕೃಷ್ಣಾಚಾರ್ cooling glass ಹಾಕೊಂಡು photo tegeskondidde ಮಜಾ...
ಇಲ್ಲಿಂದನೆ ನಮಗೆ ತಣ್ಣಗಿನ ನೀರಿನ ಅನುಭವ ಶುರು ಆಗಿದ್ದು ! ಅಬ್ಬ ice water! ಅದರಲ್ಲಿ ಮೀಯುವುದು ಎಂದರೆ ಮೈ ಎಲ್ಲ ಮರಗಟ್ಟಿ ಹೋಗುತ್ತಿತ್ತು...

Nanda Prayaga
In Nanda Prayaga
ಅಂಥದರಲ್ಲೂ ನಾವೆಲ್ಲಾ ಮುಳುಗಿದೆವು... ಅದೊಂದು ಸುಂದರ ಅನುಭವ :)
ಎಲ್ಲರೂ photo ತೆಗೆಸ್ಕೊಂಡಿದ್ದು ಚನ್ನಾಗಿತ್ತು... ಇಲ್ಲಿಂದ ಮುಂದೆ ಸಿಗುವ ಪ್ರಯಾಗವೇ ವಿಷ್ಣುಪ್ರಯಾಗ...



->ವಿಷ್ಣುಪ್ರಯಾಗ :-)
ಯಪ್ಪಾ ಇಲ್ಲಿಯ ನೀರು ನಂದಪ್ರಯಾಗದ ನೀರಿಗಿಂತ ತಣ್ಣಗಿತ್ತು... ಬೆಟ್ಟ ಹತ್ತುತ್ತ ಹೋದಂತೆ ಶೀತ ಜಾಸ್ತಿ ಆಗುತ್ತಿತ್ತು... ಇದು ವಿಷ್ಣುಗಂಗಾ ಮತ್ತು ಅಲಕನಂದ ನದಿಗಳ ಸಂಗಮ ಸ್ಥಳ...

Vishnu Prayaga


Rock Fall on the way
Satyanna with Military Officer
ಇಲ್ಲಿಯೂ ಕಷ್ಟಪಟ್ಟು ಎಲ್ಲರೂ ನದಿಯಲ್ಲಿ ಮಿಂದೆವು... ಮುಳುಗುವ ಮುನ್ನ ಆಡಿದ ಆಟಗಳನ್ನಂತೂ ಮರೆಯಲಾಗದು... ಎಲ್ಲರ ಮೈ ಕೈ ಕೆಂಪಾಗಿತ್ತು.. ಯಪ್ಪಾ ಮರಗಟ್ಟಿ ಹೋಗಿದ್ದೆವು ಕ್ಷಣ ಕಾಲ!! ಅಲ್ಲಿಂದ ಮುಂದೆ ನಮಗೆ ಸಿಗುವುದೇ ಬದ್ರಿನಾಥ್ :)
Welcome Board in Badrinath :)

ಬದ್ರಿನಾಥ್ ನಿಂದ ಮುಂದೆ 3km ಹೋದರೆ  ಭಾರತದ ಕೊನೆಯ ಹಳ್ಳಿಯಾದ ಮಾನಾ ಸಿಗುತ್ತದೆ... ಇದೆ ಭಾರತದ ಕೊನೆ ಹಳ್ಳಿ... ಇಲ್ಲಿಂದ ಮುಂದೆ military control ಇರುತ್ತದೆ...

Maana : Last Indian Village
A lovely Hill View
ಇಲ್ಲಿಂದ china ಕೇವಲ 40km  ಮಾತ್ರ... ಈ ಹಳ್ಳಿಯ ಹತ್ತಿರ ಸಿಗುವುದೇ ಮುಂದಿನ ಪ್ರಯಾಗವಾದ ಕೇಶವ ಪ್ರಯಾಗ...


->ಕೇಶವ ಪ್ರಯಾಗ :-)
ಷಟ್ಪ್ರಯಾಗಗಳಲ್ಲಿ ಇದೆ ಕೊನೆಯ ಪ್ರಯಾಗ.. ಇದು ಭೋರ್ಗರೆಯುವ ಸರಸ್ವತಿ ಹಾಗು ಅಲಕನಂದ ನದಿಗಳ ಸಂಗಮ ಸ್ಥಳ... ಅತೀ ಹೆಚ್ಚು ತಣ್ಣಗಿರುವ ನೀರು... ಹಿಂದೆ ಹೇಳಿದ್ದಕ್ಕಿಂತ ದುಪ್ಪಟ್ಟು... ಮೈ ಕೈ ಎಲ್ಲ ಕೆಂಪಾಗಿ ಮುಟ್ಟಿದರೆ ಸ್ಪರ್ಶ ಜ್ಞಾನವೂ ಹೋದಂತೆ ಭಾಸವಾಗುತ್ತಿತ್ತು... ಆಹಾ !!! ದೇವರ ಸೃಷ್ಟಿ ವರ್ಣಿಸಲು ಅಸಾಧ್ಯ!

In Keshava Prayaga
ಭೋರ್ಗರೆಯುವ ನದಿ :)

ಸರಸ್ವತಿ ನದಿಯ ಹಿಂದೆ ಇತಿಹಾಸವೇ ಇದೆ... ಹಿಂದೆ ಭೋರ್ಗರೆಯುವ ನದಿಯನ್ನು ನೋಡಿ ಪಾಂಡವರಲ್ಲಿ ಒಬ್ಬನಾದ ಭೀಮಸೇನನು ನದಿಗೆ ಅಡ್ಡಲಾಗಿ ಒಂದು ದೊಡ್ಡ ಕಲ್ಲನ್ನು ಇಟ್ಟನಂತೆ... ಆ ಬಂಡೆ "ಭೀಮಗಲ್ಲು" ಅಂತಾನೆ ಪ್ರಸಿಧ್ಧಿ ಪಡೆದಿದೆ... ಅದನ್ನು ಇಂದಿಗೂ ಕಾಣಬಹುದು...


Badrinath Temple
 @ಬದ್ರಿನಾಥ್ :-)
ಅಂದು ಸಂಜೆ ೬.೩೦ ಅಷ್ಟೊತ್ತಿಗೆ ಬದ್ರಿನಾಥ್ ಸೇರಿದೆವು... ಅಲ್ಲಿ ದೇವಸ್ಥಾನದ ಹತ್ತಿರವೇ ಒಂದು room ಅನ್ನು ಬಾಡಿಗೆಗೆ ಪಡೆದೆವು... ಅಲ್ಲಿ ಎಲ್ಲ luggage ಅನ್ನು ಇಟ್ಟು ಬದ್ರಿನಾಥ್ ನ ದರ್ಶನ ಪಡೆದೆವು...
ನಮ್ room

ಅದೊಂದು ಸುಂದರ ಮೂರ್ತಿ... ದರ್ಶನ ಪಡೆದ ಮೇಲೆ ತಿಂಡಿ ತಿಂದು ಮಲಗಿದೆವು... ಮಾರನೆ ದಿನ ಬೆಳಿಗ್ಗೆ ಮಹಾಅಭಿಷೇಕ ಸೇವೆಗೆಂದು ೪ ಗಂಟೆಗೆ ಎದ್ದು ತಪ್ತ ಕುಂಡದಲ್ಲಿ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋದೆವು...
ನರ-ನಾರಾಯಣ ಪರ್ವತಗಳು
ಇದು ಎರಡು ಮಹಾ ಪರ್ವತಗಳ ನಡುವೆ ಇರುವ ದೇವಸ್ಥಾನ... "ನರ" ಮತ್ತು "ನಾರಾಯಣ" ಎಂದು ಆ ಎರಡು ಪರ್ವತಗಳ ಹೆಸರು...
ತಪ್ತ ಕುಂಡ :- ಸೃಷ್ಟಿಯ ವಿಚಿತ್ರ ನೋಡಿ... ಇದು ತಪ್ತ ಕುಂಡ.. ಸದಾ ಬಿಸಿ ನೀರು ಬರುತ್ತಿರುತ್ತದೆ.. ಎಲ್ಲಿಂದ ಬರುತ್ತದೆಯೋ ಹೇಗೆ ಬರುತ್ತದೆಯೋ ತಿಳಿಯದ ವಿಚಾರ... ಅಂತೂ ಅಂಥ ಪ್ರದೇಶದಲ್ಲಿ ಇಂಥ ವೈಚಿತ್ರ್ಯ ಅದ್ಭುತವೇ ಸರಿ!!
ತಪ್ತ ಕುಂಡ

ಅಂತೂ ಸುಂದರ ಮೂರ್ತಿಯ ವಿಶ್ವರೂಪವನ್ನು ನೋಡಿ ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ ಸಮಯ ೭ ಆಗಿತ್ತು... ಹೊರಗೆ ಬಂದ ಮೇಲೆ ಅಡುಗೆ ಮಾಡಿಕೊಂಡು ಊಟ ಮಾಡಿದೆವು... ಅಲ್ಲಿ ಇಲ್ಲಿ ಸುತ್ತಾಡುತ್ತ shopping ಮಾಡಿದೆವು... ಸುತ್ತಮುತ್ತಲಿನ ರಮಣೀಯ ಮನಮೋಹಕ ದೃಶ್ಯಗಳನ್ನು ನಮ್ಮ camera ಕಣ್ಣಿನಲ್ಲಿ ಸೆರೆ ಹಿಡಿಯುತ್ತ ಕುಳಿತಿದ್ದರೆ ದಿನ ಮುಗಿದಿದ್ದೇ ತಿಳಿಯಲಿಲ್ಲ!!
Alaka Nanda River

Cloud on Hills
Ice Formation
Lovely scene :)
All members in front of Badrinath temple :)
ಅಂತೂ ನಮ್ಮ ಬದ್ರಿನಾಥ್ ಯಾತ್ರೆಯನ್ನು ಕಣ್ತುಂಬಿಕೊಂಡು ರಮಣೀಯ ಅವಿಸ್ಮರಣೀಯ ದೃಶ್ಯಗಳನ್ನು ಮನದಲ್ಲೂ ತುಂಬಿಕೊಂಡು ಚಿರವಾಗಿಸಿದೆವು...


A journey with Alakananda

PAYANA 4 : ಮತ್ತೆ ಹರಿದ್ವಾರಕ್ಕೆ!
ಮತ್ತೆ ಅದೇ ಭಯಾನಕ ರಸ್ತೆಯಲ್ಲಿ ಬೆಳಿಗ್ಗೆ ೬ ಗಂಟೆ ಅಷ್ಟೊತ್ತಿಗೆ ನಮ್ಮ ಪಯಣ ಶುರು ಮಾಡಿದೆವು...  ಆದರೆ ಈ ಬಾರಿ ಇನ್ನೂ ಭಯಾನಕವಾಗಿತ್ತು...  ಏಕೆಂದರೆ ಮೊದಲೇ ಭಯನಕವಾಗಿರುವ ಆ ರಸ್ತೆಗೆ ನಮ್ಮ ವರುಣರಾಯನೂ saath ನೀಡಿದ್ದ! muddy and skiddy road ನಲ್ಲಿ, land sliding and rock falls ಗಳನ್ನೂ ಕಣ್ಣೆದುರೇ ನೋಡುತ್ತಾ, ಪಾತಾಳಕ್ಕೆ ಬಿದ್ದು ಅಪ್ಪಚ್ಚಿಯಾದ car ನೋಡುತ್ತಾ ಹೋಗುವುದೇ ಒಂದು ರುದ್ರರಮಣೀಯ!!! ಅಂತೂ ನಮ್ಮ driver Ravat ನ ಚಾಣಾಕ್ಷತನದ driving ನಿಂದ ನಾವೆಲ್ಲಾ ಸಂಜೆ ೫ ಗಂಟೆ ಅಷ್ಟೊತ್ತಿಗೆ safe ಆಗಿ ಹರಿದ್ವಾರ ಸೇರಿದೆವು...

Back with bad face!
A View
Haridwar : Ganga
Veerabhadra

@ಹರಿದ್ವಾರ :- ಅಂದು ಸಂಜೆ ಗಂಗಾ ಆರತಿಯನ್ನು ಕಣ್ತುಂಬಿಕೊಂಡೆವು... ಎಂಥ ಮನಮೋಹಕ ದೃಶ್ಯ! ವಾಹ್!! ವರ್ಣಿಸಲಸದಳವು.. ಮತ್ತೆ ಬಡೆ ಹನುಮಾನ್ ಮಂದಿರದಲ್ಲಿ ನಮ್ಮ ಶಯನೋತ್ಸವ! :)
Mercury Shivalinga

ಗಂಗಾ ಆರತಿ
 ಮಾರನೆ ದಿನ ಸುತ್ತಮುತ್ತಲಿನ ದೇವಸ್ಥಾನಗಳನ್ನು ನೋಡಿದೆವು... ಚಂಡಿ ದೇವಿ ಮತ್ತು ಮಾನಸಾ ದೇವಿ ದೇವಸ್ಥಾನಗಳಿಗೆ rope ways ನಲ್ಲಿ ಹೋಗಿದ್ದು ಅದ್ಭುತವಾಗಿತ್ತು! ನಂತರ ಸಂಜೆಯ ತನಕ shopping ಮಾಡಿದೆವು!
ಇಷ್ಟೆಲ್ಲಾ ಆಗುವಷ್ಟರಲ್ಲಿ ಸಂಜೆ ೭ ಆಗಿತ್ತು... ಅಲ್ಲಿಯೇ ಊಟ ಮಾಡಿ ಮಲಗಿದೆವು...
Rope way to Manasa Devi & ChandiMandir


Just for fun :)








PAYANA 5 : Back to Delhi !ಮಾರನೆ ದಿನ ಬೆಳಿಗ್ಗೆ ಎದ್ದು ನಿತ್ಯ ಶೌಚಗಳನ್ನು ಮುಗಿಸಿ ವಾಪಸ್ ದೆಲ್ಹಿಗೆ ಹೊರಟೆವು... ಇಡೀ ಯಾತ್ರೆಯಲ್ಲಿ ಈ ಪ್ರಯಾಣ ಅಷ್ಟು ಸ್ವಾರಸ್ಯವಾಗಿ ಇರಲಿಲ್ಲ! ಏಕೆಂದರೆ ನಾವು ಮತ್ತೆ ವಾಪಸ್ ಹೊರಟಿದ್ದೆವು... ಬಿಟ್ಟು ಬರಲು ಮನಸಿಲ್ಲದೇ ಒಲ್ಲದ ಮನಸ್ಸಿನಿಂದ ಗಟ್ಟಿ ಮನಸ್ಸು ಮಾಡಿ ಹೊರಟೆವು! :( ಡೆಲ್ಲಿ ಸೇರಿದಾಗ ರಾತ್ರಿಯಾಗಿತ್ತು... ಅಲ್ಲಿ ಕೃಷ್ಣ ಮಂದಿರದಲ್ಲಿ ಮಲಗಿಕೊಂಡೆವು...

India Gate
Parliment
Rashtrapati Bhavana

@ಡೆಲ್ಲಿ :-)
ಮಾರನೆ ದಿನ ಬೆಳಿಗ್ಗೆ ಬೇಗ ಊಟ ಮಾಡಿ, ಡೆಲ್ಲಿ ನೋಡಿ ಬರಲು ಹೊರಟೆವು... ಅಲ್ಲಿ INDIA GATE , ರಾಷ್ಟ್ರಪತಿ ಭವನ , parliment , ಮತ್ತು ಎಲ್ಲ ಮಂತ್ರಿಗಳ ಮನೆಯನ್ನೂ ನೋಡಿಬಂದೆವು.. (ಯಾವ್ ಮಂತ್ರಿನೂ ಕರೀಲಿಲ್ಲ :( )...


PAYANA 6 : Back to ನಮ್ಮ ಬೆಂಗಳೂರು :)
ಸಂಜೆ ೫.೪೫ ಗಂಟೆಗೆ flight book ಆಗಿತ್ತು... ಎಲ್ಲರೂ checking ಬಹಳ ಇರುತ್ತದೆ ಎಂದು ಹೇಳಿದ್ದರಿಂದ ಬೇಗನೆ airport ಗೆ ಹೋದೆವು... check in ಆದ್ಮೇಲೆ boarding pass ತೊಗೊಂಡು ಅಲ್ಲಿಯೇ ಸುತ್ತಾಡಿದೆವು... ಹವಾಮಾನ ಮತ್ತು ವಾತಾವರಣ ಸರಿ ಇಲ್ಲದ ಕಾರಣದಿಂದ flight ಅರ್ಧ ಗಂಟೆ late ಆಗಿ ಹೊರಟಿತು...
Back to Bengalooru
ಮತ್ತೆ ಅದೇ ಅನುಭವ... ಆದರೆ ಈ ಬಾರಿ ಬೇರೆ ಗಗನಸಖಿಯರು :)
Lovely evening

ನನ್ನ ತಮ್ಮ ಸ್ವಲ್ಪ ತುಂಟನಾಗಿದ್ದರಿಂದ ಅವರ ಹತ್ತಿರ ೪ ಬಾರಿ water bottle ಇಸ್ಕೊಂಡ... ಅವರನ್ನು ನೋಡಿ ತಮಾಷೆ ಮಾಡುತ್ತಿದ್ದ... ಬೆಂಗಳೂರು ಸೇರುವ ಹೊತ್ತಿಗೆ ನಮ್ ಸತ್ಯಣ್ಣ camera ಕಣ್ಣಿನಲ್ಲಿ ಹಲವಾರು ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದ... airport ಸೇರುವ ಹೊತ್ತಿಗೆ ಎಲ್ಲರಿಗೂ ಸುಸ್ತಾಗಿತ್ತು... ನಮ್ ಸತ್ಯಣ್ಣನ car ನಲ್ಲಿ ಮನೆ ತಲುಪುವ ಹೊತ್ತಿಗೆ ರಾತ್ರಿ ೧೧ ಆಗಿತ್ತು... ಬಂದು ಊಟ ಮಾಡಿ ಮಲಗಿದಾಗ ನಮ್ಮ ಈ ಯಾತ್ರೆ ಮಂಗಳ ಹಾಡಿತ್ತು :)
बोलो बद्रीविशाल की...
जय :)