ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

POSITIVE THINKING!!!



ನಮ್ಮ ಯೋಚನೆಯ ಧಾಟಿ ಯಾವತ್ತಿಗೂ ಋಣಾತ್ಮಕವಾಗಿ ಇರಬಾರದು, ಧನಾತ್ಮಕವಾಗಿ ಇರಬೇಕು. ಇದರಿಂದ ಏನು ಬೇಕಾದರೂ ಗಳಿಸಲು ಸಾಧ್ಯ. ಅಷ್ಟಕ್ಕೂ positive thinking ಅಂದರೆ ಏನು ? ನಿಮಗೆ ತಿಳಿದಿದೆಯೇ ? ಎಲ್ಲವೂ ನಮ್ಮ ವಿಚಾರ ಲಹರಿಯ ಮೇಲೆ ಅವಲಂಬಿಸಿರುತ್ತದೆ! ಒಮ್ಮೆ ಹಾಗೆ ಕಲ್ಪಿಸಿಕೊಳ್ಳಿ.. ನಮ್ಮ ಎಲ್ಲಾ ವಿಚಾರಗಳು ಹೀಗಿದ್ದರೆ ಹೇಗೆ ಎಂದು !
ಸಂಬಳ ಕಡಿಮೆ ಎಂದು ಕೊರಗುವ ಬದಲು ಅದರಲ್ಲೇ ತೃಪ್ತಿ ಪಟ್ಟುಕೊಂಡು ಅಂದವಾಗಿ ಬದುಕುವುದು!,
ಈಗಾಗಲೇ ಹೆಸರುವಾಸಿಯಾಗಿರುವ companyಯಲ್ಲೇ ಕೆಲಸಕ್ಕೆ ಸೇರಬೇಕೆಂದು ಹಠಕ್ಕೆ ಬೀಳುವ ಬದಲು ಸೇರಿದ companyಯನ್ನೇ ಉನ್ನತ ಮಟ್ಟಕ್ಕೆ ಏರಿಸಬೇಕೆಂದು ಪಣ ತೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವುದು! ಇವೆಲ್ಲ positive thinkingಗೆ ಉತ್ತಮ ಉದಾಹರಣೆಯಾಗಬಲ್ಲವು ಅಲ್ವೇ ? ಹಾಗೇ, ಹೊಸ ಬಟ್ಟೆ ಕೊಳ್ಳಲೂ ಆಗುತ್ತಿಲ್ಲ ಎಂದು ಯೋಚಿಸುತ್ತ ಕೂರುವ ಬದಲು ಇರುವ ಬಟ್ಟೆಗಳನ್ನೇ ಶುಭ್ರವಾಗಿ ಇಟ್ಟುಕೊಂಡು ಧರಿಸುವುದು ಮನಸ್ಸಿಗೆ ತೃಪ್ತಿ ಕೊಡುವ ವಿಚಾರವಲ್ಲವೇ?! ನಮ್ಮ ಸುತ್ತಲ ಪರಿಸರ ಚನ್ನಾಗಿ ಇರಬೇಕೆಂದು ಬಯಸುವುದು ತಪ್ಪಲ್ಲ, ಆದರೆ, ಹಾಗೇ ಪರಿಸರ ಚನ್ನಾಗಿ ಇರಬೇಕಾದರೆ ನಾನೇನು ಮಾಡಲು ಸಾಧ್ಯ ಎಂದು ಚಿಂತಿಸಿ ಅದನ್ನು ಸಾಕಾರಗೊಳಿಸಲು ಯತ್ನಿಸಿದರೆ ಇನ್ನೂ ಉತ್ತಮ ಅಲ್ಲವೇ?!
ಕನ್ಯಾ ಕುಮಾರಿಯ ತುತ್ತ ತುದಿಯಲ್ಲಿ ನಿಂತು, ದಕ್ಷಿಣದ ಕಡೆ ಮುಖ ಮಾಡಿ "ಇಲ್ಲಿಗೆ ಭಾರತ ಮುಗಿಯಿತು" ಎಂದು ಯೋಚಿಸುವ ಬದಲು, ಉತ್ತರಕ್ಕೆ ತಿರುಗಿ, "ಇಲ್ಲಿಂದ ಭಾರತ ಶುರು ಆಯಿತು" ಎಂದು ಯೋಚಿಸುವುದು ಎಷ್ಟು ವಿವೆಚನೀಯ! ಅಲ್ಲವೇ!?
ನಮಗಿರುವ ಶಕ್ತಿಯಲ್ಲೇ, ನಮಗಿರುವ ಇತಿಮಿತಿಯಲ್ಲೇ ಎಲ್ಲವನ್ನೂ "The Best" ಮಾಡಲು ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಪ್ರಯತ್ನಿಸುವುದು ಉತ್ತಮ ಸಮಾಜದ ಉತ್ತಮ ಬೆಳವಣಿಗೆ ಎಂದು ನನ್ನ ಅನಿಸಿಕೆ! ಈ "The Best" ಸಾಮ್ರಾಜ್ಯ ಅನ್ನೋದು ಇದೆಯಲ್ಲ!, ಅದು ಹೊರಗಿನ ಯಾವುದೇ ಸಾಧನ, ಸಲಕರಣೆಗಳಿಂದ ನಿರ್ಮಾಣವಾಗುವಂಥದ್ದು  ಅಲ್ಲ! ಮನಸ್ಸೇ ಅದರ ಉಗಮ ಸ್ಥಾನ! ಅಲ್ಲೇ ಅದರ ಸಂಪೂರ್ಣ ಯಾನ ಕೂಡ :) ಅದೇ ನಮ್ಮಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಚಿಂತನೆಗಳು ಹರಿಯುವಂತೆ ಮಾಡುತ್ತದೆ! ಅದು ಶುದ್ಧವಾಗಿದ್ದರೆ, ಕೇವಲ ಧನಾತ್ಮಕೆ ಚಿಂತನೆಗಳು ಹರಿಯುತ್ತವೆ! ಮೊದಲು ಮನಸ್ಸನ್ನು ಶುದ್ಧೀಕರಿಸಿ! ನಂತರ ಪ್ರಯತ್ನಿಸಿ! ಯಶಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯತ್ನ ಮಾಡಬೇಡಿ. ಸುಮ್ಮನೆ ಪ್ರಯತ್ನಮಾಡುವುದಷ್ಟೇ ನಿಮ್ಮದಾಗಿರಲಿ! :) ಆದರೆ ನಾವು ಮಾಡುವ ಎಲ್ಲಾ ಪ್ರಯತ್ನಗಳು ನಿಖರವಾಗಿರಬೇಕು! ಪರಿಪೂರ್ಣವಾಗಿರಬೇಕು. ಕೊನೆಯ ಪಕ್ಷ, ಪರಿಪೂರ್ಣವಾಗಿರಲು ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕು! ಆಗ ನೋಡಿ ನಿಮ್ಮ ಹಿಂದೆಯೇ ಯಶಸ್ಸು ಹಿಂಬಾಲಿಸುತ್ತದೆ. ಇಷ್ಟೇ ಕಣ್ರೀ ಯಶಸ್ಸಿನ ಸೂತ್ರ :)

ಒಂದು ಗಮನದಲ್ಲಿ ಇರಲಿ, ಎಲ್ಲಾ ಪ್ರಾಮಾಣಿಕ ಪ್ರಯತ್ನಗಳಿಗೆ ವಿಘ್ನಗಳು ಇದ್ದೆ ಇರುತ್ತವೆ. ಅವೆಲ್ಲ ಕೇವಲ ನಮ್ಮ ಸತ್ವ ಪರೀಕ್ಷೆ! ದೇವರು ನಡೆಸುವ ಪರೀಕ್ಷೆ ಎಂದು ತಿಳಿಯಿರಿ. ಅದರಲ್ಲಿ pass ಆಗೋದು ಸುಲಭ ಅಲ್ಲ ಆದರೆ ಮನಸ್ಸು ಮಾಡಿದರೆ ಕಷ್ಟವೇನಿಲ್ಲ. ಅಂಥ ವಿಘ್ನಗಳು ಎದುರಾದಾಗ ಕುಗ್ಗುವ ಬದಲು, ಹೊಸ ಉತ್ಸಾಹದಿಂದ ವಿಘ್ನಗಳೊಡನೆ ಹೋರಾಡಲು ಸಜ್ಜಾಗಿ :) ಅಷ್ಟೇ ಸುಮ್ಮನೆ ಒಮ್ಮೆ ಘರ್ಜಿಸಿ, ವಿಘ್ನಗಳು ಹೆದರಿಕೊಂಡು ಪಲಾಯನ ಮಾಡುತ್ತವೆ :) ಎಂದಿಗೂ ಆತ್ಮವಿಶ್ವಾಸ ಕಳೆದು ಕೊಳ್ಳಬೇಡಿ. ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸಿ ಮುನ್ನುಗ್ಗಿ ಗುರಿ ತಲುಪುವ ತನಕ , ಕೊನೆ ಉಸಿರು ಇರುವ ತನಕ :P



ಎಲ್ಲರಿಗೂ ಅವರವರ ಆಸೆಗಳು ಆಕಾಂಕ್ಷೆಗಳು ಗುರಿಗಳು ಸಾಧನೆಗಳು "ಆ"ಗಳು "ಈ"ಗಳು ಒಟ್ಟಿನಲ್ಲಿ "ಅ"ಗಳು ಇಂದ ಹಿಡಿದು "ಳ"ಗಳು ವರೆಗೆ ಎಲ್ಲವೂ ಸಿಧ್ಧಿಸಲಿ :)

ALL THE VERY BEST :)





--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

No comments:

Post a Comment