ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Sunday, 3 May 2020

ಶ್ರೀಸತ್ಯಾತ್ಮನುತಿಪಂಕಜವು

ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

ಶ್ರೀಸತ್ಪ್ರಮೋದರ ಕರಜರು ನೀವು ವಿದ್ಯಾಪೀಠದ ನಾಯಕರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥1॥
ಪರಮಹಂಸರು ನೀವು ಅಭಿನವ ಶ್ರೀರಘೂತ್ತಮರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥2॥

ಮಂದಸ್ಮಿತಮುಖರು ನೀವು ಸದಾ ಉಲ್ಲಾಸದ ತವರೂರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥3॥
ಸರ್ವಜನ ಹಿತ ಬಯಸುವ ನೀವು ಕರುಣೆಯ ಸಾಗರರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥4॥

ಸಂಸ್ಥೆಗಳನ್ನು ಸ್ಥಾಪಿಸಿ ನೀವು ಸತ್ಕಾರ್ಯಗಳನ್ನು ನಡೆಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥5॥
ತಂದೆತಾಯಿಗಳಿಗಿಂತಲೂ ನೀವು ಶಿಷ್ಯರ ಪೋಷಣೆ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥6॥

ಯುವತಿಯುವಕರನ್ನು ನೀವು ಸನ್ಮಾರ್ಗಕೆ ತಂದು ಹಚ್ಚುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥7॥
ಮಂತ್ರೋಪದೇಶಿಸಿ ನೀವು ವಿಪ್ರತ್ವವ ಉಳಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥8॥

ಮೂರ್ತಿಗಳನ್ನು ಸ್ಥಾಪಿಸಿ ನೀವು ಸನ್ನಿಧಾನವ ತುಂಬುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥9॥
ಸಂಸ್ಥಾನ ಪೂಜೆಯ ನೀವು ನಿತ್ಯವೂ ಭಕುತಿಲಿ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥10॥

ಮಂತ್ರಾಕ್ಷತೆಯಿಂದಲೇ ನೀವು ಕಷ್ಟಗಳನ್ನು ಕಳೆಯುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥11॥
ಮಂತ್ರಾಕ್ಷತೆಯಿಂದಲೇ ನೀವು ಇಷ್ಟಗಳನ್ನು ಉಣಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥12॥

ನಂದಶಾಸ್ತ್ರದಿ ಮಿಂದ ನೀವು ಆನಂದದಿ ಟಿಪ್ಪಣಿ ರಚಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥13॥
ಪ್ರಾಚೀನಜ್ಞಾನಿಗಳನ್ನು ನೀವು ಭಕುತಿಯಿಂದಲಿ ನಮಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥14॥
 
ಗುರುಗಳ ಶತಾಬ್ದವ ನೀವು ಸೇವಾರೂಪದಿ ಮಾಡಿದಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥15॥
ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥16॥
ಭವ್ಯಪೀಠದಿ ಗುರುಗಳಿಗಿಂದು ರಜತಮಹೋತ್ಸವವು
ಕಣ್ತುಂಬಿಕೊಂಡ ನಾವೇ ಇಂದು ಧನ್ಯರು ಧನ್ಯರು17
ಸಾಕ್ಷೀನಾಥವಿಠ್ಠಲಾಭಿನ್ನ ವೇದವ್ಯಾಸ ಪದಾಶ್ರಿತನು
ಆಲೂರಾನ್ವಯಜಾತನು ನಾನು ರಚಿಸುವೆ ಕೃತಿಯನ್ನು18
ಸಂಸಾರಬಾಧೆಯ ಕಳೆವುದು ಸತ್ಯಾತ್ಮನುತಿಪಂಕಜವು
ಭಕುತಿಯಿಂದರ್ಪಿಸುವೆ ಶ್ರೀಸತ್ಯಾತ್ಮಪದಪಂಕಜದಿ19

ಶ್ರೀಸತ್ಯಾತ್ಮನುತಿಪಂಕಜ by Alakananda B Alur

ಶ್ರೀಕೃಷ್ಣಾರ್ಪಣಮಸ್ತು

॥ श्रीसत्यात्मनुतिपङ्कजम् ॥

श्रीसत्प्रमोदसञ्जातविद्यापीठादिनायकाः ।
सन्तु नः श्रीसदात्मानः गुरवो जन्मजन्मनि ॥1॥
ಶ್ರೀಸತ್ಪ್ರಮೋದರ ಕರಜರು ನೀವು ವಿದ್ಯಾಪೀಠದ ನಾಯಕರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

परिव्राजोऽभिनव्यश्रीकृष्णारण्यनिवासिनः ।
सन्तु नः श्रीसदात्मानः गुरवो जन्मजन्मनि ॥2॥
ಪರಮಹಂಸರು ನೀವು ಅಭಿನವ ಶ್ರೀರಘೂತ್ತಮರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सदोल्लाससमायुक्तमुखवाग्देहमानसाः ।
सन्तु नः श्रीसदात्मानः गुरवो जन्मजन्मनि ॥3॥
ಮಂದಸ್ಮಿತಮುಖರು ನೀವು ಸದಾ ಉಲ್ಲಾಸದ ತವರೂರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सर्वलोकहितार्थाय करुणापूर्णदृष्टयः ।
सन्तु नः श्रीसदात्मानः गुरवो जन्मजन्मनि ॥4॥
ಸರ್ವಜನ ಹಿತ ಬಯಸುವ ನೀವು ಕರುಣೆಯ ಸಾಗರರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

परिषन्मोदनिध्यादिसंस्थानां संप्रवर्तकाः ।
सन्तु नः श्रीसदात्मानः गुरवो जन्मजन्मनि ॥5॥
ಸಂಸ್ಥೆಗಳನ್ನು ಸ್ಥಾಪಿಸಿ ನೀವು ಸತ್ಕಾರ್ಯಗಳನ್ನು ನಡೆಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मातापित्रादयो भूत्वा छात्राणां सर्वपोषकाः ।
सन्तु नः श्रीसदात्मानः गुरवो जन्मजन्मनि ॥6॥
ತಂದೆತಾಯಿಗಳಿಗಿಂತಲೂ ನೀವು ಶಿಷ್ಯರ ಪೋಷಣೆ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

आबालयुवकानां सच्चारित्र्याचारबुद्धिदाः ।
सन्तु नः श्रीसदात्मानः गुरवो जन्मजन्मनि ॥7॥
ಯುವತಿಯುವಕರನ್ನು ನೀವು ಸನ್ಮಾರ್ಗಕೆ ತಂದು ಹಚ್ಚುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

गायत्रीरामकृष्णादिमन्त्राणामुपदेशकाः ।
सन्तु नः श्रीसदात्मानः गुरवो जन्मजन्मनि ॥8॥
ಮಂತ್ರೋಪದೇಶಿಸಿ ನೀವು ವಿಪ್ರತ್ವವ ಉಳಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

संप्रतिष्ठितदिग्जैत्रश्रीनृसिंहादिमूर्तयः ।
सन्तु नः श्रीसदात्मानः गुरवो जन्मजन्मनि ॥9॥
ಮೂರ್ತಿಗಳನ್ನು ಸ್ಥಾಪಿಸಿ ನೀವು ಸನ್ನಿಧಾನವ ತುಂಬುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

ससीतामूलरामादिसंस्थानप्रतिमार्चकाः ।
सन्तु नः श्रीसदात्मानः गुरवो जन्मजन्मनि ॥10॥
ಸಂಸ್ಥಾನ ಪೂಜೆಯ ನೀವು ನಿತ್ಯವೂ ಭಕುತಿಲಿ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मन्त्राक्षतबलेनैव तापत्रयनिवारकाः ।
सन्तु नः श्रीसदात्मानः गुरवो जन्मजन्मनि ॥11॥
ಮಂತ್ರಾಕ್ಷತೆಯಿಂದಲೇ ನೀವು ಕಷ್ಟಗಳನ್ನು ಕಳೆಯುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

मन्त्राक्षतबलेनैव सर्वसम्पत्प्रदायकाः ।
सन्तु नः श्रीसदात्मानः गुरवो जन्मजन्मनि ॥12॥
ಮಂತ್ರಾಕ್ಷತೆಯಿಂದಲೇ ನೀವು ಇಷ್ಟಗಳನ್ನು ಉಣಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

व्याख्याने नन्दशास्त्रे च सर्वदाऽऽसक्तबुद्धयः ।
सन्तु नः श्रीसदात्मानः गुरवो जन्मजन्मनि ॥13॥
ನಂದಶಾಸ್ತ್ರದಿ ಮಿಂದ ನೀವು ಆನಂದದಿ ಟಿಪ್ಪಣಿ ರಚಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

प्राचीनज्ञानिवर्येभ्यः सद्भक्त्या नतमस्तकाः ।
सन्तु नः श्रीसदात्मानः गुरवो जन्मजन्मनि ॥14॥
ಪ್ರಾಚೀನಜ್ಞಾನಿಗಳನ್ನು ನೀವು ಭಕುತಿಯಿಂದಲಿ ನಮಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

कृतजन्मशताब्दा ये गुरूणां पादसेवकाः ।
सन्तु नः श्रीसदात्मानः गुरवो जन्मजन्मनि ॥15॥
ಗುರುಗಳ ಶತಾಬ್ದವ ನೀವು ಸೇವಾರೂಪದಿ ಮಾಡಿದಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

श्रीसत्यात्मगुरून् हित्वा सद्गतिर्न भविष्यति ।
सन्तु नः श्रीसदात्मानः गुरवो जन्मजन्मनि ॥16॥
ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

सुसन्दर्भे गुरोः पीठारोहरौप्यमहोत्सवे ।
भवाम इति तत्काले भावयामस्तु धन्यताम् ॥17॥
ಭವ್ಯಪೀಠದಿ ಗುರುಗಳಿಗಿಂದು ರಜತಮಹೋತ್ಸವವು
ಕಣ್ತುಂಬಿಕೊಂಡ ನಾವೇ ಇಂದು ಧನ್ಯರು ಧನ್ಯರು

सत्यात्मगुरुदत्तश्रीवेदव्यासपदाश्रिता ।
साक्षीनाथेन रचितं पूर्वालूराङ्कितेन च ॥18॥
ಸಾಕ್ಷೀನಾಥವಿಠ್ಠಲಾಭಿನ್ನ ವೇದವ್ಯಾಸ ಪದಾಶ್ರಿತನು
ಆಲೂರಾನ್ವಯಜಾತನು ನಾನು ರಚಿಸುವೆ ಈ ಕೃತಿಯನ್ನು

सृतिपङ्कनिवृत्त्यर्थं सत्यात्मनुतिपङ्कजम् ।
समर्पितं सुभक्त्या श्रीसत्यात्मपदपङ्कजे ॥19॥
ಸಂಸಾರಬಾಧೆಯ ಕಳೆವುದು ಈ ಸತ್ಯಾತ್ಮನುತಿಪಂಕಜವು
ಭಕುತಿಯಿಂದರ್ಪಿಸುವೆ ಶ್ರೀಸತ್ಯಾತ್ಮಪದಪಂಕಜದಿ

॥ श्रीकृष्णार्पणमस्तु ॥

॥ श्रीपेजावरवराष्टकम् ॥

श्रीमन्न्यायसुधानेककृतसन्मङ्गलान् बुधान्।
अनेकग्रन्थकर्तृन् च वन्दे सुज्ञानवृद्धये॥1॥
ನಾಲ್ವತ್ತು ಶ್ರೀಮನ್ನ್ಯಾಯಸುಧಾಮಂಗಲಗಳಾಚರಿಸಿ ನಾಲ್ಮೊಗನ ಶಾಸ್ತ್ರದಿ ಗ್ರಂಥಗಳ ರಚಿಸಿ
ಜ್ಞಾನಸೂರ್ಯರೆನ್ನ ಹೃದಯದಿ ತತ್ವಜ್ಞಾನ ಬೀಜವ ಬಿತ್ತಲು ಗುರುರಾಜರ ಇಂದು ವಂದಿಸುವೆ॥

नैकशिष्यप्रशिष्यान् च राजभ्यो मार्गदर्शकान्।
नित्यपूजाजपासक्तान् नौमि भक्त्यभिवृद्धये॥2॥
ಬಹುಶಿಷ್ಯಪ್ರಶಿಷ್ಯರನು ಹೊಂದಿ ರಾಜನಾಯಕರಿಗೆ ಧರ್ಮಮಾರ್ಗವನು ತೋರುತ್ತ
ನಿತ್ಯಪೂಜಾಜಪತಪನಿರತರೆನ್ನಲಿ ಭಕ್ತಿ ಅಂಕುರಿಸಲು ಯತಿರಾಜರ ಇಂದು ನಮಿಸುವೆ ॥

समाजोद्धारकार्याणि कर्तृन् धर्मोपदेशकान्।
नमाम्यभिनवव्यासतीर्थान् वैराग्यसिद्धये॥3॥
ಅಭಯದಾನಾದ್ಯನೇಕ ಸಮಾಜಮುಖಿ ಕಾರ್ಯಗಳ ನಡುವೆಯೂ ಭಕ್ತರಿಗೆ ಧರ್ಮೋಪದೇಶವನು
ನೀಡುವವರೆನ್ನಲಿ ಸದ್ವೈರಾಗ್ಯವೀಯಲು ಅಭಿನವವ್ಯಾಸರಾಜರ ಇಂದು ನಮಿಸುವೆ॥

नैकालङ्कारकर्तृन् तान् हरिवाणे सदा रतान्।
कृतानेकव्रतान् सेवे तपसश्चाभिवृद्धये॥4॥
ಇಳಿವಯಸಿನಲು ಹರಿವಾಣಸೇವಾ ಕೃಷ್ಣಾಲಂಕಾರಗಳ ಮಾಡುತ್ತ ಅನೇಕ
ವ್ರತಗಳನಾಚರಿಸಿದವರೆನ್ನಲಿ ತಪವನೀಯಲು ಮುನಿರಾಜರ ಇಂದು ಸೇವಿಸುವೆ॥

लोककल्याणमाकर्तुं कल्याणनगरे स्थितान्।
राष्ट्रहंसान् भजे योगपटून् पुण्याभिवृद्धये॥5॥
ಲೋಕಹಿತಕ್ಕಾಗಿ ಇನ್ನು ಕಲ್ಯಾಣನಗರದಿ ನೆಲೆನಿಂತ ರಾಷ್ಟ್ರಸಂತರೆನ್ನ
ಪುಣ್ಯವರ್ಧಿಸಲು ಯೋಗಪಟು ಯೋಗಿರಾಜರ ಇಂದು ಭಜಿಸುವೆ॥

शिष्येऽधिकारं भुवनेऽद्य रिक्तं
जनेषु प्रीतिं अखिलेषु यावत्।
शिष्येषु शास्त्रं हृदयेषु रामं
विश्वेशयोगीशविशेषमान्यः॥6॥
ಶಿಷ್ಯರಲಿ ಪೂಜಾಧಿಕಾರವಿಟ್ಟು ಎಲ್ಲ ಜನರಲಿ ಪ್ರೀತಿಯನಿಟ್ಟು
ವಿದ್ಯಾರ್ಥಿಗಳಲಿ ಶಾಸ್ತ್ರಜ್ಞಾನವಿಟ್ಟು ಹೃದಯಗಳಲಿ ರಾಮನ್ನಿಟ್ಟು (ದೇಶದ ಹೃದಯ ಅಯೋಧ್ಯೆ) ॥

निधाय नेतृष्वपि नैतिकत्वं
निधाय भक्तेषु च धार्मिकत्वं।
निधाय धर्मेषु तु सामरस्यं
वव्राज श्रीकृष्णपदं यतीश्वरः॥7॥
ಆಳುವವರಲಿ ನೈತಿಕತೆಯನಿಟ್ಟು ಭಕ್ತರಲಿ ಧಾರ್ಮಿಕತೆಯನಿಟ್ಟು
ಧರ್ಮಗಳಲಿ ಸಹಿಷ್ಣುತೆಯನಿಟ್ಟು ಜಗದಲಿ ತುಂಬಲಾಗದ ನಷ್ಟವನಿಟ್ಟು
ಸಾಕ್ಷಿನಾಥ ಶ್ರಿಕೃಷ್ಣನ ಪಾದಗಳಡಿಗೆ ನಡೆದರೋ ಯತೀಶ್ವರವಿಶ್ವೇಶಸಂತ॥

श्रीविश्वेशान् प्रणौम्याप्तान् पञ्चपर्यायभूषणान्।
एकीकर्तृन् द्विजान् हिन्दून् अयोध्यारामपूजकान्॥8॥
ಆಪ್ತರ ಪಂಚಪರ್ಯಾಯಭೂಷಿತರ ವಿಪ್ರರ ಹಿಂದೂಗಳ ಒಗ್ಗೂಡಿಸಿದವರ
ಅಯೋಧ್ಯೆಯಲಿ ರಾಮನ ಪೂಜಿಸಿದ ವಿಶ್ವೇಶತೀರ್ಥರಿಗೆ ನಮಿಸುವೆನು॥

आलूरान्वयजातेन गुर्वनुग्रहमिच्छता।
साक्षीनाथेन रचितं पेजावरवराष्टकम्॥9॥
विश्वेशपाददत्तश्रीहयास्यार्चनपुण्यतः।
रचितं चार्पितं तस्मिन् गुरुश्रीपादपङ्कजे॥10॥
ಗುರ್ವನುಗ್ರಹಕಾಗಿ ಈ ಅಷ್ಟಕವು ಗುರುಗಳೇ ಕೊಟ್ಟ
ಹಯಾಸ್ಯಮೂರ್ತಿಯ ಪೂಜಾಪುಣ್ಯಫಲವು ಗುರುಗಳ ಪಾದಕಮಲಗಳಿಗೇ ಸಮರ್ಪಿತವು ॥

ಛಂದೋಭಂಗ, ಲಿಂಗವ್ಯತ್ಯಯಾದಿ ದೋಷಗಳಿಂದ ಕೂಡಿದ್ದರೂ ಹಂಸಕ್ಷೀರನ್ಯಾಯದಿಂದ ಗುರುಗಳ ಅನುಗ್ರಹಕ್ಕಾಗಿ ಮತ್ತು ಅವರ ಸಾಧನೆಗಳಿಗೆ ಹಾಗೂ ವ್ಯಕ್ತಿತ್ವಕ್ಕೆ ಒಂದು ನುಡಿನಮನದ ಪ್ರಯತ್ನ 🙏🙏🙏