ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Wednesday, 6 October 2010

ಈ ಸಾವು ನ್ಯಾಯವೇ!?



ಇರುವಾಗ ನೂರಾರು ದುರ್ಜನರು ಇಳೆಯೊಳು 
ನೋಡಲಾರೆ ತಂದೆ-ತಾಯಿಗಳ ಆ ಗೋಳು!
ಏಕೆ ಈ ಮುಗ್ಧ ಬಾಲಕನೆ ಬೇಕಿತ್ತೆ ಯಮನೇ?
ಇಷ್ಟು ನಿಷ್ಕರುಣಿಯೇ ನಿನ್ನ ಹೃದಯ!?


ಜಗತ್ತನ್ನೇ ನೋಡದ ಆ ಬಾಲಕನೆಲ್ಲಿ!
ಜಗತ್ತನ್ನೇ ನುಂಗುವ ನೀನೆಲ್ಲಿ!?
ಅವನ ಜತೆ ಸರಸವಾಡುವೆಯಲ್ಲ!
ಇದು ಸಾವೇ? ಈ ಸಾವು ನ್ಯಾಯವೇ!? 


ಎಲ್ಲಿ ಅಡಗಿ ಕುಳಿತಿರತ್ತೋ ಆ ಸಾವು!
ಎಂದು ಬಂದೆರಗುತ್ತದೋ ಆ ಮೃತ್ಯು!
ಅಕಟಕಟಾ ಹೇ ಮೃತ್ಯುoಜಯನೇ !
ಅಪಮೃತ್ಯು ಪರಿಹರಿಸು ಅನಿಲದೇವ!

:(

ದಿನಾಂಕ ೦೫-೧೦-೨೦೧೦ ರಂದು ಅಪಮೃತ್ಯುವಿಗೆ ಈಡಾಗಿ ಇಹಲೋಕ ತ್ಯಜಿಸಿದ ೧೫ ವರ್ಷದ ಬಾಲಕ ವೆಂಕಟೇಶನಿಗೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥನೆ!!

2 comments: