ಈ ಅಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವಿಚಾರವಂತ ಮನುಷ್ಯನಿಗೂ ಒಂದಲ್ಲ ಒಂದು ದಿನ ಈ ಪ್ರಶ್ನೆ ಬಂದಿರಲೇ ಬೇಕು.
ದೇವರು ಇದ್ದಾನೆಯೋ ಇಲ್ಲವೋ!? ಆಳವಾಗಿ ಯೋಚಿಸುತ್ತ ಹೋದರೆ, ನಮ್ಮ ಸುತ್ತಮುತ್ತಲಿನ ಪ್ರಪಂಚ, ಜೀವಿಗಳು ಎಲ್ಲವನ್ನೂ ನೋಡುತ್ತಿದ್ದರೆ ನಮಗೆ ದೇವರು ಇದ್ದಾನೆ ಎಂಬುದು ನಿಶ್ಚಯವಾಗುತ್ತದೆ. ಕೇವಲ ಕಣ್ಣಿಗೆ ಅಗೋಚರ ಆದ ಕಾರಣಕ್ಕೆ ದೇವರ ಅಸ್ತಿತ್ವವನ್ನು ಅಲ್ಲಗೆಳೆಯುವುದು ತಪ್ಪು! ದೇವರ ಇರುವಿಕೆಯ ಬಗ್ಗೆ, ದೇವರ ಬಗ್ಗೆ ಹಲವಾರು ಶಾಸ್ತ್ರಗಳು ಪುರಾಣಗಳು ಒಂದು ಕಡೆ ಪ್ರಮಾಣಗಳಾಗಿದ್ದರೂ, ಹಲವಾರು ಜನರು ತಪ್ಪಾಗಿ ತಿಳಿಯುವಂತೆ ವಿಜ್ಞಾನ ಎನ್ನುವುದು ದೇವರ ಅಸ್ತಿತ್ವಕ್ಕೆ ವಿರುದ್ಧವಾಗಿಲ್ಲ. ವಿಜ್ಞಾನವೂ ಕೂಡ ದೇವರ ಅಸ್ತಿತ್ವದ ಬಗ್ಗೆ ಒತ್ತಿ ಒತ್ತಿ ಹೇಳುತ್ತದೆ/ಹೇಳುತ್ತಿದೆ! ದೇವರು ಇದ್ದಾನೆ ಎಂಬುದನ್ನ ಪ್ರತಿಯೊಬ್ಬ ಪ್ರಮುಖ ವಿಜ್ಞಾನಿಯೂ ನಿಖರವಾಗಿ ಒಪ್ಪಿದ್ದಾನೆ! ಇದನ್ನು ನಂಬುವುದೂ ಕಷ್ಟವಾಗುತ್ತದೆ! ವಿಜ್ಞಾನ-ಧರ್ಮ ಈ ಎರಡೂ ಒಟ್ಟಿಗೆ ಹೆಜ್ಜೆ ಇಡುತ್ತಿದ್ದರೂ, ಅರೆ ತಿಳುವಳಿಕೆ ಹೊಂದಿದ (ಅತ್ತ ವಿಜ್ಞಾನವನ್ನೂ ಸರಿಯಾಗಿ ತಿಳಿಯದ, ಇತ್ತ ಧರ್ಮವನ್ನೂ ಸರಿಯಾಗಿ ಅರ್ಥೈಸಿಕೊಳ್ಳದ) ಮಧ್ಯಸ್ಥರು ಅಪಪ್ರಚಾರ ಮಾಡಿ ಜಗಳಕ್ಕೆ ನಾಂದಿ ಹಾಡುತ್ತಿದ್ದಾರೆ!
ನನ್ನ ಸ್ನೇಹಿತನಾದ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿ, ಲಕ್ಷ್ಮೀಶನು ಬಹಳ ಸುಂದರವಾಗಿ ಪ್ರಮಾಣಗಳ ಸಹಿತವಾಗಿ ವಿವರವಾಗಿ ಅಧ್ಯಯನ ಮಾಡಿ, ಅದನ್ನ ಗುರುಗಳ ಮುಂದೆ present ಮಾಡಿದ್ದಾನೆ. ಅದರ video ಅನ್ನು ಈ post ನಲ್ಲಿ ಹಾಕುತ್ತಿದ್ದೇನೆ. ಎಲ್ಲ ಆಸ್ತಿಕ ಬಂಧುಗಳು ಅದನ್ನು ನೋಡಿ ದೇವರ ಅಸ್ತಿತ್ವದ ವಿಷಯದಲ್ಲಿ ಏನಾದರೂ ಸಂಶಯಗಳಿದ್ದರೆ ಪರಿಹರಿಸಿಕೊಳ್ಳಬೇಕು.
ಆ video ನೋಡಲು ಇಲ್ಲಿ ಕ್ಲಿಕ್ ಮಾಡಿರಿ :)

No comments:
Post a Comment