ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Wednesday, 22 June 2011

All the best buddies :)

ಒಬ್ಬರನೊಬ್ಬರು ಅರಿಯದ ದುಗುಡದಿ ಶಿಕ್ಷಣದ ಜೀವನ
ಶುರುವಾಯ್ತು, ನಂತರ ಸ್ನೇಹದ ಬೆಸುಗೆಯ ಪರಿವರ್ತನ!
ನಮಗಿದೆ ಸು'ಮಧು'ರ  ನೆನಪುಗಳೆಂಬ ಮರದ ಎಲೆಗಳು :)
ಆದರೆ, ದೂರವಾಗುವಾಗ ಕಣ್ಣಂಚಲಿ ಕಣ್ಣೀರಿನ ಮಾಲೆಗಳು!

ಬಂದದ್ದು ಬರಲಿ ಎದುರಿಸಲು 'ಗಜ' ಬಲವಿರಲಿ
ಸಾಧಿಸಬೇಕೆಂಬ ಗುರಿ,ಛಲ,ಹಂಬಲಗಳಿರಲಿ!
ವಿಘ್ನಗಳೆಲ್ಲ 'ಗಣೇಶ'ನ ದಯೆಯಿಂ ದೂರವಾಗಲಿ
'ಬಿಂದು'ವಿನಂತಿರುವ 'ವಿದ್ಯೆ'ಯು 'ಅನಂತ'ವಾಗಲಿ!

ಎಷ್ಟೇ ಕಷ್ಟಗಳು ಬಂದರೂ ಮನ 'ಜಗ್ಗ'ದಿರಲಿ
ದಿಟ್ಟತನದಿಂ ಎದುರಿಸುವ 'ಕೌಶಲ' ಸಿಗಲಿ
ಜ್ಞಾನ'ಜ್ಯೋತಿ'ಯು ಎಲ್ಲರಲಿ ಸದಾ ಬೆಳಗಲಿ
ಸ್ನೇಹಿತರ ಬಾಳು 'ಕುಸುಮ'ದಂತೆ ಅರಳಲಿ :)

ಯಶಸ್ಸಿಗೆ 'ಅಭಿನಂದ'ನೆಗಳ ಮಳೆಯಾಗಲಿ
ಮುಖದಲಿ 'ಚಂದ್ರ'ನ ಕಾಂತಿಯು ಬೆಳಗಲಿ!
'ಶೀಲ','ವಿನಯ'ವಂತಿಕೆಗಳು ಮೈಗೂಡಲಿ
ಕೊನೆಗೆ 'ಮುಕುಂದ'ನ 'ಕರಣ'ವ ಮರೆಯದಿರಲಿ! :)
                                                             
ನೆನಪುಗಳೇ ಅಧಾರ ಮಧುರ ಬಾಳಿಗೆ,
ಸವಿನೆನಪುಗಳು ನೀಡುವವು ನಗುವಿನ ಹೋಳಿಗೆ!
ದುಃಖದ ನೆನಪುಗಳು ಅನುಭವದ ಪೀಳಿಗೆ!
ಇದನರಿತರೆ ಆಗುವುದು ಬಾಳಲಿ ಏಳಿಗೆ :)



Asif, Can't fit you in poem!!
All the very best for future, to all of you :) Thanks for being part of my life's journey! :)


-- 

With regards:
♥ßÁÐÁℛΞΞŃÁŤℋ ÁĹŐŐℛ♥