ಮತ್ತೊಮ್ಮೆ ಮನಸ್ಸಿನ ಬಗ್ಗೆ ಹೆಚ್ಚು ತಿಳಿಯಬೇಕೆಂಬ ಹುಚ್ಚು ಹೆಚ್ಚಾಗುತ್ತಿರುವಾಗ, ವಿಜಯಕರ್ನಾಟಕ ಪತ್ರಿಕೆಯಲ್ಲಿ
ಮನಸ್ಸಿನ ಬಗ್ಗೆ ಮತ್ತೊಂದು article ಇತ್ತು. ತುಂಬಾ ಹಿತಕರ ಹಾಗು ಈಗಿನ ಪರಿಸ್ಥಿತಿಗೆ ಹೆಚ್ಚು ಉಪಯುಕ್ತ ಅನ್ನಿಸ್ತು.
ಅದನ್ನ ನನ್ನ ಮಾತಿನಲ್ಲಿ ನಿಮ್ಮ ಮುಂದೆ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು... ಒಮ್ಮೆ ಓದಿರಿ! ಇಷ್ಟ ಆಗಬಹುದು!
ಮನಸ್ಸಿನ ಬಗ್ಗೆ ಮತ್ತೊಂದು article ಇತ್ತು. ತುಂಬಾ ಹಿತಕರ ಹಾಗು ಈಗಿನ ಪರಿಸ್ಥಿತಿಗೆ ಹೆಚ್ಚು ಉಪಯುಕ್ತ ಅನ್ನಿಸ್ತು.
ಅದನ್ನ ನನ್ನ ಮಾತಿನಲ್ಲಿ ನಿಮ್ಮ ಮುಂದೆ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು... ಒಮ್ಮೆ ಓದಿರಿ! ಇಷ್ಟ ಆಗಬಹುದು!
ಕೆಲವೊಮ್ಮೆ ಹೀಗೆ ಯೋಚಿಸಿ ನೋಡಿ! ನೀವು ಆರೋಗ್ಯವಾಗಿದ್ದಿರಾ ? " ಓಹೋ " ಎಂಬುದು ನಿಮ್ಮ ಉತ್ತರವಾಗಿರಬಹುದು! ಆದರೆ... ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ., ಶಾರೀರಿಕವಾಗಿ , ಮಾನಸಿಕವಾಗಿ ಹಾಗು ಸಾಮಾಜಿಕವಾಗಿ ಸ್ವಾಸ್ಥ್ಯದಿಂದ ಇದ್ದೀರಾ?? ಈಗಿನ ಜಗತ್ತು, ಅದರ ಕ್ಷಿಪ್ರ ಬೆಳವಣಿಗೆ ಎಲ್ಲಾ ನೋಡಿದರೆ, ಕನಿಷ್ಠ ಪಕ್ಷ ಶಾರೀರಿಕವಾಗಿಯೂ ಮನುಷ್ಯರು ಸ್ವಾಸ್ಥ್ಯದಿಂದ ಇರಲಿಕ್ಕಿಲ್ಲ.
ಎಲ್ಲರೂ ಹೆಚ್ಚಾಗಿ ತಿಳಿದಿರುವಂತೆ ಕೇವಲ ತಿಂದು ಉಂಡು ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಲದು. ಹಲವರ ಕಲ್ಪನೆಯಂತೆ ಇದಷ್ಟೇ ಆರೋಗ್ಯವಲ್ಲ! ಮಾನಸಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ, ಆರ್ಥಿಕವಾಗಿ ಸ್ವಾಸ್ಥ್ಯದಿಂದ ಇದ್ದು ಪರಿಸರದೊಡನೆ ಹೊಂದಿಕೊಂಡು ಇರಬೇಕು. ಇದೇ ನಿಜವಾದ ಆರೋಗ್ಯ! ಈ ಆರೋಗ್ಯದಿಂದಲೇ ಯಶಸ್ಸು ಸಾಧ್ಯ! ಮೈ-ಮನಸ್ಸುಗಳು ಒಂದೇ ನಾಣ್ಯದ ಎರಡು ಮುಖಗಳು! ನಮ್ಮ ದೇಹದ ಎಲ್ಲಾ ಚಲನೆ ಚಟುವಟಿಕೆಗಳನ್ನು ನಮ್ಮ ಮನಸ್ಸು ನಿಯಂತ್ರಿಸುತ್ತದೆ. ದೇಹದ ಒಳ ಅಂಗಗಳ ಚಟುವಟಿಕೆಗಳು ಸ್ವಯಂಚಾಲಿತವಾದರೂ ನಮ್ಮ ಮನಸ್ಸು ಅವುಗಳ ಮೇಲೆ ಪ್ರಭಾವ ಬೀರಬಲ್ಲುದು! ಮೈ-ಮನಸ್ಸುಗಳ ಈ ಸಂಬಂಧ ಇನ್ನೂ ರಟ್ಟಾಗದಿರುವ ಗುಟ್ಟು !! :)
ನಮ್ಮ ದೇಶದಲ್ಲಿ ನಡೆಸಲಾದ ಅನೇಕ ಅಧ್ಯಯನಗಳ ಪ್ರಕಾರ, ಮಾನಸಿಕ ಅಸ್ವಾಸ್ಥ್ಯಕ್ಕೆ ಬಡವ-ಶ್ರೀಮಂತ , ಹೆಣ್ಣು-ಗಂಡು , ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ. ಅಚ್ಚರಿ ಎನಿಸಬಹುದು. ಪ್ರತಿಯೊಬ್ಬ ಮನುಷ್ಯನೂ ಒಂದಿಲ್ಲ ಒಂದು ರೀತಿಯ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುತ್ತಾನೆ. ಬಹುಪಾಲು ಜನರಿಗೆ ಅದು ಗೊತ್ತಿರುವುದೇ ಇಲ್ಲ. ಇನ್ನು ಸೂಕ್ತ ಸಲಹೆ,ಚಿಕಿತ್ಸೆ ದೂರದ ಮಾತು!
ದುರಂತ!
ಇನ್ನೂ ದುರಂತವೆಂದರೆ, ಇವರು ಹೀಗೆಯೇ ಕಾಯಿಲೆ ಮತ್ತು ಅಜ್ಞಾನದಿಂದ ನರಳುತ್ತ , ತಮಗೆ , ಮನೆಯವರಿಗೆ ಹಾಗು ಸಮಾಜಕ್ಕೆ ಹೊರೆಯಗುತ್ತಾರೆ! ಅವರ ಬುಧ್ಧಿ ಮಟ್ಟ ಕಡಿಮೆ ಆಗುತ್ತಾ ಹೋಗುತ್ತದೆ! ಜೀವನದ ಮೇಲೆ ಜಿಗುಪ್ಸೆ ಬಂದು ಅವರ ಜೀವನದ ಮಟ್ಟ ಕುಸಿದಿರುತ್ತದೆ! ಇವರು ವಿಚಿತ್ರ ವ್ಯಕ್ತಿಗಳು. (ನಾನೂ ವಿಚಿತ್ರನೇ ಬಿಡಿ!!!)... ಇವರಿಗೆ ಪ್ರಪಂಚ ಹಾಗು ಉಳಿದ ಜನರೆಲ್ಲಾ ವಿಚಿತ್ರವಾಗಿ ಕಾಣುತ್ತಾರೆ!

ಹಿಸ್ಟೆರಿಯ, ಉದ್ವಿಗ್ನತೆ, ನರದೌರ್ಬಲ್ಯ, ಚಿತ್ತದೌರ್ಬಲ್ಯ, ಖಿನ್ನತೆ, ಅಪಘಾತದ ಬಳಿಕ ಮನೋವಿಕಾರಗಳು, ಉನ್ಮಾದ, ವಿಷಾದ, ಅಪಸ್ಮಾರ, ಮಂಕುತನ, ನಿದ್ರಾಹೀನತೆ, ಕಾಮ ವಿಕಾರಗಳು ಇವೆಲ್ಲ ಮನೋರೋಗಗಳು! ದೀರ್ಘಕಾಲದ ಮನೋಕ್ಲೇಶ, ಮಾನಸಿಕ ಒತ್ತಡಗಳಿಂದ ಅಥವಾ ಅಹಿತಕಾರಿ ಹಾಗು ಆತಂಕವನ್ನುಂಟು ಮಾಡುವ ಪರಿಸರದಲ್ಲಿ ವಾಸಿಸುವುದರಿಂದ ಕಾಲಕ್ರಮೇಣ ದೇಹದ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ! ಇದಕ್ಕೆಲ್ಲ ಆನುವಂಶಿಕ ಅಂಶಗಳು, ವ್ಯಕ್ತಿಯ ಅಪೌಷ್ಟಿಕತೆ, ಜೀವನ ಶೈಲಿ, ರೋಗಕಾರಕ ಇತರ ಅಂಶಗಳೂ ಕುಮ್ಮಕ್ಕು ಕೊಡಬಹುದು! ಇಂಥಹ ರೋಗಗಳು ಮನಸ್ಸು-ದೇಹ ಎರಡನ್ನೂ ಹಾಳು ಮಾಡುತ್ತವೆ!
ಆದರೆ...
ಚಿಂತೆ ಬೇಡ. ಮನೋ ರೋಗಕ್ಕೆ ಮದ್ದಿಲ್ಲ ಎಂಬುದು ಎಷ್ಟೋ ಮಂದಿಯ ಮೂಢ ನಂಬಿಕೆ! ಮದ್ದುಂಟು! ವೈದ್ಯಕೀಯ ವಿಜ್ಞಾನದ ಮುನ್ನಡೆಯಿಂದಾಗಿ ಚಿಕಿತ್ಸಾ ತಜ್ಞರ ಪಡೆಯೇ ಇದೆ. ಇಂಥಹ ರೋಗಗಳಿಗೆ ಮದ್ದನ್ನು ನೀಡುವುದರ ಜೊತೆಗೆ, ಮನೋರೋಗಿಯನ್ನು ಸಂಬಂಧಿಸಿದ ಸರ್ವರೂ ಪ್ರೀತಿ, ಮಮತೆ, ವಾತ್ಸಲ್ಯದಿಂದ, ಮುದ್ದಿನಿಂದ, ಗೌರವದಿಂದ, ಹಾಗು ಹೆಚ್ಚಾಗಿ ಆತ್ಮವಿಶ್ವಾಸ ತುಂಬುವ ನಡವಳಿಕೆಯಿಂದ ಮನೋರೋಗಿಯನ್ನು ನೋಡಿಕೊಂಡರೆ ಆತ ಸ್ವಾಸ್ಥ್ಯವನ್ನು ಹೊಂದುತ್ತಾನೆ! ಅವನ ಮನಸ್ಸಿನ ಅಸ್ವಸ್ಥತೆಯ ಉರಿ ಆರಿ ಹೋಗಿ ಸ್ವಾಸ್ಥತೆಯ ಸಿರಿ ಅರಳುತ್ತದೆ :)
ಈ article ನ publish ಮಾಡುವ ಉದ್ದೇಶವೇನೆಂದರೆ, ಇದನ್ನು ಓದಿದ ಮೇಲೆ ಮನಸ್ಸಿಗೆ ಹಿತ ಅನ್ನಿಸಿ ಅವರಲ್ಲಿ ಆತ್ಮವಿಶ್ವಾಸದ ಚಿಗುರನ್ನು ಬೆಳೆಸುವುದು :)
God Bless You All :)
--
With regards:
«╬♥ßÁÐÁℛΞΞŃÁŤℋ ÁĹŐŐℛ♥╬«
With regards:
«╬♥ßÁÐÁℛΞΞŃÁŤℋ ÁĹŐŐℛ♥╬«

No comments:
Post a Comment