ನಮ್ಮ ಯಾತ್ರೆಯ ಅವಿಸ್ಮರಣೀಯ ಸವಿನೆನಪುಗಳ ಕೆಲವು ತುಣುಕುಗಳು :)
ಒಟ್ಟು ೫ ಜನ... ಕೃಷ್ಣಾಚಾರ್ , ಸತ್ಯವಿಜಯ , ಬದರೀನಾಥ , ವಿಶ್ವಜ್ಞ ಮತ್ತು ಜಯತೀರ್ಥ :)
PAYANA 1 : ಬೆಂಗಳೂರಿನಲ್ಲಿ ಗದ್ದಲ :)ಬೆಂಗಳೂರುನಿಂದ ೧-೦೭-೨೦೧೦ ರಂದು ಬೆಳಿಗ್ಗೆ ೮.೪೦ ಗಂಟೆಗೆ ಇತ್ತು ದೆಲ್ಹಿಗೆ ವಿಮಾನ... ಅಂದು ಬೆಳಿಗ್ಗೆ ಊಟ ಮಾಡಿ ಮನೆಯಲ್ಲಿ ತಂದೆ ತಾಯಿಯರಿಗೆ ನಮಿಸಿ ,
ಸತ್ಯ ವಿಜಯ್ ನ car ನಲ್ಲಿ ಹೊರಟೆವು airport ಗೆ..
 |
| ಮನೆ ಹತ್ತಿರ |
 |
| in airport |
ಪ್ರಥಮ ಚುಂಬನಂ ದಂತ ಭಗ್ನಂ ಅನ್ನೋ ಥರ ಇತ್ತು ವಿಮಾನ ಪ್ರಯಾಣ... ನಾವೇ ಎಲ್ಲರಿಗಿಂತ late ಆಗಿ ಹೋದೆವು... ಎಲ್ಲ ಪ್ರಯಾಣಿಕರೂ ನಮಗಾಗಿ ಕಾಯುತ್ತಿದ್ದರು... boarding pass ತೆಗೆದುಕೊಂಡ ಮೇಲೆ ಕೃಷ್ಣಚಾರ್ ಮತ್ತು ನನ್ನ ತಮ್ಮ toilet ಗೆ ಹೋಗಿದ್ರು... ಅವರನ್ನು ಹುಡುಕುವಷ್ಟರಲ್ಲಿ ಎಲ್ಲರಿಗೂ ರೋಸಿ ಹೋಗಿತ್ತು... ಅವರಂತೂ ಹಲವಾರು ಬಾರಿ final call to vishwajna and krishnachar ಅಂತ ಅರಚುತ್ತಿದ್ದರು... ನಮ್ಮ ಮನೆಗೆ call ಕೂಡ ಮಾಡಿದ್ದರು...ಇವರೋ ಏನೂ ತಿಳಿಯದವರಂತೆ ಎಲ್ಲ ಮುಗಿಸಿ ಬಂದರು... ಇಲ್ಲಿಂದ ಶುರುವಾಯ್ತು ನೋಡಿ ನಮ್ಮ funny ಪಯಣ... ಹೊಟ್ಟೆ ಹುಣ್ಣಾಗುವಂತೆ ನಕ್ಕು ಕೊನೆಗೆ ವಿಮಾನದಲ್ಲಿ ಕುಳಿತೆವು... ಅಲ್ಲಿ ನನಗೆ window seat ಸಿಕ್ಕಿತ್ತು ... ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ದೇವರನ್ನು ನೆನೆಯುತ್ತ ಪ್ರಯಾಣ ಆರಂಭಿಸಿದೆವು... ನೋಡು ನೋಡುತ್ತಿದ್ದಂತೆ ವಿಮಾನ speed ಏರಿಸುತ್ತಾ ಮೇಲೆ ಹಾರಿತು :)
 |
| insight of flight |
 |
| on runway |
ಅದೊಂದು ಸುಂದರ ಅನುಭವ.. ಆದ್ರೆ ನಮ್ ಕರ್ನಾಟಕದ ಕೆಂಪು ಡಬ್ಬಿ bus ಗಿಂತ ಅಷ್ಟೇನ್ ಚನ್ನಾಗಿರ್ಲಿಲ್ಲ ನಮ್ spiceJet ವಿಮಾನ... ಒಳ್ಳೆ ಸ್ಪೀಡ್ pickup ಆದ್ಮೇಲೆ ಎತ್ತರದಲ್ಲಿ ಹಾರಾಡುತ್ತಿದ್ದ ಅನುಭವ ... ಸುಮಾರು ೨೦೦೦೦ ಅಡಿಗಳಷ್ಟು ಎತ್ತರ ಹೋಗಿದ್ದೆವು... "ಮೋಡದ ಒಳಗೆ..." ಹಾಡು ನೆನಪಾಯಿತು... ಆ ಹಾಡನ್ನು ಗುನುಗುತ್ತ ಮಧ್ಯೆ ಮಧ್ಯೆ ತಂಟೆ ತರಲೆಗಳನ್ನೂ ಮಾಡುತ್ತ ಹೊರಗಡೆ ಪ್ರಕೃತಿಯ snaps ತೆಗೆಯುತ್ತ ಹೋಗುತ್ತಿದ್ದೆವು... ನೋಡು ನೋಡುತ್ತಿದ್ದಂತೆ ಮೋಡಗಳು ಎದುರಾಗಿ ಒಳ್ಳೆ tvs ಮೇಲೆ hump ದಾಟಿದ ಅನುಭವವಾಗುತ್ತಿತ್ತು... ಅದೊಂದು ಹೊಸ ಅನುಭವ... ಚನ್ನಾಗಿತ್ತು...
 |
| ಮೋಡದ ಒಳಗೆ :) |
 |
| a view from 20k ft height |
ತರುಣಿಯರು (ಗಗನಸಖಿಯರು) ಬಂದು instructions ಕೊಡುವಾಗ ಅವರನ್ನು ನೋಡಿ ನಕ್ಕಿದ್ದೆ ನಕ್ಕಿದ್ದು (ತಮಾಷೆಗೆ ಸುಮ್ಸುಮ್ನೆ)... ಅವರೋ ನಮ್ಮ ಮುಖ ನೋಡಿ smile ಮಾತ್ರ ಮಾಡುತ್ತಿದ್ದರು :)...
 |
| railway track : |
ವಿಮಾನದಲ್ಲಿಯ toilet ಅಂತೂ ತುಂಬಾ ಚಿಕ್ಕದು! lol :) ಕೊನೆಗೂ ಸುಮಾರು ೧೧ ಗಂಟೆ ಅಷ್ಟೊತ್ತಿಗೆ landing ಅಂತ ಸೂಚನೆ ಕೊಟ್ರು... ನಾವೆಲ್ಲ ಸುಮ್ನೆ ಅವರಿಗೋಸ್ಕರ belt ಹಾಕೊಂಡು ready ಆದ್ವಿ ... ವಿಮಾನ ನಿಧಾನಕ್ಕೆ ಭೂ ಸ್ಪರ್ಶ ಮಾಡಿತು... ಕಿವಿಯಲ್ಲಿ vuvuzella ಬಾರಿಸಿದ ಹಾಗೆ ಆಗುತ್ತಿತ್ತು... ಬಾಗಿಲಲ್ಲಿ ನಿಂತ ತರುಣಿಯರು "thank you" ಅಂತ wish ಮಾಡುತ್ತಿದ್ದರೆ ನಾವು smile ಕೊಟ್ಟು ಹೊರಬಂದೆವು... ಒಟ್ಟಿನಲ್ಲಿ ಮೊದಲ ಬಾರಿಯ ವಿಮಾನ ಪಯಣ ಒಂದು ಸುಂದರ ಅನುಭವ ಕೊಟ್ಟಿತು... ಹೊರಗೆ ನಿಂತು ೨-೩ snaps ತೊಗೊಂಡೆವು...
 |
| a top view of land :) |
 |
| while landing |
ನನ್ನ ತಮ್ಮನ ಮುಗ್ಧತನವೋ ತುಂಟತನವೋ ತಿಳಿಯದು, ಗಗನಸಖಿಯರನ್ನು ನೋಡಿ ಕೇಳಿದ, "ಅವರ ಮುಖ ಮಾತ್ರ ಬೆಳ್ಳಗಿದೆ ಕಾಲು ಮಾತ್ರ ಯಾಕೆ ಅಷ್ಟು ಕಪ್ಪಗಿದೆ?" ಅಂತ... ಅವರು ಮಂಡಿ ತನಕ ಕಪ್ಪು socks ಧರಿಸಿದ್ದರು :) ಇದನ್ನು ನೆನೆಯುತ್ತ ನಗುತ್ತ ಹೊರಗೆ ಬಂದು luggage ಅನ್ನು collect ಮಾಡ್ಕೊಂಡು airport ನಿಂದ ಹೊರ ಬಂದೆವು...
 |
| in Delhi Airport |
ಅಷ್ಟರಲ್ಲಿ ಅಲ್ಲಿ ನಮಗಾಗಿ indica car ಕಾಯುತ್ತಿತ್ತು...ಅದ್ರಲ್ಲಿ ನಮ್ಮ 100kg luggage ಹಾಕಿ ಹೊರಟೆವು ಡೆಲ್ಲಿಯ ramrao road ಗೆ.. ಅಲ್ಲಿ ಬಿಸಿಲೋ ಬಿಸಿಲು...
 |
| our SpiceJet flight |
ಅಲ್ಲಿ ಇರೋ transport company ಅಲ್ಲಿ ಕೃಷ್ಣಾಚಾರ್ bike ಬಂದಿತ್ತು.. ಅವರನ್ನು ಅಲ್ಲಿ drop ಮಾಡಿ ನಾವು ಹೊರಟೆವು ಹರಿದ್ವಾರದ ಕಡೆಗೆ :) ಅವರೂ ಕೂಡ ನಮ್ಮ ಹಿಂದೆಯೇ ಹೃತಿಕ್ ರೋಶನ್ ಥರ pulsar bike ನಲ್ಲಿ ಬರುತ್ತಿದ್ದರು... ಆಗಾಗ ಅವರ snaps ತೆಗೆದು ಮಜಾ ಮಾಡುತ್ತಿದ್ದೆವು...
 |
| sub river of Ganga |
PAYANA 2 : ಹರಿದ್ವಾರದ ಕಡೆಗೆ :)ದಾರಿಯುದ್ದಕ್ಕೂ ಕಾಲುವೆ (Sub river of Gange) ಹರಿಯುತ್ತಿತ್ತು... ಅದರ ಸೌಂದರ್ಯವನ್ನು ಸವಿಯುತ್ತ driver Ranjith Maharaj ನೊಡನೆ ಹರಟೆ ಹೊಡೆಯುತ್ತ ಹೋಗುತ್ತಿದ್ದೆವು... ಅವನೋ ಹಿಂದಿಯ ಹಳೆಯ ಹಾಡುಗಳನ್ನು ಹಾಕಿದ್ದ.. ಹೊರಗಿನಿಂದ ತಂಪಾದ ಗಾಳಿ ಬೀಸುತ್ತಿತ್ತು... ಏನೋ ಒಂಥರಾ romantic scene create ಆಗಿತ್ತು ಅಲ್ಲಿ... ಅಲ್ಲಿಯೇ ದಾರಿಯಲ್ಲಿ ನಿಲ್ಲಿಸಿ ತಣ್ಣಗಿನ ನೀರು ಕುಡಿದೆವು... ಎಂದೂ ರುಚಿಸದ ನೀರು ಅಂದು ಬಹಳ ರುಚಿಸಿತ್ತು... ಅಂದು ರಾತ್ರಿ ೮ ಗಂಟೆ ಹೊತ್ತಿಗೆ ಹರಿದ್ವಾರ ಸೇರಿದೆವು...
 |
| Ganga in Haridwar |
ಅಲ್ಲಿ ಬಡೆ ಹನುಮಾನ್ ಮಂದಿರದಲ್ಲಿ ಇಳಿದುಕೊಂಡು ಅಲ್ಲೇ ರಾತ್ರಿ ಊಟ ಮಾಡಿ, ಬೆಳಿಗ್ಗೆ ಎದ್ದು ಬದರಿಗೆ ಹೊರಡುವುದು ಎಂದು ನಿಶ್ಚಯ ಮಾಡಿಕೊಂಡು ಅಲ್ಲಿಯೇ ಇರುವ ಕಾಳಿಕಾ ಮಂದಿರದಲ್ಲಿ ಸೊಳ್ಳೆಗಳೊಡನೆ ರಾತ್ರಿಯನ್ನು ಕಳೆದೆವು...
 |
| ಬಡೆ ಹನುಮಾನ್ |
ನಸುಕಿನಲ್ಲಿ ಎದ್ದು ನಿತ್ಯ ಶೌಚವನ್ನು ಮುಗಿಸಿ ಗಂಗಾ ನದಿಯಲ್ಲಿ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರಿಗಳವರೊಂದಿಗೆ ಪುಣ್ಯಸ್ನಾನ ಮಾಡಿದೆವು... ನದಿಯಲ್ಲಿ ಮುಳುಗುವುದು ಶುರುವಾಗಿದ್ದು ಇಲ್ಲಿಂದಲೇ...
 |
| ಪಲಿಮಾರು ಮಠ : ಪುಣ್ಯಸ್ನಾನ |
ನಂತರ ಶ್ರೀ ಮಠದ ದೇವರ ದರ್ಶನ ಮಾಡಿ ಬಡೆ ಹನುಮಾನ್ ದರ್ಶನ ಪಡೆದು ಬದರಿ ಯಾತ್ರೆಗೆ ಸುಮಾರು ೧೦ ಗಂಟೆಗೆ ಹೊರಟೆವು... ಈ ಬಾರಿ ಸಿಕ್ಕ driver ಅಂತೂ ಮುತ್ತು :)
 |
| ಸ್ನಾನಾನಂತರ |
ತುಂಬಾ ಚನ್ನಾಗಿ drive ಮಾಡಿ ನಮ್ಮ ಮನ ಮೆಚ್ಚುಗೆ ಗಳಿಸಿದ...
 |
| Ganga in Haridwar |
ಹರಿದ್ವಾರದಿಂದ 20km ಮುಂದೆ ಋಷಿಕೆಶ್ ಅಂತ ಒಂದು ಪುಣ್ಯಸ್ಥಳ ಇದೆ. ಅಲ್ಲಿಯೂ ಕೂಡ ಗಂಗಾ ನದಿಯಲ್ಲಿ ಮಿಂದು ನಮ್ಮ ಪಯಣವನ್ನು ಮುಂದುವರಿಸಿದೆವು...
 |
| A sample Scary Road to Badrinath |
PAYANA 3 : ಬದರಿಯೆಡೆಗೆ ಇದಂತೂ ಇಡೀ ಜೀವನದಲ್ಲಿ ಮರೆಯಲಾಗದ ಸುಂದರ ಅನುಭವ... ಅಂದು ೨-೦೭-೨೦೧೦ ಬೆಳಿಗ್ಗೆ ೧೧ ಗಂಟೆ ಸಮಯ.. ಎಂಥ ರುದ್ರರಮಣೀಯ ದೃಶ್ಯ!! ಅಬ್ಬಾ ! ಅತ್ತ ದರಿ ಇತ್ತ ಪುಲಿ ಎಂಬಂತೆ , ಅತ್ತ ಕಡಿದಾದ ರಸ್ತೆ ಯಲ್ಲಿ ಬೆಟ್ಟದಿಂದ ಬೀಳುವ ರಾಶಿ ರಾಶಿ ಕಲ್ಲುಗಳು, ಇತ್ತ ಬಿದ್ದರೆ ಎಲುಬೂ ಸಿಗದಂಥಹ ಪ್ರಪಾತ... ಇಂಥ ಭಯಾನಕವಾದ ದೃಶ್ಯ ಮತ್ತೆಲ್ಲೂ ಸಿಗದು ಅಂತ ನನ್ನ ಅನಿಸಿಕೆ...
 |
| Sunset |
330km ಉದ್ದಕ್ಕೂ ಇಂಥ ರಸ್ತೆಯೇ... ಜೀವ ಕೈಯಲ್ಲಿ ಹಿಡಿದು ಹೋಗಬೇಕು... ವರ್ಣಿಸಲು ಅಸಾಧ್ಯ...
 |
| Sunrise |
 |
| Sample Road |
 |
| view from car |
 |
| Road on Hill |
 |
| Alaka Nanda River |
ಬದರಿಗೆ ಹೋಗುವ ದಾರಿಯಲ್ಲಿ ಒಟ್ಟು 6 ಪ್ರಯಾಗಗಳು (ಎರಡು ನದಿಗಳ ಸಂಗಮ ಸ್ಥಳ) ಬರುತ್ತವೆ... ಎಲ್ಲ ಪ್ರಯಾಗಗಳಲ್ಲೂ ನಾವು ಪುಣ್ಯಸ್ನಾನವನ್ನು ಮಾಡಿದೆವು... ಪಯಣಿಸುತ್ತಾ ದೇವಪ್ರಯಾಗ ಸೇರಿದೆವು...
->ದೇವಪ್ರಯಾಗ :-)ಇದು ಮೊದಲನೇಯದಾಗಿ ಸಿಗುವ ಪ್ರಯಾಗ...
ಇಲ್ಲಿ ಅಲಕನಂದ ಮತ್ತು ಗಂಗಾ ನದಿಗಳ ಸಂಗಮವಾಗುತ್ತದೆ...
 |
| Deva Prayaga |
 |
| Jaggesh Guha lol :) |
ಇಲ್ಲಿ ನಡೆದ ಒಂದು funny ಪ್ರಸಂಗ...
ಅಲ್ಲಿ ಒಂದು ಗುಹೆ ಥರ ಇತ್ತು... ನನ್ನ ತಮ್ಮ ಸ್ವಲ್ಪ ಜಾಸ್ತಿ ಮಾತು... sudden ಆಗಿ ಆ ಗುಹೆಯನ್ನು ತೋರಿಸಿ ಇದು ಜಗ್ಗೇಶ್ ತಪಸ್ಸು ಮಾಡಿದ ಜಾಗ ಅಂತ ಹೇಳಿದ. ಎಲ್ಲರೂ ಒಂದು ಕ್ಷಣ ಹೌದೇನೋ ಅನ್ನುವಂತೆ ಹೇಳಿದ... ಕೃಷ್ಣಾಚಾರ್ ಅಂತೂ ನಂಬಿಯೇ ಬಿಟ್ಟಿದ್ದರು.. ಅವರು ಇಂದಿಗೂ ಆ ಸ್ಥಳವನ್ನು ಮರೆಯಲು ಸಾಧ್ಯವಿಲ್ಲ :)
ಅದನ್ನು ನೆನಪಿಸಿಕೊಂಡು ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು..
 |
| In Deva Prayaga |
ಅಲ್ಲಿಂದ ಮುಂದೆ ಹೊರಟೆವು... ಎಲ್ಲರಿಗೂ ಹಸಿವು ಬಾಯಾರಿಕೆ ಆಗಿದ್ದರಿಂದ ದಾರಿಯಲ್ಲಿ ನಿಲ್ಲಿಸಿ ಅವಲಕ್ಕಿ ಮತ್ತು ಇತ್ಯಾದಿ ತಿಂಡಿಗಳನ್ನು ತಿಂದೆವು... ನಂತರ ಸಂಜೆ ಹೊತ್ತಿಗೆ ಸಿಕ್ಕ ಎರಡನೇ ಪ್ರಯಾಗ ರುದ್ರಪ್ರಯಾಗ...
->ರುದ್ರಪ್ರಯಾಗ :-) |
| In Rudra Prayaga |
ಹೆಸರಿಗೆ ತಕ್ಕಂತೆ ಇತ್ತು ಈ ಪ್ರಯಾಗ... ರುದ್ರರಮಣೀಯ... ಇದು ಅಲಕನಂದ ಮತ್ತು ಮಂದಾಕಿನಿ ನದಿಗಳ ಸಂಗಮ ಸ್ಥಳ... ಅಲಕನಂದ ಸೌಮ್ಯವಾಗಿ ಹರಿಯುತ್ತಿದ್ದರೆ ಮಂದಾಕಿನಿ ಮಾತ್ರ ರಭಸವಾಗಿ ಹರಿಯುತ್ತಿದ್ದಳು...
ಅಂದು ಸಂಜೆ ಅಲ್ಲಿ ನಡೆದ ಆರತಿ ಮನೋಹರವಾಗಿತ್ತು... ಇಲ್ಲಿಯೇ ದಡದಲ್ಲಿ ಇರುವ ದೇವಸ್ಥಾನದಲ್ಲಿ ಒಂದೈದು ನಿಮಿಷ ವಿಶ್ರಾಂತಿ ಪಡೆದು ಮತ್ತೆ ನಮ್ಮ ಪಯಣವನ್ನು ಶುರು ಮಾಡಿದೆವು...
 |
| ಆರತಿ ಸ್ಥಳ |
ಅಷ್ಟರಲ್ಲಿ ರಾತ್ರಿ ಆಗಿದ್ದರಿಂದ halt ಆಗಬೇಕಾಗಿ ಬಂತು.. ಮುಂದಿನ ಪ್ರಯಾಗವಾದ ಕರಣಪ್ರಯಾಗದಲ್ಲಿ lodge ಒಂದರಲ್ಲಿ ಇಳಿದುಕೊಂಡೆವು...
 |
| Fun In Lodge |
 |
| Sunrise in Karana Prayaga |
->ಕರಣಪ್ರಯಾಗ :-)lodge ನಲ್ಲಿ ಮಸ್ತಿಯೋ ಮಸ್ತಿ :) ದುಡ್ಡು ಕೊಟ್ಟಿದ್ದೇವೆಂದು ದಾಂಧಲೆ ಹಾಕಿದ್ದೇ ಹಾಕಿದ್ದು...
ಅಂದು ರಾತ್ರಿ ಇಲ್ಲಿಯೇ ತಂಗಿ ಬೆಳಿಗ್ಗೆ ನಸುಕಿನಲ್ಲಿ ಮನಮೋಹಕ ಸೂರ್ಯೋದಯವನ್ನು ನೋಡಿದೆವು.. ಅದೊಂದು ಅದ್ಭುತ ದೃಶ್ಯ...
 |
| In Karana Prayaga |
ಮೋಡದ ಮರೆಯಲ್ಲಿ ಕೆಂಪಾದ ಸೂರ್ಯನನ್ನು ನೋಡುವುದೇ ಆನಂದ...
 |
| Karana Prayaga |
ಇದು ಅಲಕನಂದ ಮತ್ತು ಪಿಂಡಾರ್ ನದಿಗಳ ಸಂಗಮ ಸ್ಥಳ... ಇಲ್ಲಿ ಬೆಳಗಿನ ಅಹ್ನಿಕಾದಿಗಳನ್ನು ಮುಗಿಸಿ, ನಮ್ಮ ಪ್ರಯಾಣವನ್ನು ಆರಂಭಿಸಿದೆವು... ಮುಂದಿನ ಸಂಗಮ ನಂದಪ್ರಯಾಗ...
 |
| Cool Krishnachar |
->ನಂದಪ್ರಯಾಗ :-)ಇದಕ್ಕೆ ಸ್ವಲ್ಪ ದೂರ ನಡೆಯಬೇಕು... ಇದು ಅಲಕನಂದ ಮತ್ತು ನಂದಾಕಿನಿ ನದಿಗಳ ಸಂಗಮ ಸ್ಥಳ... ಇಲ್ಲಿ ಕೃಷ್ಣಾಚಾರ್ cooling glass ಹಾಕೊಂಡು photo tegeskondidde ಮಜಾ...
ಇಲ್ಲಿಂದನೆ ನಮಗೆ ತಣ್ಣಗಿನ ನೀರಿನ ಅನುಭವ ಶುರು ಆಗಿದ್ದು ! ಅಬ್ಬ ice water! ಅದರಲ್ಲಿ ಮೀಯುವುದು ಎಂದರೆ ಮೈ ಎಲ್ಲ ಮರಗಟ್ಟಿ ಹೋಗುತ್ತಿತ್ತು...
 |
| Nanda Prayaga |
 |
| In Nanda Prayaga |
ಅಂಥದರಲ್ಲೂ ನಾವೆಲ್ಲಾ ಮುಳುಗಿದೆವು... ಅದೊಂದು ಸುಂದರ ಅನುಭವ :)
ಎಲ್ಲರೂ photo ತೆಗೆಸ್ಕೊಂಡಿದ್ದು ಚನ್ನಾಗಿತ್ತು... ಇಲ್ಲಿಂದ ಮುಂದೆ ಸಿಗುವ ಪ್ರಯಾಗವೇ ವಿಷ್ಣುಪ್ರಯಾಗ...
->ವಿಷ್ಣುಪ್ರಯಾಗ :-)ಯಪ್ಪಾ ಇಲ್ಲಿಯ ನೀರು ನಂದಪ್ರಯಾಗದ ನೀರಿಗಿಂತ ತಣ್ಣಗಿತ್ತು... ಬೆಟ್ಟ ಹತ್ತುತ್ತ ಹೋದಂತೆ ಶೀತ ಜಾಸ್ತಿ ಆಗುತ್ತಿತ್ತು... ಇದು ವಿಷ್ಣುಗಂಗಾ ಮತ್ತು ಅಲಕನಂದ ನದಿಗಳ ಸಂಗಮ ಸ್ಥಳ...
 |
| Vishnu Prayaga |
 |
| Rock Fall on the way |
 |
| Satyanna with Military Officer |
ಇಲ್ಲಿಯೂ ಕಷ್ಟಪಟ್ಟು ಎಲ್ಲರೂ ನದಿಯಲ್ಲಿ ಮಿಂದೆವು... ಮುಳುಗುವ ಮುನ್ನ ಆಡಿದ ಆಟಗಳನ್ನಂತೂ ಮರೆಯಲಾಗದು... ಎಲ್ಲರ ಮೈ ಕೈ ಕೆಂಪಾಗಿತ್ತು.. ಯಪ್ಪಾ ಮರಗಟ್ಟಿ ಹೋಗಿದ್ದೆವು ಕ್ಷಣ ಕಾಲ!! ಅಲ್ಲಿಂದ ಮುಂದೆ ನಮಗೆ ಸಿಗುವುದೇ ಬದ್ರಿನಾಥ್ :)
 |
| Welcome Board in Badrinath :) |
ಬದ್ರಿನಾಥ್ ನಿಂದ ಮುಂದೆ 3km ಹೋದರೆ ಭಾರತದ ಕೊನೆಯ ಹಳ್ಳಿಯಾದ ಮಾನಾ ಸಿಗುತ್ತದೆ... ಇದೆ ಭಾರತದ ಕೊನೆ ಹಳ್ಳಿ... ಇಲ್ಲಿಂದ ಮುಂದೆ military control ಇರುತ್ತದೆ...
 |
| Maana : Last Indian Village |
 |
| A lovely Hill View |
ಇಲ್ಲಿಂದ china ಕೇವಲ 40km ಮಾತ್ರ... ಈ ಹಳ್ಳಿಯ ಹತ್ತಿರ ಸಿಗುವುದೇ ಮುಂದಿನ ಪ್ರಯಾಗವಾದ ಕೇಶವ ಪ್ರಯಾಗ...
->ಕೇಶವ ಪ್ರಯಾಗ :-)ಷಟ್ಪ್ರಯಾಗಗಳಲ್ಲಿ ಇದೆ ಕೊನೆಯ ಪ್ರಯಾಗ.. ಇದು ಭೋರ್ಗರೆಯುವ ಸರಸ್ವತಿ ಹಾಗು ಅಲಕನಂದ ನದಿಗಳ ಸಂಗಮ ಸ್ಥಳ... ಅತೀ ಹೆಚ್ಚು ತಣ್ಣಗಿರುವ ನೀರು... ಹಿಂದೆ ಹೇಳಿದ್ದಕ್ಕಿಂತ ದುಪ್ಪಟ್ಟು... ಮೈ ಕೈ ಎಲ್ಲ ಕೆಂಪಾಗಿ ಮುಟ್ಟಿದರೆ ಸ್ಪರ್ಶ ಜ್ಞಾನವೂ ಹೋದಂತೆ ಭಾಸವಾಗುತ್ತಿತ್ತು... ಆಹಾ !!! ದೇವರ ಸೃಷ್ಟಿ ವರ್ಣಿಸಲು ಅಸಾಧ್ಯ!
 |
| In Keshava Prayaga |
 |
| ಭೋರ್ಗರೆಯುವ ನದಿ :) |
ಸರಸ್ವತಿ ನದಿಯ ಹಿಂದೆ ಇತಿಹಾಸವೇ ಇದೆ... ಹಿಂದೆ ಭೋರ್ಗರೆಯುವ ನದಿಯನ್ನು ನೋಡಿ ಪಾಂಡವರಲ್ಲಿ ಒಬ್ಬನಾದ ಭೀಮಸೇನನು ನದಿಗೆ ಅಡ್ಡಲಾಗಿ ಒಂದು ದೊಡ್ಡ ಕಲ್ಲನ್ನು ಇಟ್ಟನಂತೆ... ಆ ಬಂಡೆ "ಭೀಮಗಲ್ಲು" ಅಂತಾನೆ ಪ್ರಸಿಧ್ಧಿ ಪಡೆದಿದೆ... ಅದನ್ನು ಇಂದಿಗೂ ಕಾಣಬಹುದು...
 |
| Badrinath Temple |
@ಬದ್ರಿನಾಥ್ :-)ಅಂದು ಸಂಜೆ ೬.೩೦ ಅಷ್ಟೊತ್ತಿಗೆ ಬದ್ರಿನಾಥ್ ಸೇರಿದೆವು... ಅಲ್ಲಿ ದೇವಸ್ಥಾನದ ಹತ್ತಿರವೇ ಒಂದು room ಅನ್ನು ಬಾಡಿಗೆಗೆ ಪಡೆದೆವು... ಅಲ್ಲಿ ಎಲ್ಲ luggage ಅನ್ನು ಇಟ್ಟು ಬದ್ರಿನಾಥ್ ನ ದರ್ಶನ ಪಡೆದೆವು...
 |
| ನಮ್ room |
ಅದೊಂದು ಸುಂದರ ಮೂರ್ತಿ... ದರ್ಶನ ಪಡೆದ ಮೇಲೆ ತಿಂಡಿ ತಿಂದು ಮಲಗಿದೆವು... ಮಾರನೆ ದಿನ ಬೆಳಿಗ್ಗೆ ಮಹಾಅಭಿಷೇಕ ಸೇವೆಗೆಂದು ೪ ಗಂಟೆಗೆ ಎದ್ದು ತಪ್ತ ಕುಂಡದಲ್ಲಿ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋದೆವು...
 |
| ನರ-ನಾರಾಯಣ ಪರ್ವತಗಳು |
ಇದು ಎರಡು ಮಹಾ ಪರ್ವತಗಳ ನಡುವೆ ಇರುವ ದೇವಸ್ಥಾನ... "ನರ" ಮತ್ತು "ನಾರಾಯಣ" ಎಂದು ಆ ಎರಡು ಪರ್ವತಗಳ ಹೆಸರು...
ತಪ್ತ ಕುಂಡ :- ಸೃಷ್ಟಿಯ ವಿಚಿತ್ರ ನೋಡಿ... ಇದು ತಪ್ತ ಕುಂಡ.. ಸದಾ ಬಿಸಿ ನೀರು ಬರುತ್ತಿರುತ್ತದೆ.. ಎಲ್ಲಿಂದ ಬರುತ್ತದೆಯೋ ಹೇಗೆ ಬರುತ್ತದೆಯೋ ತಿಳಿಯದ ವಿಚಾರ... ಅಂತೂ ಅಂಥ ಪ್ರದೇಶದಲ್ಲಿ ಇಂಥ ವೈಚಿತ್ರ್ಯ ಅದ್ಭುತವೇ ಸರಿ!!
 |
| ತಪ್ತ ಕುಂಡ |
ಅಂತೂ ಸುಂದರ ಮೂರ್ತಿಯ ವಿಶ್ವರೂಪವನ್ನು ನೋಡಿ ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ ಸಮಯ ೭ ಆಗಿತ್ತು... ಹೊರಗೆ ಬಂದ ಮೇಲೆ ಅಡುಗೆ ಮಾಡಿಕೊಂಡು ಊಟ ಮಾಡಿದೆವು... ಅಲ್ಲಿ ಇಲ್ಲಿ ಸುತ್ತಾಡುತ್ತ shopping ಮಾಡಿದೆವು... ಸುತ್ತಮುತ್ತಲಿನ ರಮಣೀಯ ಮನಮೋಹಕ ದೃಶ್ಯಗಳನ್ನು ನಮ್ಮ camera ಕಣ್ಣಿನಲ್ಲಿ ಸೆರೆ ಹಿಡಿಯುತ್ತ ಕುಳಿತಿದ್ದರೆ ದಿನ ಮುಗಿದಿದ್ದೇ ತಿಳಿಯಲಿಲ್ಲ!!
 |
| Alaka Nanda River |
 |
| Cloud on Hills |
 |
| Ice Formation |
 |
| Lovely scene :) |
 |
| All members in front of Badrinath temple :) |
ಅಂತೂ ನಮ್ಮ ಬದ್ರಿನಾಥ್ ಯಾತ್ರೆಯನ್ನು ಕಣ್ತುಂಬಿಕೊಂಡು ರಮಣೀಯ ಅವಿಸ್ಮರಣೀಯ ದೃಶ್ಯಗಳನ್ನು ಮನದಲ್ಲೂ ತುಂಬಿಕೊಂಡು ಚಿರವಾಗಿಸಿದೆವು...
 |
| A journey with Alakananda |
PAYANA 4 : ಮತ್ತೆ ಹರಿದ್ವಾರಕ್ಕೆ!ಮತ್ತೆ ಅದೇ ಭಯಾನಕ ರಸ್ತೆಯಲ್ಲಿ ಬೆಳಿಗ್ಗೆ ೬ ಗಂಟೆ ಅಷ್ಟೊತ್ತಿಗೆ ನಮ್ಮ ಪಯಣ ಶುರು ಮಾಡಿದೆವು... ಆದರೆ ಈ ಬಾರಿ ಇನ್ನೂ ಭಯಾನಕವಾಗಿತ್ತು... ಏಕೆಂದರೆ ಮೊದಲೇ ಭಯನಕವಾಗಿರುವ ಆ ರಸ್ತೆಗೆ ನಮ್ಮ ವರುಣರಾಯನೂ saath ನೀಡಿದ್ದ! muddy and skiddy road ನಲ್ಲಿ, land sliding and rock falls ಗಳನ್ನೂ ಕಣ್ಣೆದುರೇ ನೋಡುತ್ತಾ, ಪಾತಾಳಕ್ಕೆ ಬಿದ್ದು ಅಪ್ಪಚ್ಚಿಯಾದ car ನೋಡುತ್ತಾ ಹೋಗುವುದೇ ಒಂದು ರುದ್ರರಮಣೀಯ!!! ಅಂತೂ ನಮ್ಮ driver Ravat ನ ಚಾಣಾಕ್ಷತನದ driving ನಿಂದ ನಾವೆಲ್ಲಾ ಸಂಜೆ ೫ ಗಂಟೆ ಅಷ್ಟೊತ್ತಿಗೆ safe ಆಗಿ ಹರಿದ್ವಾರ ಸೇರಿದೆವು...
 |
| Back with bad face! |
 |
| A View |
 |
| Haridwar : Ganga |
 |
| Veerabhadra |
@ಹರಿದ್ವಾರ :- ಅಂದು ಸಂಜೆ ಗಂಗಾ ಆರತಿಯನ್ನು ಕಣ್ತುಂಬಿಕೊಂಡೆವು... ಎಂಥ ಮನಮೋಹಕ ದೃಶ್ಯ! ವಾಹ್!! ವರ್ಣಿಸಲಸದಳವು.. ಮತ್ತೆ ಬಡೆ ಹನುಮಾನ್ ಮಂದಿರದಲ್ಲಿ ನಮ್ಮ ಶಯನೋತ್ಸವ! :)
 |
| Mercury Shivalinga |
 |
| ಗಂಗಾ ಆರತಿ |
ಮಾರನೆ ದಿನ ಸುತ್ತಮುತ್ತಲಿನ ದೇವಸ್ಥಾನಗಳನ್ನು ನೋಡಿದೆವು... ಚಂಡಿ ದೇವಿ ಮತ್ತು ಮಾನಸಾ ದೇವಿ ದೇವಸ್ಥಾನಗಳಿಗೆ rope ways ನಲ್ಲಿ ಹೋಗಿದ್ದು ಅದ್ಭುತವಾಗಿತ್ತು! ನಂತರ ಸಂಜೆಯ ತನಕ shopping ಮಾಡಿದೆವು!
ಇಷ್ಟೆಲ್ಲಾ ಆಗುವಷ್ಟರಲ್ಲಿ ಸಂಜೆ ೭ ಆಗಿತ್ತು... ಅಲ್ಲಿಯೇ ಊಟ ಮಾಡಿ ಮಲಗಿದೆವು...
 |
| Rope way to Manasa Devi & ChandiMandir |
 |
| Just for fun :) |
PAYANA 5 : Back to Delhi !ಮಾರನೆ ದಿನ ಬೆಳಿಗ್ಗೆ ಎದ್ದು ನಿತ್ಯ ಶೌಚಗಳನ್ನು ಮುಗಿಸಿ ವಾಪಸ್ ದೆಲ್ಹಿಗೆ ಹೊರಟೆವು... ಇಡೀ ಯಾತ್ರೆಯಲ್ಲಿ ಈ ಪ್ರಯಾಣ ಅಷ್ಟು ಸ್ವಾರಸ್ಯವಾಗಿ ಇರಲಿಲ್ಲ! ಏಕೆಂದರೆ ನಾವು ಮತ್ತೆ ವಾಪಸ್ ಹೊರಟಿದ್ದೆವು... ಬಿಟ್ಟು ಬರಲು ಮನಸಿಲ್ಲದೇ ಒಲ್ಲದ ಮನಸ್ಸಿನಿಂದ ಗಟ್ಟಿ ಮನಸ್ಸು ಮಾಡಿ ಹೊರಟೆವು! :( ಡೆಲ್ಲಿ ಸೇರಿದಾಗ ರಾತ್ರಿಯಾಗಿತ್ತು... ಅಲ್ಲಿ ಕೃಷ್ಣ ಮಂದಿರದಲ್ಲಿ ಮಲಗಿಕೊಂಡೆವು...
 |
| India Gate |
 |
| Parliment |
 |
| Rashtrapati Bhavana |
@ಡೆಲ್ಲಿ :-)ಮಾರನೆ ದಿನ ಬೆಳಿಗ್ಗೆ ಬೇಗ ಊಟ ಮಾಡಿ, ಡೆಲ್ಲಿ ನೋಡಿ ಬರಲು ಹೊರಟೆವು... ಅಲ್ಲಿ INDIA GATE , ರಾಷ್ಟ್ರಪತಿ ಭವನ , parliment , ಮತ್ತು ಎಲ್ಲ ಮಂತ್ರಿಗಳ ಮನೆಯನ್ನೂ ನೋಡಿಬಂದೆವು.. (ಯಾವ್ ಮಂತ್ರಿನೂ ಕರೀಲಿಲ್ಲ :( )...
PAYANA 6 : Back to ನಮ್ಮ ಬೆಂಗಳೂರು :)
ಸಂಜೆ ೫.೪೫ ಗಂಟೆಗೆ flight book ಆಗಿತ್ತು... ಎಲ್ಲರೂ checking ಬಹಳ ಇರುತ್ತದೆ ಎಂದು ಹೇಳಿದ್ದರಿಂದ ಬೇಗನೆ airport ಗೆ ಹೋದೆವು... check in ಆದ್ಮೇಲೆ boarding pass ತೊಗೊಂಡು ಅಲ್ಲಿಯೇ ಸುತ್ತಾಡಿದೆವು... ಹವಾಮಾನ ಮತ್ತು ವಾತಾವರಣ ಸರಿ ಇಲ್ಲದ ಕಾರಣದಿಂದ flight ಅರ್ಧ ಗಂಟೆ late ಆಗಿ ಹೊರಟಿತು...
 |
| Back to Bengalooru |
ಮತ್ತೆ ಅದೇ ಅನುಭವ... ಆದರೆ ಈ ಬಾರಿ ಬೇರೆ ಗಗನಸಖಿಯರು :)
 |
| Lovely evening |
ನನ್ನ ತಮ್ಮ ಸ್ವಲ್ಪ ತುಂಟನಾಗಿದ್ದರಿಂದ ಅವರ ಹತ್ತಿರ ೪ ಬಾರಿ water bottle ಇಸ್ಕೊಂಡ... ಅವರನ್ನು ನೋಡಿ ತಮಾಷೆ ಮಾಡುತ್ತಿದ್ದ... ಬೆಂಗಳೂರು ಸೇರುವ ಹೊತ್ತಿಗೆ ನಮ್ ಸತ್ಯಣ್ಣ camera ಕಣ್ಣಿನಲ್ಲಿ ಹಲವಾರು ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದ... airport ಸೇರುವ ಹೊತ್ತಿಗೆ ಎಲ್ಲರಿಗೂ ಸುಸ್ತಾಗಿತ್ತು... ನಮ್ ಸತ್ಯಣ್ಣನ car ನಲ್ಲಿ ಮನೆ ತಲುಪುವ ಹೊತ್ತಿಗೆ ರಾತ್ರಿ ೧೧ ಆಗಿತ್ತು... ಬಂದು ಊಟ ಮಾಡಿ ಮಲಗಿದಾಗ ನಮ್ಮ ಈ ಯಾತ್ರೆ ಮಂಗಳ ಹಾಡಿತ್ತು :)
बोलो बद्रीविशाल की...
जय :)
U FORGOTTEN TO UPLOAD SNAPS OF RAYARA MUTT@BADRI N THE ROCK IN THE MIDDLE OF RIVER ALAKANANDA N KRISNA MANDIR @ SAFDARJUNG.. N OF COURSE MANASA DEVI TEMPLE N CHANDI DEVI TEMPLE...
ReplyDeletei did not forget that. i thought that is not required since there is nothing to write about them. And we don't have any snaps of manasa devi and chandi devi.
ReplyDeleteoh! "badarinathayatraa" badarinatha karmaka, kartrukaa cha! ;) naane badrig hogi bandang ittu! thnx 4 sharing :)
ReplyDeletewelcome :)
ReplyDeleteBadri.. nimma Badrinatha praayaana tumbaa chennaagi vivarisideeya. Naanu kooda hogi banda haage aaitu..
ReplyDeleteThank you Hari boss! :) nimmasht enilla bidi! :)
ReplyDelete