ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Wednesday, 29 September 2010

ಮನಸ್ಸು :)

ನಮ್ಮ ಇಂದ್ರಿಯಗಳಲ್ಲಿ ಪ್ರಮುಖವಾದದ್ದು ಮನಸ್ಸು. ಇದು ಆಂತರಿಕ ಇಂದ್ರಿಯ. ನಿಜವಾಗಿ ನೋಡಿದರೆ ಉಳಿದೆಲ್ಲ ಇಂದ್ರಿಯಗಳಿಗೆ ಇರುವಂತೆ ಈ ಮನಸ್ಸಿಗೆ ಒಂದು physical existance ಇಲ್ಲ. ಆದರೂ ಉಳಿದೆಲ್ಲ ಬಾಹ್ಯೆಂದ್ರಿಯಗಳಿಗೆ boss ಇದ್ದ ಹಾಗೆ ಈ ಮನಸ್ಸು.ಇದು ಹೇಳಿದಂತೆ ಎಲ್ಲಾ ಇಂದ್ರಿಯಗಳೂ ಕೇಳಬೇಕು. ನೋಡು ಎಂದರೆ ನೋಡಬೇಕು, ಬೇಡ ಅಂದರೆ ಬಿಡಬೇಕು. ಕುಳಿತ ಜಾಗದಲ್ಲಿಯೇ ಇದ್ದು ಇಡೀ ಪ್ರಪಂಚವನ್ನೇ ಸುತ್ತಿಬರಬಹುದು. ಎಲ್ಲವನ್ನೂ ಕ್ಷಣದಲ್ಲಿ ನೋಡಬಹುದು. ಎಲ್ಲದಕ್ಕೂ ಮನಸ್ಸು ಕಾರಣ :) ಅದನ್ನೇ ಗಾಂಧೀಜಿಯ ಮೂರು ಕೋತಿಗಳು ಪ್ರತಿಬಿಂಬಿಸುತ್ತವೆ. ಇದೇ ಕಾರಣಕ್ಕಾಗಿ ಮನಸ್ಸು ಕೋತಿಯಂತೆ ಎಂದು ಎಲ್ಲರೂ ಹೇಳುತ್ತಾರೆ...
ನಿಜ, ಮನಸ್ಸು ಒಂದು ದೊಡ್ಡ ಗಡವ :) ಬೇಡ ಅಂದಿದ್ದನ್ನೇ ಮಾಡಲು ಬಯಸುತ್ತದೆ. ಕೆಟ್ಟದರ ಕಡೆಗೇ ಹೆಚ್ಚು ಹೋಗುತ್ತದೆ. ಅದು ಏಕೆ ಹಾಗೆ ?  ವಿಚಾರ ಮಾಡಲು ಹೋದರೆ ಮನಸ್ಸು ಬಿಡುತ್ತಿಲ್ಲ. ಹೇಗಾದರೂ ಮನಸ್ಸು ಮಾಡಿ ಅದನ್ನು ತಿಳಿಯಲೇ ಬೇಕು ಅಂತ ಪ್ರಯತ್ನ ಪಟ್ಟೆ. ಕೊನೆಗೆ ತಿಳಿದಿದ್ದು ಏನೆಂದರೆ, "ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಅನ್ನೋ ಗಾದೆ. ಅರ್ಥ ಆಗ್ಲಿಲ್ಲ ಅಲ್ವ...? ಮನಸ್ಸು ಕೊಟ್ಟು ಓದ್ರೀ ಅರ್ಥ ಆಗತ್ತೆ.
ಒಳ್ಳೆತನ ಬೆಳೆಸಿಕೊಳ್ಳೋದಕ್ಕೆ ಸಾವಿರಾರು ವಿಘ್ನಗಳು, ಸಾವಿರಾರು ಅಡೆತಡೆಗಳು ಇದ್ದೆ ಇರತ್ತೆ. ಅದನ್ನೆಲ್ಲ ಮೆಟ್ಟಿ ನಿಲ್ಲಬೇಕು ಅಂದ್ರೆ ಅವನಿಗೆ ಒಂದು strong ಆದ ಮನಸ್ಸು ಇರಬೇಕು. ಅಂದ್ರೆ ಆ ಮನಸ್ಸು ಗಟ್ಟಿಯಾಗಿ ಇರಬೇಕು. ಎಂತಹ ಪರಿಸ್ಥಿತಿಯಲ್ಲೂ ಆ ಮನಸ್ಸು ಕುಗ್ಗಬಾರದು. ಆದರೆ ಅದೇ ಒಬ್ಬ ಮನುಷ್ಯ ಹಾಳಾಗೋದು ಎಷ್ಟು ಸುಲಭ ಅಲ್ವ ? ಹಾಳಾಗೋದಕ್ಕೆ ಲಕ್ಷಾಂತರ ದಾರಿಗಳು. ಎಲ್ಲಾ ಕಡೆಯೂ ಮನಸ್ಸು ಎಳೆಯುತ್ತದೆ. ಏಕೆಂದರೆ ಮನಸ್ಸು ಕಷ್ಟ ಪಡುವುದಕ್ಕೆ ಇಷ್ಟ ಪಡುವುದಿಲ್ಲ. ಸುಲಭವಾಗಿ ದುಷ್ಟತನದ ಬಲೆಗೆ ಮನಸ್ಸು ಬೀಳುತ್ತದೆ. ದುರ್ಬಲ ಮನಸ್ಸು ಇದ್ದರಂತೂ ಮುಗಿಯಿತು, ಸಂಪೂರ್ಣ ಬದುಕೇ ಹಾಳಾಗಬಹುದು. ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಆ ಮನಸ್ಸು.
ಅದಕ್ಕೆ ಮನೋನಿಗ್ರಹ ಮುಖ್ಯ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಏನೆಲ್ಲಾ ಸಾಧಿಸಬಹುದು. ಆದರೆ ಅದನ್ನು ಹೇಗೆ control ಮಾಡುವುದು ? ಇದೊಂದು ಗಂಭೀರ ಪ್ರಶ್ನೆ!
ಹಲವಾರು ದಾರಿಗಳಿವೆ. ಯೋಗ ಧ್ಯಾನ ಏಕಾಗ್ರಚಿತ್ತತೆಯನ್ನು ಹೆಚ್ಚಿಸುತ್ತವೆ. ಇದರಿಂದ ಮನಸ್ಸು ನಿಮ್ಮ ಹಿಡಿತಕ್ಕೆ ಬರುತ್ತದೆ!
( ನನ್ನ ಅನುಭವ ಅಲ್ಲ, ಕೇಳಿದ್ದು ). ಒಮ್ಮೆ ಈ ರೀತಿ ಪ್ರಯತ್ನ ಮಾಡಲು ಮನಸ್ಸು ಮಾಡಿ :) ಇರಲಿ ಸುಮ್ಮನೆ ಏನೋ ಹೇಳಿತು ಮನಸ್ಸು,
ಅದ್ಕೆ ಈ ಲೇಖನ. ಓದಿದಮೇಲೆ ದೊಡ್ಡ ಮನಸ್ಸು ಮಾಡಿ ನಿಮ್ಮ ಸಂದೇಶಗಳನ್ನು ತಿಳಿಸಿ :)

--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

4 comments:

  1. ಎಂಥಾ ಮಾತು ಹೇಳಿದೆ ನೀನು! ಕನಸು ಮನಸಿನಲ್ಲೂ ಇಂಥ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ! ತುಂಬಾ ಸಂತೋಷ ಆಯ್ತು ;)
    ಆದರೆ ಮನಸ್ಸು ಮಾಡಿದರೆ ಎಲ್ಲಾ ಸಾಧಿಸಬಹುದು. ಸುಮ್ಮನೆ ಹೊಗಳುವುದನ್ನು ಬಿಡು :P

    ReplyDelete
  2. ಅಂದ್ರೆ ಮನಸ್ಸು ಮಾಡಿದರೆ ನನ್ನ ಕನಸಿನಲ್ಲಿ ನಿಮ್ಮ ಮನಸ್ಸಿನ ಮಾಯೆ ಕಾಣಬಹುದೇ ??...:P
    ನಿದ್ದೆ ಜಾಸ್ತಿ ಮಾಡಿ ಕನಸು ಜಾಸ್ತಿ ಕಂಡು ಪ್ರಯತ್ನಿಸುತ್ತೇನೆ ..:P

    ReplyDelete
  3. ನನ್ನ ಮನಸ್ಸಿನ ಮಾಯೆಯನ್ನು ನಿನ್ನ ಕನಸಿನಲ್ಲಿ ಕಂಡು ಏನು ಮಾಡುವೆ!? ಈ ರೀತಿ ಸುಮ್ಮನೆ ಪ್ರಾಸಬಧ್ಧವಾಗಿ ಮಾತನಾಡಿ ಬೇರೆಯವರು ತಪ್ಪು ತಿಳಿಯುವಂತೆ ಮಾಡಬೇಡ! ನಿನ್ನ ಕನಸು ನನಸಾಗಲೆಂದು ಬಯಸು :P

    ReplyDelete