ಕೆಲವೊಮ್ಮೆ ನಮಗೆ ನಾವು waste ಅಂತ ಅನ್ನಿಸುತ್ತದೆ. ನನಗೆ ಏನೂ ಬರುವುದಿಲ್ಲ, ನಂಗೆ ಏನಾದರೂ ಸಾಧಿಸಲು ಸಾಧ್ಯವಿಲ್ಲ ಎಂಬ ಹುಚ್ಚು ಭಾವನೆ ಉಂಟಾಗುತ್ತದೆ. ಅದರಿಂದ ಮನಸ್ಸು ಹಿಡಿತ ತಪ್ಪಿ depression ಎಂಬ ಮಹಾ ಭೂತ ಆವರಿಸಿಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಹೆಚ್ಚು ಯೋಚಿಸದೆ ಇನ್ನಿತರ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಆ depression ಎಂಬ ಭೂತವನ್ನು ಬಿಡಿಸಬಹುದು. ಅಂಥ ಕೆಲಸಗಳು ಹಲವಾರು. Inspirational videos ನೋಡುವುದು, ಅಂಥ situation ಅನ್ನು ಧೈರ್ಯವಾಗಿ ಎದುರಿಸಿದ ಮಹಾನ್ ವ್ಯಕ್ತಿಗಳ ಬಗ್ಗೆ ಓದುವುದು, ಯೋಗ, ಧ್ಯಾನ ಮೊದಲಾದವು. ವಿಜಯ ಕರ್ನಾಟಕ paper ಓದುವಾಗ ಅಂಥ ಒಂದು article ನನ್ನ ಕಣ್ಣಿಗೆ ಬಿತ್ತು. ಅದನ್ನು ಇಲ್ಲಿ post ಮಾಡುತ್ತಿದ್ದೇನೆ. ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಸಾಮರ್ಥ್ಯ ಇದ್ದೆ ಇರುತ್ತದೆ. ಅದನ್ನು ಬೆಳಕಿಗೆ ತರಲು ಕೊಂಚ ಶ್ರಮ ಪಡಬೇಕಷ್ಟೆ. ಅಂಥ ಶ್ರಮ ಪಡುವಾಗ ಕಷ್ಟಗಳು ಎದುರಾಗುವುದು ಸಹಜ. ಆದರೆ ಆ ಕಷ್ಟಗಳನ್ನೇ ನಿಮ್ಮ ಸಾಧನೆಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳುವುದು ನಿಮ್ಮ ಜಾಣ್ಮೆಯ ಕೆಲಸ. ಎದೆ ಗುಂದದೆ ಎದುರಿಸಿದರೆ ಎಲ್ಲವೂ ಸಾಧ್ಯ ಅಂತ ಈ article ಓದಿ ತಿಳಿಯಬಹುದು :)
CLICK HERE to view that article :)

No comments:
Post a Comment