ಒಬ್ಬರನೊಬ್ಬರು ಅರಿಯದ ದುಗುಡದಿ ಶಿಕ್ಷಣದ ಜೀವನ
ಶುರುವಾಯ್ತು, ನಂತರ ಸ್ನೇಹದ ಬೆಸುಗೆಯ ಪರಿವರ್ತನ!
ಶುರುವಾಯ್ತು, ನಂತರ ಸ್ನೇಹದ ಬೆಸುಗೆಯ ಪರಿವರ್ತನ!
ನಮಗಿದೆ ಸು'ಮಧು'ರ ನೆನಪುಗಳೆಂಬ ಮರದ ಎಲೆಗಳು :)
ಆದರೆ, ದೂರವಾಗುವಾಗ ಕಣ್ಣಂಚಲಿ ಕಣ್ಣೀರಿನ ಮಾಲೆಗಳು!
ಬಂದದ್ದು ಬರಲಿ ಎದುರಿಸಲು 'ಗಜ' ಬಲವಿರಲಿ
ಸಾಧಿಸಬೇಕೆಂಬ ಗುರಿ,ಛಲ,ಹಂಬಲಗಳಿರಲಿ!
ವಿಘ್ನಗಳೆಲ್ಲ 'ಗಣೇಶ'ನ ದಯೆಯಿಂ ದೂರವಾಗಲಿ
'ಬಿಂದು'ವಿನಂತಿರುವ 'ವಿದ್ಯೆ'ಯು 'ಅನಂತ'ವಾಗಲಿ!
ಎಷ್ಟೇ ಕಷ್ಟಗಳು ಬಂದರೂ ಮನ 'ಜಗ್ಗ'ದಿರಲಿ
ದಿಟ್ಟತನದಿಂ ಎದುರಿಸುವ 'ಕೌಶಲ' ಸಿಗಲಿ
ಜ್ಞಾನ'ಜ್ಯೋತಿ'ಯು ಎಲ್ಲರಲಿ ಸದಾ ಬೆಳಗಲಿ
ಸ್ನೇಹಿತರ ಬಾಳು 'ಕುಸುಮ'ದಂತೆ ಅರಳಲಿ :)
ಯಶಸ್ಸಿಗೆ 'ಅಭಿನಂದ'ನೆಗಳ ಮಳೆಯಾಗಲಿ
ಮುಖದಲಿ 'ಚಂದ್ರ'ನ ಕಾಂತಿಯು ಬೆಳಗಲಿ!
'ಶೀಲ','ವಿನಯ'ವಂತಿಕೆಗಳು ಮೈಗೂಡಲಿ
ಕೊನೆಗೆ 'ಮುಕುಂದ'ನ 'ಕರಣ'ವ ಮರೆಯದಿರಲಿ! :)

good one badri!
ReplyDeletenanna manadalli ninna nenapu saaviraaru
ReplyDeleteninna kavanakke nanna hrudaya chooru chooru :P
devaru bhadravaada bhavishya kottu subhadravaada hendati sikki saubhaagya vaada sukhavannu badrinaatha nige kodali :)