google google google... ಎಲ್ಲಾ ಗೂಗಲ್ ಮಯ ಆಗಿದೆ ಇಂದು... ಗೂಗಲ್ ತಿಳಿಸದ ವಿಷಯವೇ ಇಲ್ಲ... ಗೂಗಲ್ ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ... ಏನೇ ಆದರೂ ಸರಿ, ಏನಾದರೂ ತಿಳಿಯದೆ ಇದ್ದರೆ ಗೂಗಲ್ ಅಲ್ಲಿ search ಮಾಡಿ ತಿಳಿದು ಕೊಳ್ಳುತ್ತೇವೆ... ಒಂಥರಾ ಗೂಗಲ್ ನಮ್ಮ ಹೆಂಡತಿ/ಗಂಡ ಥರ ಆಗ್ಬಿಟ್ಟಿದೆ... ಹೆಂಡತಿ/ಗಂಡ ಜೊತೆ ಅಷ್ಟು ಸಮಯ ಕಳೆಯುತ್ತೇವೋ ಇಲ್ಲವೋ ಆದರೆ, ಗೂಗಲ್ ಗೆ ಮಾತ್ರ ತುಂಬಾ ಸಮಯ ಕೊಟ್ಟು ಅದನ್ನು ಹೆಂಡತಿ/ಗಂಡ ನಿಗಿಂತ ಹೆಚ್ಚು ಚೆನ್ನಾಗಿ ನೋಡುತ್ತೇವೆ... ಭಾರತೀಯರಾದ ನಾವು ನಿರ್ಜೀವ ವಸ್ತುಗಳನ್ನೂ ಸಹ ಸಂಬಂಧಿಕರಂತೆ ಕಾಣುತ್ತೇವೆ... ಉದಾಹರಣೆಗೆ ನಮ್ಮ ದೇಶವನ್ನು ನಾವು "ಭಾರತ ಮಾತೆ" ಎಂದು ಸಂಬೋಧಿಸಿ ತಾಯಿಯ ಸ್ಥಾನವನ್ನು ನೀಡಿದ್ದೇವೆ... ಅದನ್ನು ಬಂಕಿಮ ಚಂದ್ರ ಚಟರ್ಜಿ ಅವರ "ವಂದೇ ಮಾತರಂ" ಎಂಬ ಹಾಡನ್ನು ಹಾಡುವ ಮೂಲಕ ವ್ಯಕ್ತ ಮಾಡಿದ್ದೇವೆ :)
ಅದೇ ಥರ ಕರ್ನಾಟಕವನ್ನು "ಕರ್ನಾಟಕ ಮಾತೆ" ಅಥವಾ "ಕನ್ನಡ ಮಾತೆ" ಎಂದು ಕರೆಯುತ್ತೇವೆ... ಅದನ್ನು "ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಹಾಡಿನ ಮೂಲಕ ವ್ಯಕ್ತಪಡಿಸಿದ್ದೇವೆ... ಇದಷ್ಟೇ ಅಲ್ಲದೆ ಹಲವಾರು ಉದಾಹರಣೆಗಳು ಸಿಗುತ್ತವೆ.. "ಗಂಗಾ ಮಾತೆ" ಇತ್ಯಾದಿ...
"ಚಂದ ಮಾಮ" ಅಂತೂ ಮಕ್ಕಳಿಗೆ ಊಟ ಮಾಡಿಸುವಾಗ ತೋರಿಸಿ ಸಂತಸ ಪಡುತ್ತೇವೆ...
ಇದೆ ಥರ ನಾವು ಏಕೆ ಗೂಗಲ್ ಅನ್ನು "ಗೂಗಲ್ ಮಾತೆ" (if you like google to be looked as female) ಅಥವಾ "ಗೂಗಲ್ ಮಾಮ" (if you like google to be looked as male) ಅಂತ ಕರೆಯಬಾರದು?
ಹೀಗೊಂದು ವಿಚಾರ ನನ್ನ ತಲೆಗೆ ಹೊಳೆಯುತ್ತಿದ್ದಂತೆ, ಹಲವಾರು ವಿಚಾರ ಧಾರೆಗಳು ತಲೆಯಲ್ಲಿ ನುಸುಳಿ ಮರೆಯಾದವು...
ಒಂದು ವೇಳೆ ನಾವು ಗೂಗಲ್ ಅನ್ನು ಅಷ್ಟು ಪ್ರೀತಿ ಇಂದ "ಗೂಗಲ್ ಮಾತೆ" ಅಥವಾ "ಗೂಗಲ್ ಮಾಮ" ಅಂತ ಕರೆಯಲು ಶುರು ಮಾಡಿದರೆ ಹೇಗಿರಬಹುದು ಅಂತ ಸ್ವಲ್ಪ ಯೋಚನೆ ಮಾಡಿ... :)
ನಾನೂ ಯೋಚನೆ ಮಾಡ್ದೆ.. ಏನೋ ಕೆಲವು funny ಆದ ಕೆಲವು ಪ್ರಸಂಗಗಳು ಹೊಳೆದವು... ಅದರಲ್ಲಿ ಕೆಲವನ್ನು ಉದಾಹರಿಸಿದ್ದೇನೆ...
ನೀವು ಯೋಚನೆ ಮಾಡ್ರಿ... ನಿಮ್ಗೆನಾದ್ರು ಹೊಳೆದರೆ ದಯವಿಟ್ಟು post ಮಾಡೋದನ್ನ ಮರಿಬೇಡಿ :)
employee: whats is this ? i'm not getting this!
boss: ಅಲ್ಲಿ ನೋಡು ಅಲ್ಲಿ ನೋಡು... ಗೂಗಲ್ ಮಾಮಾ ... ಅವ್ನ ಕೇಳು ಪುಟ್ಟ... ನೋಡು ನೋಡು... ಹಂಗೆ :)
ಒಂದು ಹಾಡು (ಸಂಸ್ಕೃತದಲ್ಲಿ)...
"ಜೈ ಗೂಗಲ್ ಮಾತಾ , ಜ್ಞಾನಪ್ರದಾತಾ...
ಸರ್ವಪ್ರಖ್ಯಾತಾ, ಸರ್ವಾವಲಂಬಿತಾ...
ಜೈ ಗೂಗಲ್ ಮಾತಾ , ಜೈ ಜೈ ಗೂಗಲ್ ಮಾತಾ"
ಹಾಗೆ ಕನ್ನಡದಲ್ಲಿ ಬೇಡವೇ??
" ಭಾರತ ಚೀನಾ ಅಮೇರಿಕ,
ಇಂಗ್ಲೆಂಡ್ ರಷ್ಯ ಪಾಕಿಸ್ತಾನ,
ಯಾವ್ದೇ ಇರಲಿ ದೇಶ ... ಏನೇ ಇರಲಿ ಭಾಷೆ ... ಎಲ್ಲರ ನೆಚ್ಚಿನ ಕೂಸೇ...
Larry Page and Sergey Brin ತನುಜಾತೆ...
ಜಯ ಹೇ ಗೂಗಲ್ ಮಾತೆ "
ಅಯ್ಯೋ ಇದೆಲ್ಲ ಗೂಗಲ್ ನ ಹೊಗಳಲಿಕ್ಕೆ ಅಂತ ಅನ್ಕೋಬೇಡಿ... ನಂಗೇನ್ ಅಷ್ಟೊಂದು ಭಕ್ತಿ ಇಲ್ಲ... ಸುಮ್ನೆ ಕೂತಾಗ ತಲೆಗೆ ಬಂದ
ವಿಚಾರಾನ ಹಾಗೆ ಕೈ ಇಂದ blog ಗೆ ಇಳಿಸ್ದೆ ಅಷ್ಟೇ...
ನಿಮಗೆ ಇದೆ ಥರ ಇನ್ನೇನಾದ್ರೂ ಹೊಳೆದರೆ... ಹಂಗೆ ಇರಬೇಡಿ.. ಸುಮ್ನೆ comment ಬಿಸಾಕ್ಬುಡಿ ಬುದ್ದಿ :)
ನನ್ನ ಬಗ್ಗೆ ತಿಳಿಯಬೇಕೆ ?
- ಬದರೀನಾಥ ಆಲೂರು
- A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.
super maga....
ReplyDeletejai bolo badrinath ki.........
ReplyDeleteaur unki soch ki......... jai.......
hahaha lovely :P
ReplyDeleteSuper aagi ide ....
ReplyDelete